ಬಡವರ ಬದುಕು ಕಸಿದ ಲಾಕ್‌ಡೌನ್
Team Udayavani, May 12, 2021, 2:54 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕುತಡೆಗೆ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಜನಜೀವನ ಅಸ್ತವ್ಯಸ್ತಗೊಂಡಿದ್ದು ಕೂಲಿ ಕಾರ್ಮಿಕರು,ಬಡಜನರ ಗೋಳು ಕೇಳುವವರು ಯಾರೂ ಇಲ್ಲವಾಗಿದ್ದಾರೆ.
ಜೀವನ ಸಾಧ್ಯವೇ?: ರಾಜ್ಯದಲ್ಲಿ ಕಳೆದ ವರ್ಷಸೋಂಕು ಅಪ್ಪಳಿಸಿದಾಗ ದಾನಿಗಳು ಮತ್ತು ಸಮಾಜಸೇವಕರು ಹಾಗೂ ವಿವಿಧ ಪಕ್ಷಗಳ ನಾಯಕರುಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ ಆಹಾರಸಾಮಗ್ರಿಗಳನ್ನು ಪೂರೈಕೆ ಮಾಡಿದ್ದರು. ಆದರೆ, ಈಬಾರಿ ಪಡಿತರ ಚೀಟಿಯಲ್ಲಿ ನೀಡುವ 7 ಕೆ.ಜಿ. ಅಕ್ಕಿಮತ್ತು 3 ಕೆ.ಜಿ.ರಾಗಿಯಿಂದ ಜೀವನ ನಡೆಸಲುಸಾಧ್ಯವೇ? ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಸಾಲ ಮರುಪಾವತಿ ಹೇಗೆ?: ಲಾಕ್‌ಡೌನ್‌ಜಾರಿಗೊಳಿಸಿದ್ದರಿಂದ ಬೆಳಗ್ಗೆ 6 ಗಂಟೆಯಿಂದ 10ಗಂಟೆವರೆಗೆ ವ್ಯಾಪಾರ ಮಾಡಿಕೊಳ್ಳಲು ಅವಕಾಶನೀಡಿದ್ದಾರೆ. ಆದರೆ, ಬೈಕ್‌ನಲ್ಲಿ ಬಂದರೇ ದಂಡಹಾಕುತ್ತಾರೆ ಎಂಬ ಭೀತಿಯಿಂದ ನಾಗರಿಕರುಬರುವುದು ಕಡಿಮೆಯಾಗಿದೆ. ಇದರಿಂದ ಯಾವವ್ಯಾಪಾರವೂ ನಡೆಯುತ್ತಿಲ್ಲ. ಜೀವ ಇದ್ದರೇ ಜೀವನಒಪ್ಪಿಕೊಳ್ಳೋಣ, ಆದರೆ, ಕುಟುಂಬ ನಿರ್ವಹಣೆಹೇಗೆ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವಜನ ಬಾಡಿಗೆ ಪಾವತಿಸುವುದು ಹೇಗೆ.
ವಿದ್ಯುತ್ ಬಿಲ್‌ಪಾವತಿ, ಸಾಲ ಮರುಪಾವತಿ ಹೇಗೆ ಸಾಧ್ಯ.ಸರ್ಕಾರವೇ ಇದಕ್ಕೆ ಪರಿಹಾರ ಒದಗಿಸಬೇಕೆಂದುಕೂಲಿ ಕಾರ್ಮಿಕರು-ಬಡವರು ಮನವಿ ಮಾಡಿದ್ದಾರೆ.ಬಯಲುಸೀಮೆ ಪ್ರದೇಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಬರಪೀಡಿತ ಪ್ರದೇಶವೆಂದು ಅಪಖ್ಯಾತಿ ಹೊಂದಿದೆ.ಇಲ್ಲಿ ಯಾವುದೇ ರೀತಿಯ ನೀರಾವರಿ ಸೌಲಭ್ಯವೂಇಲ್ಲ, ಕೇವಲ ಮಳೆ ನೀರನ್ನು ಆಶ್ರಯಿಸಿಕೊಂಡುರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಮಾಡಿ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ರೇಷ್ಮೆದರ ಕುಸಿದಿದೆ ಎಂದು ಬೆಳೆಗಾರರು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಮತ್ತೂಂದೆಡೆ ಬಂಡವಾಳ ಹೂಡಿಬೆಳೆದಿದ್ದ ಹೂ ಹಣ್ಣು ಮತ್ತು ತರಕಾರಿ ಬೆಳೆಗಳನ್ನುಕೇಳುವವರು ಇಲ್ಲವಾಗಿದ್ದಾರೆ. ಒಟ್ಟಾರೇ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದ್ದು ಸರ್ಕಾರ ರೈತರು, ಕೂಲಿ ಕಾರ್ಮಿಕರುಮತ್ತು ಬಡಜನರ ಕಷ್ಟ ಅರಿತು ವಿಶೇಷ ಪ್ಯಾಕೇಜ್‌ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.