ಕಠಿನ ಲಾಕ್‌ಡೌನ್ : ಪಡಿತರ ತರಲು ಗ್ರಾಮಾಂತರ ಭಾಗದ ಜನರ ಪ್ರಯಾಸ
Team Udayavani, May 11, 2021, 6:45 AM IST
ಕುಂದಾಪುರ: ಕಠಿನ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹಾಕಿದ್ದರಿಂದ ಗ್ರಾಮಾಂತರ ಭಾಗದಲ್ಲಿ ಪಡಿತರ ತರಲು, ಹಾಲಿನ ಡೈರಿಗೆ ಹೋಗಲು ಜನ ಪ್ರಯಾಸ ಪಡುವಂತಾಗಿದೆ. ವಾಹನಗಳಲ್ಲಿ ಹೋಗಲು ತಡೆಯೊಡ್ಡಿದ್ದರಿಂದ ಹತ್ತಾರು ಕಿ.ಮೀ. ನಡೆದುಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕುಂದಾಪುರದ ಅಮಾಸೆಬೈಲಿನ ಕೆಲಾ ಪರಿಸರದ ಜನ ಹಾಲಿನ ಡೈರಿಗೆ ಹೋಗಿ ಬರಲು ಒಟ್ಟಾರೆ 8 ಕಿ.ಮೀ. ನಡೆಯಬೇಕಾಗಿದೆ. ಇನ್ನು ಪಡಿತರ ತರಬೇಕಾದರೆ 16-18 ಕಿ.ಮೀ. ದೂರ ಕ್ರಮಿಸಬೇಕು. ಇಷ್ಟು ದೂರ ಬೆಳಗ್ಗೆ 6ರಿಂದ 10ರೊಳಗೆ ನಡೆದುಕೊಂಡು ಹೋಗಿ, 20-25 ಕೆ.ಜಿ. ಅಕ್ಕಿ, ಸಕ್ಕರೆ ತರಲು ಸಾಧ್ಯವೇ ಎನ್ನುವುದು ಜನರ ಪ್ರಶ್ನೆಯಾಗಿದೆ.
ಇದು ಕೇವಲ ಈ ಒಂದು ಊರಿನ ಸಮಸ್ಯೆಯಲ್ಲ. ರಾಜ್ಯದೆಲ್ಲೆಡೆ ಈ ಸಮಸ್ಯೆ ಎಲ್ಲ ಕಡೆ ಇರಬಹುದು. ಹಾಲಿನ ಡೈರಿ, ಪಡಿತರವಲ್ಲದೇ ಗ್ರಾಮೀಣ ಪ್ರದೇಶದ ಜನರು ಅಗತ್ಯ ವಸ್ತುಗಳ ಖರೀದಿಗೆ ಕಿ.ಮೀ.ಗಟ್ಟಲೆ ದೂರ ಕಾಲ್ನಡಿಗೆಯಲ್ಲಿ ಸಾಗುವುದು ಅನಿವಾರ್ಯವಾಗಿದೆ.
ಗಾಯದ ಮೇಲೆ ಬರೆ
ಸರಕಾರ, ಜಿಲ್ಲಾಡಳಿತಗಳು ಲಾಕ್‌ಡೌನ್ ಮಾರ್ಗಸೂಚಿ ಮಾಡುವಾಗ ಗ್ರಾಮೀಣ ಭಾಗದ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಿ. ನಮ್ಮಲ್ಲಿ ದಿನಸಿ ತರಬೇಕೆಂದ್ರೆ 10 ಕಿ.ಮೀ. ನಡೆದೇ ಹೋಗಬೇಕು. ಇನ್ನು ಮೆಡಿಕಲ್‌ಗೆ ಹೋಗಬೇಕು ಅಂದ್ರೆ 20 ಕಿ.ಮೀ ಕ್ರಮಿಸಬೇಕು. ಹೀಗಿರುವಾಗ ನಡೆದುಕೊಂಡೇ ಹೋಗಬೇಕು ಅಂತ ನಿಯಮ ರೂಪಿಸಿದ್ರೆ ಈ ಕಾಡಿನ ಮಧ್ಯೆ ಜನರು ಹೇಗೆ ಹೋಗಬೇಕು..? ಮೊದಲೇ ಮೂಲ ಸೌಕರ್ಯಗಳಿಲ್ಲದೆ ಒದ್ದಾಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆಯಬೇಡಿ.ಸರಕಾರ ಮತ್ತು ಜಿಲ್ಲಾಡಳಿತ ದಯವಿಟ್ಟು ಹಳ್ಳಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವರಿಗೆ ದಿನಸಿ, ಪಡಿತರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ತರುವುದಕ್ಕೆ ವಾಹನದ ಬಳಕೆಗೆ ಅವಕಾಶ ನೀಡಲಿ ಎನ್ನುವುದು ಗ್ರಾಮೀಣ ಪ್ರದೇಶದ ಜನರ ಒತ್ತಾಯವಾಗಿದೆ.
ಪಡಿತರಕ್ಕೆ ಅವಕಾಶ
ಗ್ರಾಮೀಣ ಭಾಗದಲ್ಲಿ ಪಡಿತರ ತರಲು ಸಾಕಷ್ಟು ದೂರವಿರುವುದರಿಂದ, ಪಡಿತರಕ್ಕೆ ಬಾಡಿಗೆ ವಾಹನ ಮಾಡಿಕೊಂಡು ಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಹೈನುಗಾರಿಕೆ, ಕೃಷಿ ಸಂಬಂಧಿ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ.
– ಜಿ. ಜಗದೀಶ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.