ರೈತ-ಕೂಲಿ ಕಾರ್ಮಿಕರಿಗೆ ಬಲ ತುಂಬಿದ ಜಲಾಮೃತ ಯೋಜನೆ
ತಾಲೂಕಿನ 11 ಗ್ರಾಪಂನಲ್ಲಿ ಜಾರಿ !ಅಂತರ್ಜಲ ಹೆಚ್ಚಳ
Team Udayavani, May 10, 2021, 11:02 AM IST
ವರದಿ: ಸಿ. ವೈ. ಮೆಣಶಿನಕಾಯಿ
ಬೈಲಹೊಂಗಲ: ನರೇಗಾ ಯೋಜನೆಯಡಿ ಕೃಷಿ ಇಲಾಖೆಯ ಜಲಾಮೃತ ಕಾರ್ಯಕ್ರಮದಲ್ಲಿ ತಾಲೂಕಿನ 11 ಗ್ರಾಪಂ ವ್ಯಾಪ್ತಿಯಲ್ಲಿ ಜಲಶಕ್ತಿ ಅಭಿಯಾನ ಪ್ರಯುಕ್ತ ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ ಮತ್ತು ನಿಂತ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ ಮಾಡುವುದಕ್ಕಾಗಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಕಾರ್ಯ ಹಾಗೂ ಹಳ್ಳಗಳಲ್ಲಿ ಹೂಳೆತ್ತುವ ಮೂಲಕ ಮಳೆ ನೀರನ್ನು ಹಿಡಿದಿಡಲು ಯತ್ನಿಸಲಾಗುತ್ತಿದೆ. ಆಲ್ಲದೇ ಯೋಜನೆ ದುಡಿಯುವ ಕೈಗಳಿಗೆ ಕೆಲಸ ನೀಡಿದೆ.
ಹನಿ ನೀರನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುತ್ತೇವೆ ಎಂಬುದು ಜಲಾಮೃತ ಕಾರ್ಯಕ್ರಮದ ಘೋಷಣೆಯಾಗಿದ್ದು, ನೀರಿನ ಮಿತವ್ಯಯ, ಪರಿಸರ ಸಂರಕ್ಷಣೆ ಜಲಾಮೃತ ಕಾರ್ಯಕ್ರಮದಲ್ಲಿ ಸೇರಿದೆ.
ಜಲಾಮೃತ ಯೋಜನೆ ಏನು?: ರಾಜ್ಯದಲ್ಲಿನ ಬರಪರಿಸ್ಥಿತಿಯನ್ನು ಎದುರಿಸಲು 2019-20ನೇ ಸಾಲಿನ ಬಜೆಟ್‌ನಲ್ಲಿ 2019ನ್ನು ಜಲವರ್ಷ ಎಂದು ಘೋಷಣೆ ಮಾಡಲಾಯಿತು. ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಹಸಿರೀಕರಣವನ್ನು ಕೇಂದ್ರವಾಗಿಟ್ಟುಕೊಂಡು ಸುಮಾರು 2000 ಜಲಸಂರಕ್ಷಣೆ ಕಾಮಗಾರಿಗಳನ್ನು ಮುಂಬರುವ 2 ವರ್ಷಗಳಲ್ಲಿ ಅನುಷ್ಠಾನಗೊಳಿಸುವ ಉದ್ದೇಶವಿಟ್ಟುಕೊಂಡು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಅನುಷ್ಠಾನ ಇಲಾಖೆಗಳು ಸಣ್ಣ ನೀರಾವರಿ ಕೆರೆಗಳು, ಕಲ್ಯಾಣಿ, ಪುಷ್ಕರಣಿ, ಕುಂಟೆ, ಕಟ್ಟೆಗಳು, ಗೋ ಕಟ್ಟೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡಲು ಜಲಮೂಲಗಳ ನಿರ್ಮಾಣ ಮಾಡುವುದು. ನೀರಿನ ಲಭ್ಯತೆ ಮತ್ತು ಮಿತ ಬಳಕೆ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಉದ್ದೇಶ ಈ ಯೋಜನೆಗಿದೆ.
11 ಗ್ರಾಪಂನಲ್ಲಿ ಯೋಜನೆ ಜಾರಿ: ಪ್ರಸಕ್ತ ವರ್ಷದಲ್ಲಿ ಹಣಬರಹಟ್ಟಿ, ಮೇಕಲರ್ಮಡಿ, ಮಲ್ಲಾಪೂರ ಕೆಎನ್, ವಣ್ಣೂರ, ಭಾಂವಿಹಾಳ, ಅಮಟೂರ,ಬೆಳವಡಿ, ಬುಡರಕಟ್ಟಿ, ಹೊಳಿನಾಗಲಾಪೂರ, ತಿಗಡಿ ಮತ್ತು ಮರಡಿನಾಗಲಾಪೂರ ಗ್ರಾಪಂಗಳಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. 2021ರ ಏ.1ರಿಂದ ಏ.27ರವರೆಗೆ ಜಲಾಮೃತ ಯೋಜನೆಯಡಿ 31,000 ಮಾನವ ದಿನಗಳನ್ನು ಸೃಜನೆ ಮಾಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗಿದೆ.
ಕಳೆದ ವರ್ಷ 2020-21 ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ತಾಲೂಕಿನಲ್ಲಿ 2,00,415 ಮಾನವ ದಿನ ಸೃಜಿಸಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರತಿ ಎಕರೆ ಜಮೀನಿನಲ್ಲಿ 4ಹಿ2ಹಿ10 ಅಡಿಯ ಅಂದಾಜು 20 ಕಂದಕಗಳನ್ನು ನಿರ್ಮಾಣ ಮಾಡಬಹುದು. ಒಂದು ಕಂದಕದಲ್ಲಿ ಅಂದಾಜು 2500 ಲೀ. ಮಳೆ ನೀರನ್ನು ಸಂಗ್ರಹಿಸಬಹುದು. ಇದರಿಂದ 1 ಎಕರೆಯಲ್ಲಿ ಅಂದಾಜು 50,000 ಲೀ. ನೀರನ್ನು ಸಂಗ್ರಹಿಸಬಹುದಾಗಿದೆ. ಸದರಿ ಕಾಮಗಾರಿಗಳಿಂದ ರೈತರ ಜಮೀನಿಗೆ ಬದು ಆಗುವುದಲ್ಲದೇ ಮಣ್ಣು ಸಂರಕ್ಷಣೆ ಜೊತೆಗೆ ಅಂತರ್ಜಲ ಹೆಚ್ಚಿಸಲು ತುಂಬಾ ಸಹಕಾರಿಯಾಗಿದೆ.
ಪ್ರತಿ ರೈತರು ಬದು ನಿರ್ಮಾಣವನ್ನು ಕೃಷಿ ಇಲಾಖೆ ಜಲಾಮೃತ ಕಾರ್ಯಕ್ರಮದಡಿ ಅಥವಾ ಗ್ರಾಮ ಪಂಚಾಯತಿಯಡಿ ಪಡೆದುಕೊಂಡು ತಮ್ಮ ಜಮೀನಿನ ತೇವಾಂಶವನ್ನು ಸುಮಾರು ಶೇ. 15ರಷ್ಟು ಹಾಗೂ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ. 2020-21ನೇ ಸಾಲಿನಲ್ಲಿ ತಾಲೂಕಿನ 438 ರೈತರು ಈ ಯೋಜನೆ ಪ್ರಯೋಜನ ಪಡೆದು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಂಡಿದ್ದರೆ ಪ್ರಸಕ್ತ ಸಾಲಿನಲ್ಲಿ ಈವರೆಗೆ 65 ರೈತರು ಈ ಯೋಜನೆ ಲಾಭ ಪಡೆಯಲು ಮುಂದೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.