ಜನತಾ ಕರ್ಫ್ಯೂಗೆ ಉತ್ತಮ ಸ್ಪಂದನೆ
Team Udayavani, May 11, 2021, 8:04 PM IST
ದಾವಣಗೆರೆ: ಯಾರ ಊಹೆ, ನಿರೀಕ್ಷೆಗೂ ನಿಲುಕದಂತೆ ಎಲ್ಲೆಡೆ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್ ಚೈನ್‌ಲಿಂಕ್ ತುಂಡರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎರಡನೇ ಹಂತದ ಜನತಾ ಕರ್ಫ್ಯೂಗೆ ದಾವಣಗೆರೆ ನಗರ ಒಳಗೊಂಡಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕಳೆದ ವರ್ಷದ ಮಾರ್ಚ್ ನಿಂದಲೇ ಲಾಕ್‌ಡೌನ್ ಅನುಭವದ ಹಿನ್ನೆಲೆಯಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗೆ ಇಳಿಯಲಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯದಲ್ಲಿ ಏನು ಬೇಕೋ ಎಲ್ಲವನ್ನು ಖರೀದಿ ಮಾಡಿದರು. ಕೆಲವು ಭಾಗಗಳಲ್ಲಿ ಬೆಳಿಗ್ಗೆ 9:45ರ ಹೊತ್ತಿಗೆ ಅಂಗಡಿ, ಹೋಟೆಲ್, ಗ್ಯಾರೇಜ್‌ಗಳ ಬಾಗಿಲು ಮುಚ್ಚಲಾಯಿತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಅಂಗಡಿ, ಹೋಟೆಲ್‌ಗಳ ಬಾಗಿಲು ಮುಚ್ಚುವ ಮೂಲಕ ಕೊರೊನಾ ಕರ್ಫ್ಯೂಗೆ ಸಹಕರಿಸಬೇಕು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು, ಯಾರ ಕಾರಣಕ್ಕಾಗಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು, ಮನೆಯಿಂದ ಹೊರ ಬರದೆ ಮನೆಯಲ್ಲಿ ಸುರಕ್ಷಿತವಾಗಿ ಇರಬೇಕು ಎಂದು ಮನವಿ ಮಾಡಿದರು.
ಅಂಗಡಿ, ಹೋಟೆಲ್, ಗ್ಯಾರೇಜ್ ಇತರರು ಮತ್ತೆ ಬಾಗಿಲು ತೆರೆದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಜನರು, ವಾಹನ ಸವಾರರ ಅನಗತ್ಯ ಓಡಾಟ ನಿರ್ಬಂಧಿಸುವ ಉದ್ದೇಶದಿಂದ ಪ್ರಮುಖ ವೃತ್ತಗಳಾದ ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ ವೃತ್ತ,ಗುಂಡಿ ಮಹದೇವಪ್ಪ ವೃತ್ತ, ಐಟಿಐ ಕಾಲೇಜು ವೃತ್ತ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಹೊಂಡದ ವೃತ್ತ ಒಳಗೊಂಡಂತೆ ಅನೇಕ ಕಡೆ ಒಂದು ಕಡೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇನ್ನುಳಿದ ಕಡೆ ಬ್ಯಾರಿಕೇಡ್, ಕಬ್ಬಿಣದ ಗೇಟ್ ಅಳವಡಿಸಲಾಗಿದೆ.
ಆದರೂ ಕೆಲವೆಡೆ ವಾಹನ ಸಂಚಾರ ಕಂಡು ಬಂತು. ಹಲವಾರು ಕಡೆ ಜನರು, ವಾಹನ ಸವಾರರು ಸುತ್ತಿ ಬಳಸಿ ಓಡಾಡಬೇಕಾಯಿತು.
ಫೀಲ್ಡ್‌ಗೆ ಇಳಿದ ತಹಶೀಲ್ದಾರ್-ಮೇಯರ್: ಮಹಾಪೌರ ಎಸ್.ಟಿ. ವೀರೇಶ್ ಮತ್ತು ದಾವಣಗೆರೆ ತಹಶೀಲ್ದಾರ್ ಬಿ.ಎನ್. ಗಿರೀಶ್ ಜಯದೇವ ವೃತ್ತದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ವಾಹನ ಸವಾರರನ್ನು ತಡೆದು ಯಾವ ಕಾರಣಕ್ಕೆ, ಎಲ್ಲಿಗೆ ಹೋಗುತ್ತಿರುವಿರಿ ಎಂದು ಪ್ರಶ್ನಿಸಿದರು. ಆಸ್ಪತ್ರೆ, ಔಷಧಿ, ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹೋಗುತ್ತಿರುವುದಾಗಿ ಹೇಳಿದವರ ಅಗತ್ಯ ದಾಖಲೆ ಪರಿಶೀಲಿಸಿ ಸಕಾರಣ ಇದ್ದವರಿಗೆ ಹೋಗಲು ಅವಕಾಶ ನೀಡಲಾಯಿತು. ಸುಖಾ ಸುಮ್ಮನೆ, ಕುಂಟು ನೆಪ ಹೇಳಿದವರ ವಾಹನ ವಶಪಡಿಸಿಕೊಂಡು ದಂಡ ವಿಧಿಸಲಾಯಿತು.
ಹಲವಾರು ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ದಾವಣಗೆರೆಯ ಪ್ರಮುಖ ವ್ಯಾಪಾರ-ವಹಿವಾಟಿನ ಸ್ಥಳಗಳಾದ ಮಂಡಿಪೇಟೆ, ಅಶೋಕ ರಸ್ತೆ, ಹದಡಿ ರಸ್ತೆ, ವಿಜಯಲಕ್ಷ್ಮೀ ರಸ್ತೆ, ಗಡಿಯಾರ ಕಂಬದ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ಕೆ.ಆರ್. ರಸ್ತೆ, ಕೆ.ಆರ್. ಮಾರ್ಕೆಟ್, ವಸಂತ ರಸ್ತೆ, ದೊಡ್ಡಪೇಟೆ ಒಳಗೊಂಡಂತೆ ಅನೇಕ ಕಡೆ ಅಂಗಡಿ, ಹೋಟೆಲ್ ಎಲ್ಲ ವಾಣಿಜ್ಯ ಚಟುವಟಿಕೆ ಅಕ್ಷರಶಃ ಬಂದ್ ಆಗಿದ್ದರಿಂದ ರಸ್ತೆಗಳು ಭಣಗುಟ್ಟಿದವು.
ಅಲ್ಲಲ್ಲಿ ಒಬ್ಬರು-ಇಬ್ಬರು, ಕೆಲ ವಾಹನ ಸಂಚಾರ ಹೊರತುಪಡಿಸಿದರೆ ಬಹುತೇಕ ಎಲ್ಲೆಡೆ ನೀರವ ವಾತಾವರಣ ಕಂಡು ಬಂತು. ಸದಾ ಸಾವಿರಾರು ಜನರಿಂದ ಗಿಜಿಗುಡುತ್ತಿದ್ದ ಕೆ.ಆರ್. ಮಾರ್ಕೆಟ್ ಸ್ತಬ್ದವಾಗಿತ್ತು. ಬೆಳಗ್ಗೆ 10 ಗಂಟೆ ತನಕ ವ್ಯಾಪಾರ-ವಹಿವಾಟಿನ ನಂತರ ಎಲ್ಲವೂ ಬಂದ್ ಆಗಿದ್ದವು. ಹಳೆ ದಾವಣಗೆರೆ ಭಾಗದಲ್ಲೂ ಜನರು ಲಾಕ್‌ಡೌನ್ ಗೆ ಸ್ಪಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.