ವಿವಿಧೆಡೆ ಅನಧಿಕೃತ ಕ್ಲಿನಿಕ್ ಮೇಲೆ ದಾಳಿ
ಅಳವಂಡಿಯ 5 ಕ್ಲಿನಿಕ್ ಮೇಲೆ ದಾಳಿ ! ದಾಖಲೆ ಪರಿಶೀಲಿಸಿ ಆಸ್ಪತ್ರೆ ಸೀಜ್ ಮಾಡಿದ ಅಧಿಕಾರಿಗಳು
Team Udayavani, May 10, 2021, 12:20 PM IST
ಕೊಪ್ಪಳ: ಕೋವಿಡ್ ಸೋಂಕು ಉಲ್ಬಣಕ್ಕೆ ನಕಲಿ ವೈದ್ಯರೇ ಕಾರಣ ಎಂದು ಜಿಲ್ಲಾಡಳಿತ ನಿರ್ಧರಿಸಿ ವಿವಿಧೆಡೆ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸುತ್ತಿದ್ದು, ಕೊಪ್ಪಳ ತಾಲೂಕಿನ ಅಳವಂಡಿಯ ಐದು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ.
ಬಹುಪಾಲು ಸೋಂಕಿತರು ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸಿ ಚಿಕಿತ್ಸೆ ಪಡೆಯದೇ ಸ್ಥಳೀಯ ಅನಧಿಕೃತ ಕ್ಲಿನಿಕ್ ಹಾಗೂ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ತೀವ್ರ ಏರುಪೇರಾದ ವೇಳೆಗೆ ಕೊನೆಯ ಹಂತಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ವೇಳೆ ಸಾವು-ನೋವು ಹೆಚ್ಚು ಸಂಭವಿಸುತ್ತಿವೆ ಎನ್ನುವ ಮಾಹಿತಿ ಅರಿತ ಜಿಲ್ಲಾಡಳಿತವು ಕೆಲ ಅನಧಿಧೀಕೃತ ಕ್ಲಿನಿಕ್‌ಗಳ ಮೇಲೂ ದಾಳಿ ನಡೆಸುತ್ತಿದೆ.
ತಾಲೂಕಿನ ಪೈಕಿ ಅಳವಂಡಿಯ ಐದು ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯ ಇಲಾಖೆ, ಪೊಲೀಸರ ಅಧಿ ಕಾರಿಗಳ ತಂಡವು ದಾಳಿ ನಡೆಸಿದೆ. ಐವರು ಆಯುರ್ವೇದ ವೈದ್ಯರಾಗಿದ್ದು, ಅದರಲ್ಲಿ ಇಬ್ಬರು ವೈದ್ಯರು ಆರೋಗ್ಯ ಇಲಾಖೆಯ ಅನುಮತಿ ಪಡೆಯದೇ ಕ್ಲಿನಿಕ್ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ಕೂಡಲೇ ಅನುಮತಿ ಪಡೆಯುವಂತೆಯೂ ನೋಟಿಸ್ ನೀಡಲಾಗಿದೆ.
ನಾಲ್ವರು ನಕಲಿ ವೈದ್ಯರ ವಿರುದ್ಧ ಕೇಸ್ ಕುಷ್ಟಗಿ:
ವೈದ್ಯಕೀಯ ಪದವಿ ಪಡೆಯದೇ, ಭಾರತೀಯ ವೈದ್ಯಕೀಯ ಕಾಯ್ದೆಯಲ್ಲಿ ನೋಂದಣಿಯಾಗದೇ ವೈದ್ಯಕೀಯ ಸೇವೆ ನೀಡುತ್ತಿದ್ದ ತಾಲೂಕಿನ ನಾಲ್ವರು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಹಶೀಲ್ದಾರ್ ಎಂ. ಸಿದ್ದೇಶ, ತಾಲೂಕು ವೈದ್ಯಾ ಧಿಕಾರಿ ಡಾ| ಆನಂದ ಗೋಟೂರು ನೇತೃತ್ವದಲ್ಲಿ ನಕಲಿ ವೈದ್ಯಕೀಯ ಕ್ಲಿನಿಕ್ ಮೇಲೆ ದಾಳಿ ನಡೆಸಲಾಯಿತು.
ತಾವರಗೇರಾದ ವಿಜಯಲಕ್ಷ್ಮೀ ಕ್ಲಿನಿಕ್‌ನ ನಕಲಿ ವೈದ್ಯ ಶರಣಪ್ಪ ಕೂಡ್ಲೆಪ್ಪ ರೊಟ್ಟಿ, ಸಂಗಮೇಶ್ವರ ಕ್ಲಿನಿಕ್‌ನ ವೈದ್ಯ ರಮೇಶ ಶರಣಪ್ಪ ಬಂಡರಗಲ್ಲ, ಗುರುಕೃಪಾ ಕ್ಲಿನಿಕ್ ವೈದ್ಯ ರಫಿಕ್ ಖಾಜಾಹುಸೇನ್ ತಹಶೀಲ್ದಾರ್, ದೋಟಿಹಾಳದ ಕಲ್ಯಾಣಮಠ ಕ್ಲಿನಿಕ್‌ನ ಸಂತೋಷ ಭೋಜಪ್ಪ ಬಾಪರಿ ವಿರುದ್ಧ ದೂರು ದಾಖಲಾಗಿದೆ. ಈ ನಕಲಿ ವೈದ್ಯರು ಭಾರತೀಯ ವೈದ್ಯಕೀಯ ಕಾಯ್ದೆಯನ್ವಯ ನೋಂದಣಿಯಾಗದೇ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಸ್ಪಷ್ಟ ಉಲ್ಲಂಘನೆ ಹಿನ್ನೆಲೆಯಲ್ಲಿ ಹಾಗೂ ಕೊರೊನಾ ವೈರಸ್ ಹರಡುವುದು ಗೊತ್ತಿದ್ದರೂ, ನಿರ್ಲಕ್ಷÂ ವಹಿಸಿದ ಹಿನ್ನೆಲೆಯಲ್ಲಿ ಕುಷ್ಟಗಿ ಹಾಗೂ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.