ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ
Team Udayavani, May 11, 2021, 10:36 PM IST
ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಎಲ್ಲ ಅರ್ಹರಿಗೂ ಲಸಿಕೆ ನೀಡುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಆವರಿಗೆ ಪತ್ರ ಬರೆದು, ಎರಡು ತಿಂಗಳಲ್ಲಿ ಲಸಿಕೆ ಅಭಿಯಾನ ಮುಗಿಸಬೇಕಿದೆ. ಲಸಿಕೆ ಕೇಂದ್ರದಿಂದಾದರೂ ತರಿಸಿಕೊಳ್ಳಬೇಕು, ಇಲ್ಲವೇ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 18 ವರ್ಷ ತುಂಬಿದವರು 4,37,80,330 ಜನರಿದ್ದಾರೆ. ಇದುವರೆಗೂ ಎರಡನೇ ಡೋಸ್‌ಲಸಿಕೆ ನೀಡಿರುವುದು 17,77,751 ಅಂದರೆ ಕೇವಲ ಶೇ.4.06 ಜನರಿಗೆ ಮಾತ್ರ. ರಾಜ್ಯದಲ್ಲಿ 6,85,27 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಇವರಲ್ಲಿ ಎರಡನೇ ಡೋಸ್ ನೀಡಿರುವುದು 4,39,162 ಜನರಿಗೆ ಮಾತ್ರ. 4,40,302 ಮುಚೂಣಿ ಆರೋಗ್ಯ ಸಿಬ್ಬಂದಿಗೆ ಮೊದಲ ಡೋಸ್ ನೀಡಿದ್ದರೆ ಎರಡನೇ ಡೋಸ್ ನೀಡಿರುವುದು 1,67,581 ಜನರಿಗೆ ಮಾತ್ರ ಎಂದು ಹೇಳಿದ್ದಾರೆ.
60 ವರ್ಷ ತುಂಬಿದವರಲ್ಲಿ 8,41,056 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 44 ರಿಂದ 59 ವರ್ಷದ ಒಳಗಿರುವವರಿಗೆ 3,29,952 ಜನರಿಗೆ ಮಾತ್ರ ಎರಡನೇ ಡೋಸ್ ನೀಡಲಾಗಿದೆ. 18 ರಿಂದ 45 ವಯೋಮಾನದವರಿಗೆ ಇದುವರೆಗೂ 5,759 ಜನರಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆ. ಮೊದಲನೇ ಡೋಸ್ ಎಷ್ಟೇ ಜನಕ್ಕೆ ಕೊಟ್ಟರೂ ಎರಡನೇ ಡೋಸ್ ನೀಡದಿದ್ದರೆ ಉಪಯೋಗಕ್ಕೆ ಬರದು. ಹೀಗಾಗಿ, ಅವಧಿ ಮೀರುವ ಮುನ್ನ ಎಲ್ಲ ಅರ್ಹರಿಗೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ
10 ಸಾವಿರ ರೂ. ವಿಶೇಷ ಪ್ಯಾಕೇಜ್ ನೀಡಿ
ಬೆಂಗಳೂರು: ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದವರಿಗೆ ರಾಜ್ಯ ಸರ್ಕಾರ ತಕ್ಷಣ ಪ್ರತಿ ಕುಟುಂಬಕ್ಕೆ 10 ಸಾವಿರ ರೂ.ನೆರವು ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ತರಕಾರಿ, ಹಣ್ಣು, ಹೂವು ಬೆಳೆದ ರೈತರಿಂದ ಖರೀದಿಯಾಗುತ್ತಿಲ್ಲ. ಕೃಷಿ, ತೋಟಗಾರಿಕೆ ಸಚಿವರು ಯಾವ ರೈತರ ಬಳಿ ಹೋಗಿ ಕಷ್ಟ ಕೇಳಿದ್ದಾರೆ? ಎಪಿಎಂಸಿಗಳಿಗೆ ಭೇಟಿ ಕೊಟ್ಟು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಒಬ್ಬ ಸಚಿವರು ಬಡವರಿಗೆ ನೆರವು ನೀಡಲು ನೋಟಿನ ಪ್ರಿಟಿಂಗ್ ಯಂತ್ರ ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ. ಹಿಂದೆ ಅವರು ನೋಟು ಎಣಿಸುವ ಯಂತ್ರ ಮನೆಯಲ್ಲಿ ಇಟ್ಟುಕೊಂಡಿರಲಿಲ್ಲವೇ? ಎಂದು ಸಚಿವ ಈಶ್ವರಪ್ಪ ಹೇಳಿಕೆಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿ, ನಿಮಗೆ ಪರಿಹಾರ ಕೊಡಲು ಆಗದಿದ್ದರೆ ಸರ್ಕಾರದ ಬಳಿ ದುಡ್ಡು ಇಲ್ಲ ಆಗಲ್ಲ ಎಂದು ಹೇಳಿ. ನೀವು ಲಾಕ್‌ಡೌನ್ ಮಾಡಿರುವುದಕ್ಕೆ ಜನರು ಕೇಳುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕೋಮುವಾದದ ವಿಷ ಬೀಜಕ್ಕೆ ಇರುವ ಮೊತ್ತೂಂದು ಹೆಸರು ತೇಜಸ್ವಿ ಸೂರ್ಯ. ಮಾಧ್ಯಮಗಳ ಮುಂದೆ ಮುಸ್ಲಿಂರ ಹೆಸರು ಓದಿ ಇದೀಗ ಅಧಿಕಾರಿಗಳನ್ನು ಸಿಲುಕಿಸಲು ನೋಡುತ್ತಿದ್ದಾರೆ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.