ಧಾರವಾಡ : ಲಾಕ್‌ಡೌನ್ ಮಾರ್ಗಸೂಚಿ ಪೀಕಲಾಟ
ಸ್ಪಷ್ಟ ನಿರ್ದೇಶನ ಇಲ್ಲ ! ಗೊಂದಲದಲ್ಲಿ ಎಪಿಎಂಸಿ ಅಧಿಕಾರಿ-ವ್ಯಾಪಾರಸ್ಥರು
Team Udayavani, May 9, 2021, 3:13 PM IST
ವರದಿ : ಶಿವಶಂಕರ ಕಂಠಿ
ಹುಬ್ಬಳ್ಳಿ: ರಾಜ್ಯ ಸರಕಾರವು ಮೇ 10ರಿಂದ ಹದಿನಾಲ್ಕು ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದು, ಇದರಿಂದ ಎಪಿಎಂಸಿ ಅ ಧಿಕಾರಿಗಳು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಗೊಂದಲಕ್ಕೀಡಾಗಿದ್ದಾರೆ. ಸರಕಾರ ಒಂದೆಡೆ ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದಿದೆ. ಹೀಗಾಗಿ ವ್ಯಾಪಾರಸ್ಥರು ಎಪಿಎಂಸಿಗೆ ಬರಲು ನಮಗೆ ಪಾಸ್ ಕೊಡಿ ಎಂದು ಎಪಿಎಂಸಿ ಅ ಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಸರಕಾರ ತನ್ನ ಮಾರ್ಗಸೂಚಿಯಲ್ಲಿ ಎಲ್ಲೂ ಎಪಿಎಂಸಿ ಚಾಲೂ ಇದೆ ಎಂದು ತಿಳಿಸಿಲ್ಲ.
ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆದರೆ ಎಪಿಎಂಸಿ ವ್ಯಾಪಾರಸ್ಥರು ಮಾರಬಹುದು ಎಂದಿಲ್ಲ. ಯಾರಿಗೂ ಪಾಸ್ ಕೊಡುವ ಅವಶ್ಯಕತೆಯಿಲ್ಲವೆಂದು ನಿರ್ದೇಶಿಸಿದೆ. ಹೀಗಾಗಿ ವ್ಯಾಪಾರಸ್ಥರು ನಮಗೆ ಯಾವ ಗುರುತಿನ ಪತ್ರ ಇರುತ್ತವೆ? ನಾವು ಹೇಗೆ ಮಾರುಕಟ್ಟೆಗೆ ಬರಬೇಕೆಂದು ಅಧಿ ಕಾರಿಗಳೊಂದಿಗೆ ತಕರಾರು ಮಾಡುತ್ತಿದ್ದಾರೆ.
ಸರಕಾರ ಇನ್ನೊಂದೆಡೆ ತಾನು ಹೊರಡಿಸಿದ ಮಾರ್ಗ ಸೂಚಿಯಲ್ಲಿ ತರಕಾರಿ ಹೊರತುಪಡಿಸಿ ಯಾವುದೇ ವಸ್ತುಗಳ ಮಾರಾಟಕ್ಕೆ ಅವಕಾಶವಿಲ್ಲ. ತಳ್ಳುಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ. ಆದರೆ ಅದು ಎಪಿಎಂಸಿಯಲ್ಲಿ ವ್ಯಾಪಾರಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಬಹುದು, ಮಾರಾಟ ಮಾಡಬಹುದು ಎಂದು ಹೇಳಿಲ್ಲ. ಅದು ಹೊರಡಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟ ನಿರ್ದೇಶನ ಕೊಟ್ಟಿಲ್ಲ. ಜನತಾ ಕರ್ಫ್ಯೂಗಿಂತಲೂ ಹೆಚ್ಚಿನ ಸವಲತ್ತುಗಳನ್ನು ಲಾಕ್‌ಡೌನ್ ಸಂದರ್ಭದಲ್ಲಿ ನೀಡಿದೆ. ಇದರಿಂದ ಅಧಿ ಕಾರಿಗಳು ಸಹಿತ ಸರಕಾರದ ಹೊಸ ಮಾರ್ಗಸೂಚಿಯಿಂದ ಗೊಂದಲಕ್ಕೀಡಾಗಿದ್ದಾರೆ. ಇತ್ತ ವ್ಯಾಪಾರಸ್ಥರು ಸಹಿತ 14 ದಿನಗಳ ಕಾಲ ತಾವೇನು ಮಾಡಬೇಕೆಂಬ ಸಂಕಷ್ಟದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.