ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !
Team Udayavani, May 12, 2021, 8:00 AM IST
ಕೆಲವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಲೇ ಅದ್ಭುತ ಪ್ರಗತಿಯನ್ನು ಸಾಧಿಸುತ್ತಾರೆ. ಯಶಸ್ವಿ ವ್ಯಕ್ತಿ ಹತ್ತು ಬಾರಿ ವಿಫಲನಾದರೇ ಹನ್ನೊಂದನೇ ಭಾರೀ ಯಶಸ್ಸನ್ನು ಸಾಧಿಸುತ್ತಾನೆ. ಇನ್ನೂ ಕೆಲವರು ಮೂರು-ನಾಲ್ಕು ಭಾರೀ ಯಶಸ್ಸು ಪಡೆಯಲು ಪ್ರಯತ್ನಿಸಿ ಕೈಚೆಲ್ಲುತ್ತಾರೆ.
ಜಗದ್ವಿಖ್ಯಾತ ಹೋಂಡಾ ಅಟೋಮೊಬೈಲ್ ಸಾಮ್ರಾಜ್ಯದ ಸ್ಥಾಪಕ ಸೋಯಿಚಿರೋ ಹೋಂಡಾ. ಇಂದು ಹೋಂಡಾ ಅಂದರೇ ಸಾಮಾನ್ಯ ಜನರಿಗೂ ಪರಿಚಿತ. ಈ ಕಂಪೆನಿಯ ಕಾರು, ಬೈಕ್ ಎಲ್ಲವೂ ಜನರ ಮನಗೆದ್ದಿದೆ. ಈ ಸಂಸ್ಥೆ ಬೆಳೆಸಲು ಸೋಯಿಚಿರೋ ಪಟ್ಟ ಶ್ರಮ ಅಷ್ಟಿಸ್ಟಲ್ಲ. ಈತ ಕೆಳಮಧ್ಯಮವರ್ಗದಲ್ಲಿ 1906 ನವೆಂಬರ್ 17 ರಂದು ಜಪಾನ್ ನಲ್ಲಿ ಹುಟ್ಟಿದ.
ಈತನಿಗೆ ದಿನಕ್ಕೆ ಎರಡು ಹೊತ್ತು ಊಟ ಮಾತ್ರ ಸಿಗುತ್ತಿತ್ತು. ಆದರೇ ಚಿಕ್ಕವಯಸ್ಸಿನಿಂದಲೂ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂಬ ತುಡಿತ, ಆದಮ್ಯ ಬಯಕೆ ಹೋಂಡಾಗಿತ್ತು. ಆ ಕಾರಣದಿಂದಲೇ ಬಾಲ್ಯದಿಂದಲೇ ಯಂತ್ರೋಪಕರಣಗಳಲ್ಲಿ ಆಸಕ್ತಿ ಕಂಡುಕೊಂಡು ಇಂಜಿನಿಯರಿಂಗ್ ಕಾಲೇಜು ಸೇರಿದ. ಆಗಲೇ ವಾಹನಗಳಿಗೆ ಪಿಸ್ಟನ್ ರಿಂಗ್ ಗಳನ್ನು ತಯಾರಿಸುವ ಐಡಿಯಾ ಆತನಿಗೆ ಹೊಳೆಯಿತು. ಕಾಲೇಜಿನ ವರ್ಕ್ ಶಾಫ್ ನಲ್ಲಿ ಹಗಲು ರಾತ್ರಿ ಶ್ರಮಪಟ್ಟ. ಕೆಲವು ದಿನಗಳು ಅಲ್ಲೇ ನಿದ್ದೆ ಮಾಡಿರುವ ಉದಾಹರಣೆಗಳಿವೆ.
ಒಂದು ಅದ್ಭುತವಾದ ಡಿಸೈನ್ ತಯಾರಿಸಿ ಟಯೋಟ ಕಂಪೆನಿಗೆ ಮಾರುತ್ತೇನೆಂಬ ಬಲವಾದ ನಂಬಿಕೆ ಆತನಿಗಿತ್ತು. ಆಗಲೇ ಆತನ ವಯಸ್ಸು 20 ಆಗಿದ್ದರಿಂದ ಮದುವೆಯೂ ನಡೆದುಹೋಯಿತು. ಪಿಸ್ಟನ್ ರಿಂಗ್ ತಯಾರಿಕೆಗೆ ಹಣದ ಕೊರತೆ ಎದುರಾದಾಗ ಹೆಂಡತಿಯ ಒಡವೆಯನ್ನು ಅಡವಿಟ್ಟ. ಹಲವು ಅಡೆತಡೆಗಳ ನಂತರ ಕೊನೆಗೂ ಅದನ್ನು ಸಿದ್ದಮಾಡಿ ಟಯೋಟಾ ಕಂಪೆನಿಗೆ ಕೊಂಡೋಯ್ದಾಗ. ಈ ಅದ್ಭುತ ಡಿಸೈನ್ ಅನ್ನು ಟಯೋಟ ಕಂಪೆನಿ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಇಲ್ಲವೆಂದು ತಿರಸ್ಕರಿಸಿತು. ಹೋಂಡಾ ನಿರಾಸೆಯಿಂದ ತನ್ನ ವರ್ಕ್ ಶಾಪ್ ಗೆ ಹಿಂದಿರುಗಿದಾಗ ಅಲ್ಲಿದ್ದ ಇತರ ಇಂಜಿನಿಯರ್ ಗಳು ನಿಮಗೆ ಮೊದಲೇ ಹೇಳಿದ್ದೆವು, ಇದೆಲ್ಲಾ ಆಗದ ಮಾತು ಎಂದು ನಗಲಾರಂಭಿಸುತ್ತಾರೆ. ಆದರೇ ಹೊಂಡಾ ಮಾತ್ರ ಮಂದಹಾಸ ಬೀರಿದ.
ಛಲಬಿಡದ ಹೋಂಡಾ ಮತ್ತೆ ಹೊಸ ಡಿಸೈನ್ ಒಂದನ್ನು ತಯಾರಿಸಲು ಮುಂದಾದ. ಸುಮಾರು ಎರಡು ವರ್ಷದ ಪರಿಶ್ರಮದ ನಂತರ ಮತ್ತೊಂದು ಪಿಸ್ಟನ್ ರಿಂಗ್ ತಯಾರಿಸಿ ಟಯೋಟಾ ಕಂಪೆನಿಯ ಕದತಟ್ಟಿದ. ಈ ಭಾರೀ ಟಯೋಟ ಕಂಪೆನಿ ಆ ಡಿಸೈನ್ ಕಂಡು ಸಂತೋಷಗೊಂಡು ಪಿಸ್ಟನ್ ರಿಂಗ್ ತಯಾರಿಸಲು ಆತನಿಗೆ ಕಾರ್ಖಾನೆಯನ್ನು ಆರಂಭಿಸಲು ಹಣವನ್ನು ಒದಗಿಸಿತು, ಟಯೋಟ ಕಂಪೆನಿಯ ಈ ಪ್ರೋತ್ಸಾಹದಿಂದ ಸಂತುಷ್ಟನಾದ ಹೋಂಡಾ ಫ್ಯಾಕ್ಟರಿಯನ್ನು ಎತ್ತರಕ್ಕೇರಿಸಲು ಮುಂದಾದ. ಈ ಸಮಯದಲ್ಲೆ ಜಪಾನ್ ನ ವಿವಿಧ ನಗರಗಳಿಗೆ ಭೂಕಂಪ ಅಪ್ಪಳಿಸಿತ್ತು. ಹೊಂಡಾ ಕಟ್ಟಿದ್ದ ಕಾರ್ಖಾನೆಯೂ ಧರೆಗುರುಳಿತ್ತು.
ಆತನ ಸಿಬ್ಬಂದಿ ಇದರಿಂದ ತೀವ್ರ ವಿಚಲಿತವಾದರೂ ಹೋಂಡಾ ಮಾತ್ರ ಸಂತಸದಿಂದಲೇ ಆದದ್ದಾಯಿತು ಮತ್ತೆ ಕಟ್ಟೋಣವೆಂದು ಕಾರ್ಖಾನೆ ನಿರ್ಮಾಣ ಕಾರ್ಯ ಆರಂಭಿಸಿದ. ಅದರ ಕೆಲಸಗಳು ಭರದಿಂದ ಸಾಗುತ್ತಿದ್ದವು. ಆದರೇ ಅದು ಪೂರ್ಣವಾಗುವ ಮೊದಲೇ ಜಪಾನ್ ಎರಡನೇ ಮಹಾಯುದ್ದವನ್ನು ಕಂಡಿತ್ತು. ಆ ಸಮಯದಲ್ಲಿ ದೇಶದಾದ್ಯಂತ ಸಿಮೆಂಟ್ ಪೂರೈಕೆ ಸ್ಥಗಿತಗೊಂಡಿತ್ತು. ಆಗಲೇ ಹೊಂಡಾ ಮತ್ತು ಆತನ ತಂಡ ಸಿಮೆಂಟ್ ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿದರು. ಈ ರೀತಿಯಾಗಿ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿದ.
ಆದರೆ ಅದೊಂದು ದಿನ ಅಮೆರಿಕಾ ಪಡೆಗಳು ಜಪಾನ್ ನ ಮೇಲೆ ವಾಯುದಾಳಿಯನ್ನು ನಡೆಸಿದಾಗ ಹೊಂಡಾ ಕಟ್ಟಿದ ಕಾರ್ಖಾನೆಯೂ ಬಾಂಬ್ ದಾಳಿಗೆ ತುತ್ತಾಯಿತು. ಮಾತ್ರವಲ್ಲದೆ ಜಪಾನ್ ನಲ್ಲಿ ಸ್ಟೀಲ್ ನ ತೀವ್ರ ಅಭಾವ ಉಂಟಾಯಿತು. ಆಗಲೂ ಹೊಂಡಾ ಕೈಚೆಲ್ಲಲಿಲ್ಲ. ಆ ಸಮಯದಲ್ಲಿ ಅಮೆರಿಕಾ ಯುದ್ಧವಿಮಾನಗಳೆಲ್ಲವೂ ಇಂಧನ ಟ್ಯಾಂಕ್ ಗಳನ್ನು ಹೊತ್ತು ಹಾರುತ್ತಿದ್ದವು. ಈ ಟ್ಯಾಂಕ್ ಗಳಲ್ಲಿನ ಇಂಧನವನ್ನು ಬಳಸಿದ ನಂತರ ಆಗಸದಿಂದ ಅದನ್ನು ಕಳಗೆ ಬಿಸಾಡಲಾಗುತ್ತಿತ್ತು. ಇದರಿಂದ ವಿಮಾನದ ಭಾರ ಕಡಿಮೆಯಾಗುತ್ತಿದ್ದವು. ಈ ರೀತಿ ಅಮೆರಿಕಾ ಯುದ್ಧವಿಮಾನಗಳು ಜಪಾನ್ ನ ತುಂಬೆಲ್ಲಾ ಸ್ಟೀಲ್ ಟ್ಯಾಂಕ್ ಗಳನ್ನು ಎಸೆದುಹೋಗುತ್ತಿದ್ದವು. ಇದನ್ನೆ ಹೊಂಡಾ ಸಂಗ್ರಹಿಸಿ ಅವುಗಳನ್ನು ಕರಗಿಸಿ ತನ್ನ ಫ್ಯಾಕ್ಟರಿ ನಿರ್ಮಾಣಕ್ಕೆ ಬಳಸಿಕೊಂಡ. ಈ ಸ್ಟೀಲ್ ಟ್ಯಾಂಕ್ ಗಳನ್ನು ಹೊಂಡಾ ಅಮೆರಿಕಾದ ಅಧ್ಯಕ್ಷ ಟ್ರೂಮನ್ ನ ಕೊಡುಗೆ ಎಂದು ಕರೆದ.
ಆದರೂ ಸಮಸ್ಯೆಗಳ ಸರಮಾಲೆ ನಿಲ್ಲಲಿಲ್ಲ. ಯುದ್ಧ ನಂತರ ಜಪಾನ್ ನಲ್ಲಿ ತೀವ್ರ ಇಂಧನ ಅಭಾವವುಂಟಾಯಿತು. ಇಂಧನಗಳೇ ಇಲ್ಲವೆಂದರೇ ಕಾರುಗಳನ್ನು ಕೊಳ್ಳುವರಾರು ? ಹೀಗಾಗಿ ಟಯೋಟಾ ಕಂಪೆನಿ ಕಾರು ಉತ್ಪಾದನೆಯನ್ನು ನಿಲ್ಲಿಸಿತು. ಪರಿಣಾಮವಾಗಿ ಹೋಂಡಾಗೆ ಪಿಸ್ಟನ್ ರಿಂಗ್ ಗಳಿಗೆ ಆರ್ಡರ್ ಬರಲಿಲ್ಲ. ಇಂಧನ ಕೊರೆತೆಯಿದ್ದ ಕಾರಣ ಜನಸಾಮಾನ್ಯರು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ ಗಳಲ್ಲಿ ಸಾಗಬೇಕಿತ್ತು. ಇದನ್ನು ಕಂಡ ಹೋಂಡಾ ಸೈಕಲ್ ಗಳಿಗೆ ಇಂಜಿನ್ ಕೂರಿಸಿದರೆ ಹೇಗೆ ಎಂದು ಚಿಂತಿಸಲಾರಂಭಿಸಿದ. ಯಾಕೆಂದರೇ ಸೈಕಲ್ ಇಂಜಿನ್ ಗಳಿಗೆ ಹೆಚ್ಚು ಇಂಧನ ಬೇಕಾಗಿರಲಿಲ್ಲ. ಮಾತ್ರವಲ್ಲದೆ ತನ್ನ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸಿ ಬೈಕ್ ಇಂಜಿನ್ ತಯಾರಿಸಿದ. ಕೆಲವೇ ವರ್ಷಗಳಲ್ಲಿ ಹೊಂಡಾ ಕಂಪೆನಿಯ ಬೈಕ್ ಇಂಜಿನ್ ಗಳು ಎಷ್ಟು ಪ್ರಖ್ಯಾತವಾದವೆಂದರೇ ಅವುಗಳನ್ನು ಯೂರೋಪ್ ಮತ್ತು ಅಮೆರಿಕಾಕ್ಕೂ ಸರಬರಾಜು ಮಾಡಲಾಯಿತು. ಮುಂದಿನದು ಇತಿಹಾಸ !
1970ರ ವೇಳೆಗೆ ಹೋಂಡಾ ಕಂಪೆನಿ ಚಿಕ್ಕ ಕಾರುಗಳನ್ನು ಉತ್ಪಾದಿಸಲು ಆರಂಭಿಸಿತು. ಅದು ಕೂಡ ಜನಪ್ರಿಯವಾದವು. ಇಂದಿಗೂ ಕೂಡ ಹೊಂಡಾ ಕಂಪೆನಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಆ ಮೂಲಕ ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂದು ಸೋಯಿಚಿರೋ ಹೋಂಡಾ ತೊರಿಸಿಕೊಟ್ಟನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.