ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಯೂನಿವರ್ಸ್ ಬಾಸ್..!
Team Udayavani, May 12, 2021, 2:37 PM IST
ನವದೆಹೆಲಿ : ಮೈದಾನದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ನಿಂದ, ತಮಾಷೆಯ ವ್ಯಕ್ತಿತ್ವದಿಂದ ಜನಪ್ರಿಯರಾದ ಯೂನಿವರ್ಸ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ ಮೂಲದ ಕ್ರಿಕೆಟಿಗ ಕ್ರಿಸ್ ಗೇಲ್ ಭಾವುಕರಾಗಿದ್ದಾರೆ.
ಕ್ರಿಸ್ ಗೇಲ್ ವಿಶ್ವ ತಾಯಂದಿರ ದಿನದಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಗೇಲ್ ತಮ್ಮ ದಿವಂಗತ ತಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಅಮ್ಮ ನೀನು ಹೇಳಿಕೊಟ್ಟ ಪರಂಪರೆಯನ್ನು ನಾನು ಮುಂದುಯವರೆಸುತ್ತೇನೆ. ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳು ಎಂದಿಗೂ ಮರೆಯಾಗಲು ಸಾಧ್ಯವಿಲ್ಲ. ನಾವು ಇಬ್ಬರು ತುಂಬಾ ಖುಷಿ ಖುಷಿಯಾಗಿ ಇದ್ದೆವು. ನೀನೊಂದಿಗೆ ಇದ್ದಾಗ ಜೀವನವನ್ನು ಪೂರ್ತಿಯಾಗಿ ಅನುಭವಿಸಿದೆ. ಆದರೀಗ ಏನು ಹೇಳಲು ಪದಗಳೇ ತೋಚುತ್ತಿಲ್ಲ. ನೀನು ಹೋಗುವ ಮುನ್ನ ನನ್ನ ಜೊತೆ ತುಂಬಾ ಮಾತಾಡಬೇಕೆಂದ್ಕೊಂಡಿದ್ದೆ ಎನ್ನುವುದು ನನಗೆ ಗೊತ್ತಿತ್ತು ಎಂದು ನೆನಪನ್ನು ಮಲುಕು ಹಾಕಿ ದುಃಖಿಸಿದ್ದಾರೆ
ನಾವು ಊಟಕ್ಕಾಗಿ ಪರದಾಟ ಮಾಡುವಾಗ ನೀನು ನಮ್ಮಗಾಗಿ ಅನ್ನಕ್ಕಾಗಿ ಹೋರಾಡಿದ್ದೀರಿ, ನಮ್ಮ ಸಂತೋಷಕ್ಕಾಗಿ ಕಷ್ಟವನ್ನು ಸಹಿಸಿಕೊಂಡು ಒಳ್ಳೆಯ ದಿನಕ್ಕಾಗಿ ಹೋರಾಡಿದ್ದೀರಿ. ಕ್ಷಮಿಸಿ ಅಮ್ಮ ನೀವೇ ಇಲ್ಲದೆ ಹೆಚ್ಚಿಗೆ ಮಾತಾನಾಡಲು ಸಾಧ್ಯವಾಗುತ್ತಿಲ್ಲ. ಲವ್ ಯೂ ಅಮ್ಮ ಎಂದು ಪೋಸ್ಟ್ ಮಾಡಿದ್ದಾರೆ.
ಅಂದ ಹಾಗೆ ಗೇಲ್ ಅವರ ತಾಯಿ 2018 ರಲ್ಲಿ ಹೃದಯಾಘಾತವಾಗಿ ನಿಧನ ಹೊಂದಿದ್ದರು.
— Infidel 2.0 (@Infidel_strike) May 10, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.