ರಾಜ್ಯದಲ್ಲಿ ಲಾಕ್‌ಡೌನ್‌ ಆರಂಭ, ವಾಣಿಜ್ಯ ವಹಿವಾಟು ಪೂರ್ಣ ಸ್ತಬ್ಧ : ಲಾಠಿ ಬಳಕೆಗೆ ಕಡಿವಾಣ


Team Udayavani, May 11, 2021, 7:30 AM IST

ರಾಜ್ಯದಲ್ಲಿ ಲಾಕ್‌ಡೌನ್‌ ಆರಂಭ, ವಾಣಿಜ್ಯ ವಹಿವಾಟು ಪೂರ್ಣ ಸ್ತಬ್ಧ : ಲಾಠಿ ಬಳಕೆಗೆ ಕಡಿವಾಣ

ಬೆಂಗಳೂರು: ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳನ್ನು ತರಲು ವಾಹನ ಕೊಂಡೊಯ್ಯಬೇಕೇ ಅಥವಾ ಬೇಡವೇ ಎಂಬ ಗೊಂದಲಗಳ ಮಧ್ಯೆ ರಾಜ್ಯದಲ್ಲಿ 14 ದಿನಗಳ ಕಠಿನ ಕರ್ಫ್ಯೂ ಆರಂಭವಾಗಿದೆ.

ತರಕಾರಿ, ದಿನಸಿ ತರಲು ವಾಹನದಲ್ಲಿ ಬಂದವರಿಗೆ ಪೊಲೀಸರು ಲಾಠಿ ಏಟು ಕೊಟ್ಟದ್ದಷ್ಟೇ ಅಲ್ಲ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಾಹನಗಳ ಓಡಾಟಕ್ಕೆ ಗ್ರಾಮೀಣ ಪ್ರದೇಶದಲ್ಲೂ ಅಡ್ಡಿ ಮಾಡಿದ್ದು, ಭಾರೀ ಸಮಸ್ಯೆಯುಂಟಾಗಿದೆ. ಮೂರ್ನಾಲ್ಕು ಕಿ.ಮೀ. ನಡೆದು ದಿನಸಿ ವಸ್ತುಗಳು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ಸಾಧ್ಯವೇ, ಹೈನುಗಾರರು ಡೇರಿಗಳಿಗೆ ಹಾಲು ಹಾಕಲು ಸಾಧ್ಯವೇ ಎಂದು ಜನರು ಪ್ರಶ್ನಿಸಿದ್ದಾರೆ.
ಅಗತ್ಯ ವಸ್ತು ತರಲು ವಾಹನ ಬಳಸಬಹುದು: ಡಿಜಿಪಿ

ವಾಹನಗಳ ಮುಟ್ಟುಗೋಲು, ಚಾಲಕರಿಗೆ ಲಾಠಿ ಏಟು ಕೊಟ್ಟಿರುವುದು ವಿವಾದಕ್ಕೀಡಾದ ಕಾರಣ ನಿಗದಿತ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ತರಲು ವಾಹನ ಬಳಕೆ ಮಾಡಬಹುದು ಎಂದು ಡಿಜಿಪಿ ಪ್ರವೀಣ್‌ ಸೂದ್‌ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ನಗರ ಪ್ರದೇಶಗಳಲ್ಲಿ ಹತ್ತಿರದಲ್ಲೇ ಇರುವ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ತರಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಹತ್ತಿರದ ಸ್ಥಳಗಳಿಗೆ ಹೋಗಿ ತೆಗೆದುಕೊಂಡು ಬರಬಹುದು ಎಂದಿದ್ದಾರೆ. ಆದರೆ ಸುಮ್ಮಸುಮ್ಮನೆ ರಸ್ತೆಗಿಳಿಯಬೇಡಿ ಎಂದು ಸಲಹೆ ನೀಡಿದ್ದಾರೆ.

ಲಾಕ್‌… ಲಾಠಿ…
ವಾಹನ ರಸ್ತೆಗಿಳಿಯಬಾರದು ಎಂದು ಸರಕಾರ ಹೇಳಿದ್ದರಿಂದ ಜನ ಬಹಳಷ್ಟು ಸಮಸ್ಯೆ ಎದುರಿಸಬೇಕಾಯಿತು. ವಾಹನದಲ್ಲಿ ಬಂದವರಿಗೆ ಪೊಲೀಸರು ಲಾಠಿ ಪರಾಕ್ರಮ ತೋರಿಸಿದರು.

ಕಠಿನ ಕರ್ಫ್ಯೂನಿಂದಾಗಿ ರಾಜ್ಯ ಹೆಚ್ಚು ಕಡಿಮೆ ಸಂಪೂರ್ಣ ಸ್ತಬ್ಧವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೊಂಚ ಓಡಾಟ ಕಂಡುಬಂದಿತು. ತುರ್ತು ಹೊರತುಪಡಿಸಿ ವಾಹನ ಸಂಚಾರ ಬಂದ್‌ ಆಗಿತ್ತು. ಅನುಮತಿ ಹೊಂದಿರುವ ಕೈಗಾರಿಕೆ ಬಿಟ್ಟರೆ ಉಳಿದೆಲ್ಲವೂ ಬಾಗಿಲು ಮುಚ್ಚಿತ್ತು.

ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯಾವಕಾಶ ಮುಗಿಯುತ್ತಲೇ ರಸ್ತೆಗಿಳಿದ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು. ವಾಹನಗಳನ್ನು ಅಡ್ಡಗಟ್ಟಿ ಅನಗತ್ಯ ಸಂಚರಿಸು ತ್ತಿದ್ದವರ ಮೇಲೆ ಲಾಠಿ ಪ್ರಹಾರ ಮಾಡಿದರು. ನೂರಾರು ಕಾರು, ಬೈಕ್‌ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.

ಲಾಠಿ ಏಟಿಗೆ ಆಕ್ರೋಶ
ಜನರು ಮತ್ತು ವ್ಯಾಪಾರಿಗಳ ಮೇಲೆ ನಡೆಸಿದ ಲಾಠಿ ಚಾರ್ಜ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಹಾಪೂರವೇ ಹರಿದು ಬಂದಿತು. ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್‌ ಮಾಡುವ ಅಧಿಕಾರ ಪೊಲೀಸರಿಗೆ ಇದೆಯೇ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಗೃಹ ಸಚಿವರನ್ನು ಪ್ರಶ್ನಿಸಲಾಯಿತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಲಾಠಿ ಚಾರ್ಜ್‌ ಮಾಡಬೇಡಿ, ಪ್ರಕರಣ ದಾಖಲಿಸಿ, ವಾಹನ ವಶಕ್ಕೆ ಪಡೆಯಿರಿ ಎಂಬ ಸೂಚನೆಯನ್ನು ಜಿಲ್ಲಾ ಎಸ್‌ಪಿಗಳು ಮತ್ತು ಮಹಾ ನಗರದ ಡಿಸಿಪಿಗಳು ನೀಡಿದರು. ಆದರೆ ಅಷ್ಟು ಹೊತ್ತಿಗೆ ಹಲವೆಡೆ ಲಾಠಿ ರುಚಿ ಉಂಡ ಸಾರ್ವಜನಿಕರು ಹೈರಾಣಾಗಿದ್ದರು.

ಜಿಲ್ಲಾಡಳಿತಕ್ಕೆ ಅಧಿಕಾರ ಕೊಡಿ
ಒಂದು ಜಿಲ್ಲೆಯಲ್ಲಿ ಹೆಚ್ಚು, ಮತ್ತೂಂದು ಜಿಲ್ಲೆಯಲ್ಲಿ ಕಡಿಮೆ ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಇಡೀ ರಾಜ್ಯಕ್ಕೆ ಒಂದೇ ರೀತಿಯ ನಿರ್ಬಂಧ ಬೇಡ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ನಿರ್ಬಂಧ ನಿರ್ಧಾರಗಳನ್ನು ಆಯಾ ಜಿಲ್ಲಾಡಳಿತಗಳೇ ತೆಗೆದುಕೊಳ್ಳಲಿ ಎಂಬ ಸಲಹೆಗಳೂ ಇವೆ. ಬೆಂಗಳೂರಿಗೆ ಇರುವಂಥ ನಿಯಮವು ಅತ್ಯಂತ ಕಡಿಮೆ ಪ್ರಕರಣ ಇರುವ ಪ್ರದೇಶಕ್ಕೆ ಏಕೆ ಎಂಬುದು ಜನರ ಪ್ರಶ್ನೆ. ಹೀಗಾಗಿ, ಎಲ್ಲೆಡೆ ಒಂದೇ ನಿಯಮದ ಬದಲು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿರ್ಬಂಧ ವಿಧಿಸುವ ಅಧಿಕಾರವನ್ನು ಜಿಲ್ಲಾಡಳಿತಗಳಿಗೆ ನೀಡಲಿ ಎಂಬುದು ಉದಯವಾಣಿಯ ಆಶಯವೂ ಆಗಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.