ಲಾಕ್‌ಡೌನ್ ಯಶಸ್ಸಿಗೆ ಶ್ರಮಿಸೋಣ : ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸೋಣ
Team Udayavani, May 9, 2021, 7:20 AM IST
ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್. ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕೆ ನೂರಾರು ಉಪಾಯಗಳಿವೆ. ಅವುಗಳನ್ನು ಪ್ರಯತ್ನಿಸೋಣ.
ನಾವು ಏನು ಮಾಡಬಹುದು?
1. ಪ್ರತೀ ಗ್ರಾಮದಲ್ಲೂ ಯುವ ಸಂಘಟನೆ ಗಳಿವೆ, ಸಮುದಾಯ ಸಂಘಟನೆಗಳಿವೆ. ಅವುಗಳು ತಮ್ಮ ಸದಸ್ಯರ ಹಾಗೂ ಊರಿನ ಕುಟುಂಬಗಳ ಗುಂಪುಗಳನ್ನು ರಚಿಸಿ, ಅಗತ್ಯ ಸಾಮಗ್ರಿಗಳನ್ನು ಮನೆಗೇ ಪೂರೈಸಬಹುದು.
2. ಇಬ್ಬರು ಸದಸ್ಯರ ಒಂದು ತಂಡಕ್ಕೆ ನಿಗದಿತ ಸಂಖ್ಯೆಯ ಮನೆಗಳನ್ನು ನೀಡಿ, ವಾಟ್ಸಪ್ ಗುಂಪು ರಚಿಸಿ, ಸಾಮಗ್ರಿ ಬೇಕಾದವರ ಮಾಹಿತಿ ಪಡೆದು ಮನೆ ಬಾಗಿಲಿಗೇ ಒದಗಿಸಬಹುದು.
3. ಸಾಮಾನ್ಯವಾಗಿ ಬೇಕಾಗುವ ದಿನಸಿ ಸಾಮಗ್ರಿ ಹಾಗೂ ಔಷಧಗಳಿಗೆ ಪ್ರತ್ಯೇಕ ಸದಸ್ಯರನ್ನು ನಿಯೋಜಿಸಿದರೆ ಒಳ್ಳೆಯದು.
4. ವಸತಿ ಸಮುತ್ಛಯಗಳ ಸೊಸೈಟಿಗಳು, ಸಂಘಗಳೂ ಇದನ್ನು ಕೈಗೊಂಡರೆ, ಎಲ್ಲ ರನ್ನೂ ಸೋಂಕಿನಿಂದ ರಕ್ಷಿಸಬಹುದು.
5. ಒಂದುವೇಳೆ ಕೆಲವು ಮನೆಗಳಿಗೆ ಈ ವ್ಯವಸ್ಥೆ ಸೀಮಿತಗೊಳಿಸಿಕೊಂಡರೂ ನೆರೆಹೊರೆಯವರು ವಾಟ್ಸಪ್ ಗುಂಪು ರಚಿಸಿ, ಎಲ್ಲರ ಪರವಾಗಿ ಒಬ್ಬಿಬ್ಬರೇ ಮಾರುಕಟ್ಟೆ ಹೋಗಿ ಸಾಮಾನುಗಳನ್ನು ತರುವುದೂ ಒಳ್ಳೆಯದೇ.
6. ಒಂದು ವಾರ, 15 ದಿನ, ತಿಂಗಳಿಗೆ ಬೇಕಾಗುವ ವಸ್ತುಗಳನ್ನು ಒಮ್ಮೆಲೆ ಖರೀದಿಸುವುದು ಸೂಕ್ತ. ಕಷ್ಟ ಎನಿಸುವವರು ಪ್ರತೀ ದಿನವೂ ಹೋಗದೆ ಮೂರು ದಿನಕ್ಕೊಮ್ಮೆ ಹೋಗುವುದು ಅಥವಾ ಇದಕ್ಕಾಗಿ ಅಕ್ಕಪಕ್ಕದವರ ಸಹಾಯ ಪಡೆಯುವುದು ಸೂಕ್ತ.
ವರ್ತಕರು, ವ್ಯಾಪಾರ ಮಳಿಗೆ ಗಳು ಏನು ಮಾಡಬಹುದು?
1. ವಾಟ್ಸಪ್, ಫೋನ್ ಮೂಲಕ ವಸ್ತುಗಳ ಪಟ್ಟಿ ಪಡೆದು ಮನೆಗೇ ಪೂರೈಸಬಹುದು.
2.ವಸ್ತುಗಳ ಪಟ್ಟಿಯನ್ನು ಮೊದಲೇ ಪಡೆದು ಕಟ್ಟಿಟ್ಟರೆ, ಗ್ರಾಹಕರು ಅಂಗಡಿ ಎದುರು ಕಾಯುವುದು ತಪ್ಪಲಿದೆ. ಇದರಿಂದ ಸೋಂಕಿಗೆ ಒಡ್ಡಿಕೊಳ್ಳುವ ಸಂದರ್ಭ ಕ್ಷೀಣಿಸಲಿದೆ.
3.ಗ್ರಾಹಕರು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿ. “ಮಾಸ್ಕ್ ಧರಿಸಿದವರೊಂದಿಗೆ ಮಾತ್ರ ವ್ಯವಹಾರ’ ಎಂದು ಹೇಳಿ. ನಿಯಮ ಪಾಲಿಸಿದರೆ ನೀವೂ ಕ್ಷೇಮ, ನಾವೂ ಕ್ಷೇಮ ಎಂಬುದನ್ನು ಖಚಿತಪಡಿಸಿ.
ಜನಪ್ರತಿನಿಧಿಗಳು ಏನು ಮಾಡಬೇಕು?
1.ತಮ್ಮ ವಿಧಾನಸಭಾ ಕ್ಷೇತ್ರ, ಪಂಚಾಯತ್ ಕ್ಷೇತ್ರವಾರು ಪೇಟೆ, ಮಾರುಕಟ್ಟೆಗಳಲ್ಲಿ ಜನರು, ಸಾಮಾಜಿಕ ಅಂತರ ನಿಯಮ ಪಾಲಿಸು ವಂತೆ ಕಟ್ಟುನಿಟ್ಟಾಗಿ ಎಚ್ಚರವಹಿಸಬೇಕು.
2. ತಮ್ಮ ಕಾರ್ಯಕರ್ತರ ತಂಡ ರಚಿಸಿ ನಿಗಾ ವಹಿಸುವುದಲ್ಲದೇ, ತಾವೂ ಆಗಾಗ್ಗೆ ಭೇಟಿ ನೀಡಿ ಹಾಗೂ ಸಹಾಯವಾಣಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರಬೇಕು.
3. ಜನಪ್ರತಿನಿಧಿಗಳೇ ತಮ್ಮ ಕಾರ್ಯಕರ್ತರ ತಂಡಗಳ ಮೂಲಕ, ಸಂಘಟನೆಗಳ ಸದಸ್ಯರ ಮೂಲಕ ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ಮುಟ್ಟಿಸಿ.
ಪಾಲಿಕೆ, ಪಂಚಾಯತ್‌ಗಳು, ಜಿಲ್ಲಾಡಳಿತ ಏನು ಮಾಡಬೇಕು?
1. ಪಾಲಿಕೆ ಮತ್ತು ಪಂಚಾಯತ್‌ಗಳು ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಗುಂಪುಗಳನ್ನು ರಚಿಸಿ, ಸ್ಥಳೀಯರ ದೈನಂದಿನ ಅಗತ್ಯಗಳನ್ನು ಪೂರೈಸಬೇಕು. ಮಂಗಳೂರು ಮಹಾನಗರಪಾಲಿಕೆ ಹಿಂದಿನ ಬಾರಿ ವಾರ್ಡ್ ಮಟ್ಟದಲ್ಲಿ ಹೋಮ್ ಡೆಲಿವರಿಗೆ ಪ್ರಯತ್ನಿಸಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅಗತ್ಯವಿದೆ.
2. ಅನಗತ್ಯವಾಗಿ ಪೇಟೆಯಲ್ಲಿ ಓಡಾಡು ವರನ್ನು ಪತ್ತೆ ಹಚ್ಚಿ ಮನವೊಲಿಸಿ ವಾಪಸು ಕಳುಹಿಸಬೇಕು. ಅದಕ್ಕಾಗಿ ಗ್ರಾಮೀಣ ಕಾರ್ಯಪಡೆಯ ಸದಸ್ಯರು, ಸಂಘಟನೆಗಳ ಸದಸ್ಯರು ಕ್ರಿಯಾಶೀಲವಾಗಬೇಕು.
3. ಪೇಟೆಯ ಬಾಗಿಲಲ್ಲೇ ತಡೆಗಳನ್ನು ಹಾಕಿ, ವಾಹನಗಳನ್ನು ನಿರ್ಬಂಧಿಸಿ, ಸರಕು ಪೂರೈಕೆ ವಾಹನಗಳಿಗಷ್ಟೇ ಅನುಮತಿ ಇರಬೇಕು. ಜತೆಗೆ ಮಾರುಕಟ್ಟೆ ಪ್ರವೇಶಿಸುವಲ್ಲೇ ಸ್ಯಾನಿ ಟೈಸರ್ ಬಳಕೆ ಕಡ್ಡಾಯಗೊಳಿಸಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶ ನಿಷೇಧಿಸಬೇಕು.
4. ನಗರದ ಪ್ರತೀ ವಾರ್ಡ್‌ನಲ್ಲಿ ಮೀನು -ಮಾಂಸ, ತರಕಾರಿ, ದಿನಸಿ ಸಹಿತ ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗಳಿಗೆ ತಲುಪಿಸ ಬಲ್ಲ ಸಾಮಾನ್ಯ ಹಾಗೂ ಸಣ್ಣ ಗಾತ್ರದ ಅಂಗಡಿ ಗಳ ಪಟ್ಟಿಯನ್ನು ಸ್ಥಳೀಯಾಡಳಿತದವರು ಜನರಿಗೆ ನೀಡಬೇಕು. ಅದರಿಂದ ಜನರು ತಮಗೆ ಬೇಕಾ ದವರಲ್ಲೇ ಸಾಮಗ್ರಿ ಪಡೆಯಬಹುದು. ಹೆಚ್ಚು ದರ ವಸೂಲಿಯಾಗದಂತೆ ಪಾಲಿಕೆ ಮತ್ತು ಪಂ.ಗಳು ಉಸ್ತುವಾರಿ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.