ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ವಿಶೇಷ ಮಹಾಪೂಜೆ, ಗೌರವಾರ್ಪಣೆ
Team Udayavani, May 12, 2021, 12:12 PM IST
ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ಶನಿವಾರತಿಂಗಳ ಮಂಗಳಾದ್ಯಯ ಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಶ್ರೀ ಶನೀಶ್ವರ ಗ್ರಂಥ ಪಾರಾಯಣದ ಅನಂತರ ವಿಶೇಷ ಪೂಜೆ ನಡೆಯಿತು. ಬಳಿಕ ಹನುಮಾನ್ ಚಾಲೀಸ್ ಪಠಣ, ಶ್ರೀ ಶನೀಶ್ವರ ಜಪದ ಬಳಿಕ ಶ್ರೀ ಶನೀಶ್ವರ ಭಜನ ಸಮಿತಿಯವರಿಂದ ಭಜನೆ, ರಾತ್ರಿ 7ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಈ ವಿಶೇಷ ಪೂಜೆಯಲ್ಲಿ ವಿವಿಧ ವಲಯಗಳಲ್ಲಿ ವಿಶೇಷ ಸಾಧನೆಗೈದ ಮಂದಿರದ ಜತೆ ಕೋಶಾಧಿಕಾರಿ ಜಯಕರ್ ಶೆಟ್ಟಿ ಮುದ್ರಾಡಿ ಹಾಗೂ ಯವ ಸಮಿತಿಯ ಹಿಮಾಂಶ್ ಅಮೀನ್ ಅವರಿಗೆ ಮಂದಿರದ ಗೌರವ ಅಧ್ಯಕ್ಷ ವಿನೋದ್ ವಾಘಾಸಿಯಾ ಅವರು ಶಾಲು ಹೊದೆಸಿ, ಮಹಾ ಪ್ರಸಾದವನ್ನು ನೀಡಿ ಗೌರವಿಸಿದರು.
ಈ ಸಂದರ್ಭ ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ, ಕಾರ್ಯದರ್ಶಿ ಸದಾನಂದ್ ಪೂಜಾರಿ ಕಾರ್ಕಳ, ಜತೆ ಕಾರ್ಯದರ್ಶಿ ಉಷಾ ದಿನೇಶ್ ಶೆಟ್ಟಿಗಾರ್, ಜತೆ ಕೋಶಾಧಿಕಾರಿ ಭಾರತಿ ಅಂಚನ್, ಪೂಜಾ ಸಮಿತಿಯ ಉಪಾಧ್ಯಕ್ಷೆ ಜಯಲಕ್ಷ್ಮೀ ಸುವರ್ಣ, ಪೂಜಾ ಸಮಿತಿಯ ಕಾರ್ಯ ದರ್ಶಿ ಶಕುಂತಲಾ ಶೆಟ್ಟಿ, ಮಹಿಳಾ ಸಮಿತಿಯ ಯಶೋದಾ ಪೂಜಾರಿ, ಸುಜಾತಾ ಶೆಟ್ಟಿ, ಆರತಿ ರಾಬ್, ಯುವ ಸಮಿತಿಯ ಜಯೇಶ್ ಸುವರ್ಣ, ರಿಚೀನ್ ಅಮೀನ್, ಕಾವ್ಯಾ ಶೆಟ್ಟಿಗಾರ್, ಹಿಮಾಂಶ್ ಅಮೀನ್, ಪ್ರಜ್ಞಾ ಶೆಟ್ಟಿಗಾರ್, ಅರ್ಚಕರಾದ ನಿರಾವ್ ಭಟ್ ಮತ್ತು ಶುಶಿಲ್ ಮಿಶ್ರ, ವಿಘ್ನಹರ್ತ ಡೆವಲಪರ್ ಇದರ ವಿವೇಕಾನಂದ ಮೊದಲಾ ದವರು ಪಾಲ್ಗೊಂಡಿದ್ದರು.
ಈ ವಿಶೇಷ ಧಾರ್ಮಿಕ ಕಾರ್ಯಕ್ರಮ ದಲ್ಲಿ ಜಗತ್ತಿಗೆ ಬಂದಿರುವಂತಹ ಕೊರೊನಾದ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕೊರೊನಾ ಲಾಕ್‌ಡೌನ್ ಮಾರ್ಗಸೂಚಿಯಂತೆ ಕಾರ್ಯಕ್ರಮ ನೆರವೇರಿತು. ಸದಾನಂದ್ ಪೂಜಾರಿ ಕಾರ್ಕಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.