ಮಹರ್ಷಿ ಕಾರ್ವೆ ಸ್ತ್ರೀ ಶಿಕ್ಷಣ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್‌ನಿಂದ ಮಾದರಿ ಸೇವೆ
Team Udayavani, May 10, 2021, 1:18 PM IST
ಪುಣೆ: ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ನಗರದ ಮಹರ್ಷಿ ಕಾರ್ವೆ ಸ್ತ್ರೀ ಶಿಕ್ಷಣ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್ ಮಾದರಿ ಸಂಸ್ಥೆಯಾಗಿ ಸೇವೆ ಸಲ್ಲಿಸುವುದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಮಹಿಳಾ ಶಿಕ್ಷಣಕ್ಕಾಗಿ ಸ್ಥಾಪನೆಯಾದ ಸಮರ್ಥ್ ಭಾರತ್ ಯೋಜನೆ ಮಹರ್ಷಿ ಕಾರ್ವೆ ಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಗುಡಿಪಾಡ್ವದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜನಕಲ್ಯಾಣ್ ಸಮಿತಿಯ ಸಹಕಾರದೊಂದಿಗೆ ಕೊರೊನಾ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದೆ. ಸಹ್ಯಾದ್ರಿ ಆಸ್ಪತ್ರೆಯ ತಜ್ಞ ವೈದ್ಯರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂರು ಪಾಳಿಯಲ್ಲಿ ಕೆಲಸ ಮಾಡುವ ಎಂಟು ವೈದ್ಯರು ಮತ್ತು 25 ಸ್ವಯಂ ಸೇವಕರು ಸೋಂಕಿತರಿಗೆ ವೈದ್ಯಕೀಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿ¨ªಾರೆ. ಅಗತ್ಯವಿದ್ದರೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಯೋಜಿಸಲಾಗಿದೆ ಎಂದು ಕೇಂದ್ರದ ಸಂಯೋಜಕ ಮಹೇಶ್ ಪೋಹ್ನಕರ್ ಅವರು ಹೇಳಿದರು.ರೋಲ್ ಮಾಡೆಲ್ ಸಂಸ್ಥೆಪ್ರತಿದಿನ ಬೆಳಗ್ಗೆ ಚಹಾ-ಉಪಹಾರ, ಬಳಿಕ ಪ್ರಾಣಾಯಾಮ ಮತ್ತು ನಗೆ ಯೋಗ, ವೈದ್ಯರ ನಿಯಮಿತ ತಪಾಸಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಖನ್ನತೆಗೆ ಒಳಗಾದವರಿಗೆ ತಜ್ಞರ ಸಮಾಲೋಚನೆ, ಭೋಜನ ಈ ಕೊರೊನಾ ಆರೈಕೆ ಕೇಂದ್ರಕ್ಕೆ ದಾಖಲಾದ ಸೋಂಕಿತರ ದೈನಂದಿನ ದಿನಚರಿಯಾಗಿದೆ.ವಿವಿಧ ಸಂಸ್ಥೆಗಳ ಸಹಕಾರಮಹರ್ಷಿ ಕಾರ್ವೆ ಶ್ರೀ ಶಿಕ್ಷಣ ಸಂಸ್ಥೆಯ ಕೊರೊನಾ ಆರೈಕೆ ಕೇಂದ್ರವು ಪುಣೆ ಮಹಾನಗರ ಪಾಲಿಕೆ, ವಿವೇಕ್ ವ್ಯಾಸ್ಪೀತ, ಪಿಪಿಸಿಆರ್, ಸಹ್ಯಾದ್ರಿ ಆಸ್ಪತ್ರೆ, ಲೋಹಿಯಾ ಪರಿವಾರದ ಶ್ರೀ ಮುಕುಂದ್ ಭವನ ಟ್ರಸ್ಟ್, ಲಕ್ಷ್ಮೀನಾರಾಯಣ ದೇವಸ್ತಾನ ಟ್ರಸ್ಟ್, ಪರಿಮಲ್ ಮತ್ತು ಪ್ರಮೋದ್ ಚೌಧರಿ ಪ್ರತಿಷ್ಠಾನದ ಸಹಯೋಗದಿಂದ ಕಾರ್ಯನಿರ್ವಹಿಸುತ್ತಿದೆ.
ಒಂದು ಕೋಣೆಯಲ್ಲಿಮೂರು ಮಂದಿ ಸೋಂಕಿತರುಕಾರ್ವೆ ನಗರದ ಬಯಾ ಕಾರ್ವೆ ಹಾಸ್ಟೆಲ್‌ನಲ್ಲಿ ಪ್ರಾರಂಭವಾದ ಕೇಂದ್ರವು 450 ಹಾಸಿಗೆಗಳನ್ನು ಹೊಂದಿದೆ. ಸಾಮಾಜಿಕ ಅಂತರ ನಿಯಮವನ್ನು ಅನುಸರಿಸುವ ಉದ್ದೇಶದಿಂದ 3 ಮಂದಿ ಸೋಂಕಿತರಿಗೆ ಒಂದೇ ಕೋಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೋಗಲಕ್ಷಣಗಳಿಲ್ಲದ, ಆದರೆ ಮನೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲದ ರೋಗಿಗಳಿಗೆ ಈ ಕೇಂದ್ರವು ಉಪಯುಕ್ತವಾಗಿದೆ.ಕೇಂದ್ರದ ವೈಶಿಷ್ಟ್ಯಗಳುಸಹ್ಯಾದ್ರಿ ಆಸ್ಪತ್ರೆಯ ವೈದ್ಯರು ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಾಗರೂ ಕರಾಗಿರುತ್ತಾರೆ. ಸ್ವಯಂಸೇವಕರು ಕೇಂದ್ರದಲ್ಲಿ ಸಂಪೂರ್ಣವಾಗಿ ಸ್ವಯಂಪ್ರೇರಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗಿದೆ. ಸ್ವಯಂಸೇವಕರನ್ನು ಎಂಟು ದಿನಗಳವರೆಗೆ ಕೆಲಸ ಮಾಡಿದ ಬಳಿಕ ಎಂಟು ದಿನಗಳವರೆಗೆ ಕ್ಯಾರಂಟೈನ್ ಗೊಳಿಸಲಾಗುತ್ತಿದೆ.ಯುವ ಸ್ವಯಂ ಸೇವಕರು ಈ ಸಂಸ್ಥೆಯಲ್ಲಿ ಹೊಸ ಗುಣಮಟ್ಟದ ಸೇವೆಯನ್ನು ನೀಡುತ್ತಿ¨ªಾರೆ. ವೈದ್ಯರಿಗೆ ಸಹಾಯ ಮಾಡಲು ಪ್ರತಿ ಮೂರು ಪಾಳಿಯಲ್ಲಿ 25 ಸ್ವಯಂ ಸೇವಕರ ಮಂಡಳಿಯನ್ನು ಸ್ಥಾಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.