ಶ್ರೀಲಂಕಾ ವಿರುದ್ಧ ಸರಣಿ: ವಿರಾಟ್, ರೋಹಿತ್, ಬುಮ್ರಾ ಸೇರಿ ಸೀನಿಯರ್ಸ್ ಗೆ ಇಲ್ಲ ಅವಕಾಶ!
Team Udayavani, May 10, 2021, 12:39 PM IST
ಮುಂಬೈ: ಕೋವಿಡ್ ಕಾರಣದಿಂದ 14 ನೇ ಆವೃತ್ತಿಯ ಐಪಿಎಲ್ ಕೂಟ ಸದ್ಯ ಅಮಾನತಾಗಿದೆ. ಹೀಗಾಗಿ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ನತ್ತ ಗಮನ ಹರಿಸುತ್ತಿದೆ. ಮುಂದಿನ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಿಗದಿತ ಓವರ್ ಕ್ರಿಕೆಟ್ ಸರಣಿ ನಡೆಸಲು ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದು, ಮುಂದಿನ ಜುಲೈನಲ್ಲಿ ಹೊಸ ಸರಣಿ ಆಯೋಜಿಸಲು ಯೋಜನೆ ರೂಪಿಸುತ್ತಿದ್ದೇವೆ. ಏಕದಿನ ಮತ್ತು ಟಿ20 ಸರಣಿ ನಡೆಸಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ವಿದೇಶಿ ಐಪಿಎಲ್ ಇಲೆವೆನ್ ರಚಿಸಿದ ಆಕಾಶ್ ಚೋಪ್ರಾ: ಆರ್ ಸಿಬಿಯ ಇಬ್ಬರಿಗೆ ಸ್ಥಾನ
ಆದರೆ ಈ ಸರಣಿಯಲ್ಲಿ ಭಾರತ ತನ್ನ ಪ್ರಮುಖ ತಂಡವನ್ನು ಆಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅದೇ ಸಮಯಲ್ಲಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್ ನಲ್ಲಿ ಇರಲಿದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಿರಿಯರನ್ನು ಹೊರತಾದ ತಂಡವನ್ನು ಶ್ರೀಲಂಕಾ ಸರಣಿಗೆ ಆಯ್ಕೆ ಮಾಡಲಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ.
ಶಿಖರ್ ಧವನ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ದೀಪಕ್ ಚಾಹರ್, ಯುಜುವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್ ಮುಂತಾದವರು ಈ ತಂಡದಲ್ಲಿ ಆಡಬಹುದು. ಆ ವೇಳೆ ಗುಣಮುಖನಾದರೆ ಶ್ರೇಯಸ್ ಅಯ್ಯರ್ ಕೂಡಾ ಲಂಕಾ ವಿರುದ್ಧ ಸರಣಿ ಅಡಬಹುದು.
ಇದನ್ನೂ ಓದಿ: ತವರು ಸೇರಿದ ಮುಂಬೈ ಇಂಡಿಯನ್ಸ್ ಆಟಗಾರರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.