ವಿಟ್ಲ: ಎರಡು ಬಟ್ಟೆ ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲು
Team Udayavani, May 9, 2021, 2:10 PM IST
ವಿಟ್ಲ: ಕೋವಿಡ್-19 ಸೋಂಕು ಹರಡದಂತೆ ಸರ್ಕಾರವು ರೂಪಿಸಿರುವ ಸೂಚನೆಗಳನ್ನು ಹಾಗೂ ದ.ಕ.ಜಿಲ್ಲಾ ದಂಡಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೇ ಉಲ್ಲಂಘಿಸಿದ ವಿಟ್ಲ ಕಸಬಾ ಗ್ರಾಮದ, ಪುತ್ತೂರು ರಸ್ತೆಯಲ್ಲಿರುವ ಕ್ಯೂಬಿ ಮತ್ತು ಫಿಟ್ ಫ್ಯಾಷನ್ ಬಟ್ಟೆ ಅಂಗಡಿಗಳ ಮಾಲಕರು ಮೇ 7ರಂದು ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆದು ಗ್ರಾಹಕರಿಗೆ ಬಟ್ಟೆಯನ್ನು ಮಾರಾಟ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಜನರನ್ನು ನಿರ್ದಯವಾಗಿ ಹೊಡೆಯಬೇಡಿ : ಪೊಲೀಸರಿಗೆ ನಟ ಜಗ್ಗೇಶ್ ಮನವಿ
ಕ್ಯೂಬಿ ಬಟ್ಟೆ ಅಂಗಡಿಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದಾಳಿ ಮಾಡಿ 3500 ರೂ ದಂಡ ವಿಧಿಸಿದ್ದರು.
ಎರಡೂ ಅಂಗಡಿಗಳ ವಿರುದ್ಧ ವಿಟ್ಲ ಪ.ಪಂ.ಮುಖ್ಯಾಧಿಕಾರಿ ಮಾಲಿನಿ ಮತ್ತು ಸಿಬಂದಿಗಳ ತಂಡವು ಪೊಲೀಸರೊಂದಿಗೆ ದಾಳಿ ಮಾಡಿತ್ತು. ಕ್ಯೂಬಿ ಬಟ್ಟೆ ಅಂಗಡಿ ಮಾಲಕ ಎದುರುಗಡೆ ರೋಲಿಂಗ್ ಶಟರ್ ಮುಚ್ಚಿ, ಹಿಂಬಾಗಿಲನ್ನು ತೆರೆದು ಗ್ರಾಹಕರನ್ನು ಒಳಗೆ ಬರಮಾಡಿಕೊಂಡು ವ್ಯಾಪಾರ ಮಾಡಿದ್ದರೆ, ಫಿಟ್ ಫ್ಯಾಶನ್ ಮಾಲಕ ಎದುರುಗಡೆ ರೋಲಿಂಗ್ ಶಟರನ್ನು ಅರ್ಧ ತೆರೆದು ವ್ಯಾಪಾರ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.