ಒಲಿಂಪಿಕ್ಸ್ ಅಭ್ಯಾಸ : ಕ್ರೊವೇಶಿಯಾಕ್ಕೆ ತೆರಳಿದ ಶೂಟರ್
Team Udayavani, May 12, 2021, 6:30 AM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ಗಾಗಿ ಹೆಚ್ಚಿನ ಅಭ್ಯಾಸ ಹಾಗೂ ತರಬೇತಿ ಪಡೆಯಲು ಭಾರತದ ಶೂಟಿಂಗ್ ತಂಡ ಮಂಗಳವಾರ ಕ್ರೊವೇಶಿಯಾಕ್ಕೆ ತೆರಳಿತು. ಭಾರತಕ್ಕಿಂತ ಇಲ್ಲಿ ಹೆಚ್ಚಿನ ಸುರಕ್ಷತೆ ಹಾಗೂ ಅನುಕೂಲ ಇರುವ ಕಾರಣ ಈ ನಿರ್ಧಾರಕ್ಕೆ ಬರಲಾಯಿತು.
ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ 15 ಸದಸ್ಯರ ಶೂಟಿಂಗ್ ತಂಡ ಕ್ರೊವೇಶಿಯಾಕ್ಕೆ ತೆರಳಿದ ಬಳಿಕ ಝಾಗ್ರೆಬ್‌ನಲ್ಲಿ 7 ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದೆ. ಬಳಿಕ ಮೇ 20ರಿಂದ ಒಸಿಜೆಕ್‌ನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದೆ. ಜೂ. 22ರಿಂದ ಇಲ್ಲಿಯೇ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್ ನಡೆಯಲಿದೆ. ಅನಂತರದ ಇಲ್ಲಿಂದಲೇ ಟೋಕಿಯೊ ಒಲಿಂಪಿಕ್ಸ್‌ಗೆ ಪಯಣಿಸಲಿದೆ.
ವಿದೇಶಿ ಕೊರೊನಾ ಮಾರ್ಗಸೂಚಿ ಉಲ್ಲಂ ಸಬೇಡಿ: ಕಿರಣ್ ರಿಜಿಜು
ತರಬೇತಿ ಅಥವಾ ಸ್ಪರ್ಧೆಗಾಗಿ ತೆರಳಿದಾಗ ವಿದೇಶಗಳ ಕೋವಿಡ್-19 ಮಾರ್ಗಸೂಚಿಯನ್ನು ಯಾವುದೇ ಕಾರಣಕ್ಕೂ ಉಲ್ಲಂ ಸಬೇಡಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಎಚ್ಚರಿಕೆ ನೀಡಿದ್ದಾರೆ.
ಕ್ರೊವೇಶಿಯಾಕ್ಕೆ ಅಭ್ಯಾಸಕ್ಕೆ ತೆರಳುತ್ತಿರುವ ಶೂಟರ್‌ಗಳಿಗೆ ಶುಭ ಕೋರಿರುವ ಕಿರಣ್ ರಿಜಿಜು, “ಪ್ರಯಾಣ ಸುರಕ್ಷಿತವಾಗಿರಲಿ. ಇತರ ದೇಶಗಳ ಕೋವಿಡ್-19 ಮಾರ್ಗಸೂಚಿಯನ್ನು ಎಂದಿಗೂ ಉಲ್ಲಂ ಸಬೇಡಿ. ತರಬೇತಿಯತ್ತ ಗಮನಹರಿಸಿ, ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ. ನಮ್ಮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುವುದು. “ಆಲ್ ದಿ ಬೆಸ್ಟ್’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.