ಮಹಾಮಾರಿಯಿಂದ ರಕ್ಷಣೆಗೆ ಜಾಗೃತಿಯೇ ಮದ್ದು
Team Udayavani, May 9, 2021, 9:17 PM IST
ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆಯ ಗಂಭೀರ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ನಮ್ಮ ಕುಟುಂಬದಿಂದಲೇ ಜಾಗೃತಿ ಪ್ರಾರಂಭಗೊಳ್ಳಬೇಕು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ಅವರು ಶನಿವಾರ “ಉದಯವಾಣಿ’ಯೊಂದಿಗೆ ಮಾತನಾಡಿ, ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರು ಸ್ವಲ್ಪ ದಿನಗಳ ಕಾಲ ದೂರ ದೂರ ಇರೋಣ, ಮಾಸ್ಕ್ ಹಾಕೋಣ, ಉಸಿರಾಟ ನಿಯಂತ್ರಿಸುವ ಶ್ವಾಸಕೋಶಕ್ಕೆ ಸಂಬಂ ಧಿಸಿದ ವ್ಯಾಯಾಮ ಮಾಡೋಣ, ಹೊಲಕ್ಕೆ ಅಥವಾ ಪರಿಸರದಲ್ಲಿ ಹೋಗಿ ದೈಹಿಕ ಶ್ರಮ ಪಡೋಣ ಎನ್ನುವ ಸಂಕಲ್ಪ ತೊಡಬೇಕು ಎಂದರು. ನಮ್ಮ ದೇಹಕ್ಕೆ ಆಕ್ಸಿಜನ್ ಸಿಗಬೇಕಾದರೆ ದೈಹಿಕ ಶ್ರಮ ಮಹತ್ವದ್ದಾಗಿದೆ. ನಾವು ದೇಹವನ್ನು ಎಷ್ಟು ದುಡಿಸುತ್ತೇವೆಯೋ ಅಷ್ಟು ಶಕ್ತಿ ನಮಗೆ ಬರುತ್ತದೆ. ಇದರಿಂದ ರೋಗ ನಮ್ಮಿಂದ ದೂರ ಇರುತ್ತದೆ. ಬೆಳಗ್ಗೆ, ಸಂಜೆ ಎರಡು ಗಂಟೆ ನಿಯಮಿತವಾಗಿ ಶ್ರಮದಾಯಕ ಕೆಲಸ ಮಾಡಿದರೆ ಶ್ವಾಸಕೋಶ ಬಲಗೊಳ್ಳುತ್ತವೆ. ಆಕ್ಸಿಜನ್ ವ್ಯವಸ್ಥೆ ಸರಿಹೋಗುತ್ತದೆ. ಉಸಿರಾಟ ಏರಿಳಿತಗಳಿಲ್ಲದೆ ನಿಯಮಿತವಾಗುತ್ತದೆ ಎಂದು ಹೇಳಿದರು.
ನಮ್ಮದು ಶೇ.80 ಕೃಷಿ ಅವಲಂಬಿತ ದೇಶ. ಶೇ.80 ಜನ ತಮ್ಮೂರಲ್ಲೇ ಇದ್ದು ಕೆಲಸ ಮಾಡಬೇಕು. ಅನವಶ್ಯಕ ನಗರ, ಪಟ್ಟಣ ವಲಸೆಗೆ ಕಡಿವಾಣ ಹಾಕಬೇಕು. ಸೋಂಕಿನ ಪಾಸಿಟಿವ್ ಬಂದರೂ ತೋರಿಸದೆ ಮುಚ್ಚಿಟ್ಟುಕೊಳ್ಳುವುದು ಆತ್ಮಹತ್ಯೆಗೆ ಸಮ. ಸೋಂಕಿತರು ಸ್ವತ್ಛಂದವಾಗಿ ತಿರುಗಾಡಿ ನೂರಾರು ಜನರಿಗೆ ಸೋಂಕು ತಗುಲುವವರೆಗೂ ಸುಮ್ಮನಿದ್ದು ಆಮೇಲೆ ಉಸಿರಾಟಕ್ಕೆ ತೊಂದರೆ ಆದಾಗ ಆಸ್ಪತ್ರೆಗೆ ಓಡುವುದು ಬೇಡ. ನಮ್ಮ ಮನೆಯಿಂದಲೇ ಜಾಗೃತಿ ಶುರುವಾದರೆ ಸರ್ಕಾರ, ಪೊಲೀಸರು, ವೈದ್ಯರು ಯಾರೂ ಬೇಕಾಗಿಲ್ಲ. ಇದನ್ನು ಜನತೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈಗಿನ ಪರಿಸ್ಥಿತಿಯಲ್ಲಿ ಅವಶ್ಯಕ ಸೇವೆ ಹೊರತುಪಡಿಸಿ ದೇಶದ ಒಟ್ಟಾರೆ ಸಂಚಾರ ವ್ಯವಸ್ಥೆಯನ್ನೇ ಬಂದ್ ಮಾಡಬೇಕು. ಸಾರಿಗೆ ಸಂಪರ್ಕ ಮೊದಲು ಬಂದ್ ಆಗಬೇಕು. ಅವಶ್ಯಕ ಸೇವೆ ಹೊತ್ತು ತರುವ ವಾಹನ ಹೊರತು ಪಡಿಸಿ ಮತ್ಯಾವುದೂ ರಸ್ತೆಗಿಳಿಯಬಾರದು. ಮೋಟಾರ್ ಬೈಕ್ ಬ್ಯಾನ್ ಮಾಡಬೇಕು. ನಡೆದುಕೊಂಡೇ ಎಲ್ಲ ಚಟುವಟಿಕೆ ನಿರ್ವಹಿಸುವ ಪದ್ಧತಿ ಬರಬೇಕು. ಈ ನಿಟ್ಟಿನಲ್ಲಿ ಮೇ 10ರಿಂದ ಸರ್ಕಾರ ಜಾರಿಗೊಳಿಸಲಿರುವ ಲಾಕ್‌ಡೌನ್ ಸ್ವಾಗತಾರ್ಹ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.