ಆರೆಸ್ಸೆಸ್‌ನಿಂದ ಇನ್ನಷ್ಟು ಐಸೋಲೇಷನ್‌ ಕೇಂದ್ರ


Team Udayavani, May 9, 2021, 3:13 PM IST

More Isolation Center

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾಸೋಂಕು ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೆ ಐಸೋಲೇಷನ್‌ ಬೆಡ್‌ಗಳ ಕೊರತೆಯೂ ಹೆಚ್ಚುತ್ತಿದ್ದು, ಈ ಕೊರತೆ ನಿಗಿಸಲು ಆರೆಸ್ಸೆಸ್‌ ಹಾಗೂ ಸೇವಾಭಾರತಿ ಹೆಚ್ಚೆಚ್ಚು ಐಸೋಲೇಷನ್‌ ಕೇಂದ್ರ ತೆರೆಯಲು ಪ್ರಯತ್ನಿಸುತ್ತಿದೆ.

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಷ್ಟ್ರೋತ್ಥಾನಪರಿಷತ್‌ನ ಬನಶಂಕರಿಯಲ್ಲಿರುವ ಶಾಲೆ ಹಾಗೂರಾಮಮೂರ್ತಿ ನಗರದಲ್ಲಿರುವ ಶಾಲೆಗಳನ್ನು ಐಸೋಲೇಷನ್‌ ಕೇಂದ್ರವಾಗಿ ಪರಿವರ್ತಿಸಲಾಗಿದೆ.ಹಾಗೆಯೇ ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿರುವಜನಸೇವಾ ವಿದ್ಯಾಕೇಂದ್ರದಲ್ಲೂ ಐಸೋಲೇಷನ್‌ಕೇಂದ್ರ ಆರಂಭಿಸಿದೆ.

ಇದರ ಜತೆಗೆ ಯಲಹಂಕ ದಲ್ಲಿರುವ ಮಂಗಳ ವಿದ್ಯಾಮಂದಿರ ಶಾಲೆಯಲ್ಲೂ ಐಸೋಲೇಷನ್‌ ಕೇಂದ್ರ ತೆರೆಯಲಾಗಿದೆ. ಈ ನಾಲ್ಕು ಐಸೋಲೇಷನ್‌ ಕೇಂದ್ರದಲ್ಲೂ ತಲಾ 60 ಐಸೋಲೇಷನ್‌ಬೆಡ್‌ ಕೊರೊನಾ ಸೋಂಕಿತರಿಗೆ ಲಭ್ಯವಿದೆ.

ಇನ್ನು ಹತ್ತು ಐಸೋಲೇಷನ್‌ ಕೇಂದ್ರ: ನಗರದ ಎಲ್ಲಭಾಗದಲ್ಲೂ ಕೊರೊನಾ ಸೋಂಕಿತರಿಗೆ ಅನುಕೂಲಆಗುವಂತೆ ಇನ್ನು ಸುಮಾರು 10 ಐಸೋಲೇಷನ್‌ಕೇಂದ್ರ ತೆರೆಯಲು ಆರೆಸ್ಸೆಸ್‌ ಹಾಗೂ ಸೇವಾಭಾರತಿಅಗತ್ಯ ಸ್ಥಳಗಳ ಹುಡುಕಾಟ ನಡೆಸುತ್ತಿದೆ. ವಸತಿ ಶಾಲೆ,ಕಲ್ಯಾಣ ಮಂಟಪ ಸೇರಿದಂತೆ ಸುಲಭವಾಗಿ ಐಸೋಲೇಷನ್‌ ಕೇಂದ್ರಗಳನ್ನು ಶೀಘ್ರವಾಗಿ ರಚಿಸಬಹುದಾದಸ್ಥಳಗಳನ್ನು ಹುಡುಕುತ್ತಿದ್ದೇವೆ ಎಂದು ಆರೆಸ್ಸೆಸ್‌ಬೆಂಗಳೂರು ಮಹಾನಗರ ಕಾರ್ಯವಾಹ ಶ್ರೀಧರ್‌ಮಾಹಿತಿ ನೀಡಿದರು.

ಐಸೋಲೇಷನ್‌ ಕೇಂದ್ರದಲ್ಲಿ ಏನೆಲ್ಲ ಇರಲಿದೆ: ಔಷಧ ಸರಬರಾಜು, ತಜ್ಞ ವೈದ್ಯರ ಮೂಲಕಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಮಾ ಲೋಚನೆಗೆ ವ್ಯವಸ್ಥೆ ಮಾಡುವುದು ಸೇರಿದಂತೆ ಎಲ್ಲರೀತಿಯ ಸೇವಾ ಕಾರ್ಯಗಳು ನಿರಂತರವಾಗಿ ನಡೆಯು ತ್ತಿದೆ. ಐಸೋಲೇಷನ್‌ ಕೇಂದ್ರಗಳ ಸಂಖ್ಯೆಹೆಚ್ಚಿದ್ದಷ್ಟು ಸೋಂಕಿತರಿಗೆ ಅನುಕೂಲ ಆಗಲಿದೆ. ಅಗತ್ಯ ಆರೈಕೆಯ ಜತೆಗೆ ಸಕಾರಾತ್ಮಕವಾದ ಅನೇಕ ಅಂಶಗಳು ಸಿಗಲಿವೆ.

ಇದೆಲ್ಲದರ ಜತೆಗೆ ಸೋಂಕಿತರಿಗೆಅಗತ್ಯವಾದ ಔಷಧೋಪಚಾರ, ಚಿಕಿತ್ಸೆ ಹಾಗೂ ಮಾರ್ಗದರ್ಶನಕ್ಕೆ ನುರಿತ ವೈದ್ಯರು ನೀಡಲಿದ್ದಾರೆಮತ್ತು ನರ್ಸ್‌ಗಳಿಂದ ಉತ್ತಮ ಆರೈಕೆ ಲಭ್ಯವಾಗಲಿದೆ.ಆರೋಗ್ಯಕ್ಕೆ ಅವಶ್ಯಕವಾದ ಕಷಾಯ, ಕುಡಿಯಲುಮತ್ತು ಸ್ನಾನಕ್ಕೆ ಬಿಸಿ ನೀರು, ಬೆಳಗ್ಗೆ ಉಪಾಹಾರ, ಕಾಫಿ,ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ, ರಾತ್ರಿಊಟ ಹಾಗೂ ಮಲಗುವ ಮೊದಲು ಅರಿಶಿಣಮಿಶ್ರಿತ ಹಾಲು ಸೋಂಕಿತರಿಗೆ ಸಿಗಲಿದೆ. ಬಿಸಿ ನೀರಿನಹಬೆ ತೆಗೆದುಕೊಳ್ಳಲು ಸೌಲಭ್ಯವೂ ಮಾಡಲಾಗಿದೆ.

ಅಗತ್ಯವಿದ್ದವರಿಗೆ ತುರ್ತು ಆಮ್ಲಜನಕದ ವ್ಯವಸ್ಥೆಮಾಡುವ ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಸೇವೆ ಕೂಡ ಲಭ್ಯವಿದೆ. ಸೋಂಕಿತರಿಗೆ ಮಾತ್ರ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್‌ ಪರೀಕ್ಷೆ ಮಾಡಿದ ನಂತರ ಸೋಂಕು ದೃಢಪಟ್ಟಿರುವ ಬಾಲಕರು ಸಹಿತವಾಗಿ ಹಿರಿಯ ನಾಗರಿಕರು ಐಸೋಲೇಷನ್‌ ಕೇಂದ್ರಕ್ಕೆ ಬರಬಹುದು. ಇದು ಐಸೋಲೇಷನ್‌ ಕೇಂದ್ರ ಆಗಿರುವುದರಿಂದ ಕೋವಿಡ್‌ನಿಂದ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವವರನ್ನು ಸೇರಿಸಿಕೊಳ್ಳುವುದಿಲ್ಲ( ತುರ್ತು ಆಸ್ಪತ್ರೆ ಸೇವೆ ಅಗತ್ಯಇರುವವರು) ಹಾಗೆಯೇ ಐಸೋಲೇಷನ್‌ಗೆ ಕೋವಿಡ್‌ ಸೋಂಕಿತರಿಗೆ ಮಾತ್ರ ವ್ಯವಸ್ಥೆ ಇರಲಿದೆ.ಅವರೊಂದಿಗೆ ಬರುವವರಿಗೆ ವ್ಯವಸ್ಥೆ ಇರುವುದಿಲ್ಲ ಎಂದು ಸೇವಾಭಾರತಿ ಮೂಲಗಳು ತಿಳಿಸಿವೆ.

 

ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.