ಕೋವಿಡ್ ಸಂಕಷ್ಟಕ್ಕೆ ಮಿಡಿದ ಬಿಗ್ ಬಿ : 2 ಕೋಟಿ ನೆರವು ನೀಡಿದ ಅಮಿತಾಬ್
Team Udayavani, May 10, 2021, 11:20 AM IST
ನವದೆಹಲಿ: ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಹಲವಾರು ಮಂದಿ ಸೋಂಕಿತರ ಸಹಾಯಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮತ್ತು ಪತಿ ವಿರಾಟ್ ಕೊಹ್ಲಿ 2 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಇದೀಗ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಹಾಯ ಹಸ್ತ ಚಾಚಿದ್ದಾರೆ. ದೆಹಲಿಯ ಗುರುದ್ವಾರದ ರಕಬ್ ಗಂಜ್ ಕೋವಿಡ್ ಕೇರ್ ಸೆಂಟರ್ಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ನೀಡಿರುವ ಬಗ್ಗೆ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಟ್ವಿಟರ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ಕೋವಿಡ್ ಸೆಂಟರ್ ಇಂದು(ಸೋಮವಾರ) ಉದ್ಘಾಟನೆ ಆಗಲಿದ್ದು 400 ಹಾಸಿಗಳ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ 300 ಹಾಸಿಗಳ ವ್ಯವಸ್ಥೆಯನ್ನು ಅಮಿತಾಬ್ ಬಚ್ಚನ್ ಮಾಡಿರುವುದು ವಿಶೇಷವಾಗಿದೆ.
“Sikhs are Legendary
सिखों की सेवा को सलाम”
These were the words of @SrBachchan Ji when he contributed ₹2 Cr to Sri Guru Tegh Bahadur Covid Care FacilityWhile Delhi was grappling for Oxygen, Amitabh Ji called me almost daily to enquire about the progress of this Facility@ANI pic.twitter.com/ysOccz28Fl
— Manjinder Singh Sirsa (@mssirsa) May 9, 2021
ವಿದೇಶದಿಂದ ಕೋವಿಡ್ ಕೇರ್ ಸೆಂಟರ್ ಗೆ ಆಕ್ಸಿಜನ್ ಪೂರೈಕೆಯಾಗುವಂತೆ ಅಮಿತಾಭ್ ಬಚ್ಚನ್ ನೋಡಿಕೊಂಡಿದ್ದಾರೆ ಎಂದು ಸಿರ್ಸಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.