ಹೆಚ್ಚುತ್ತಿರುವ ಸೋಂಕು-ಸಾವು; ಜನರಲ್ಲಿ ಆತಂಕ


Team Udayavani, May 12, 2021, 7:16 PM IST

12-15

„ಸುರೇಶ ಯಳಕಪ್ಪನವರ

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಕಳೆದ ಒಂದು ವಾರದಿಂದ ಸಾವಿಲ್ಲದ ದಿನಗಳೇ ಇಲ್ಲದಂತಾಗಿದೆ. ಗ್ರಾಮದ ಹಿರಿಯ ಮುಖಂಡರೊಬ್ಬರು ಮೃತಪಟ್ಟ ಮೂರನೇ ದಿನವೇ ಅವರ ಮಗನೂ ಕೂಡ ಮೃಪಟ್ಟಿರುವುದು ಕುಟುಂಬದವರ ಜೊತೆ ಇಡೀ ಗ್ರಾಮಸ್ಥರ ಮನಸ್ಸನ್ನು ಘಾಸಿಗೊಳಿಸಿದೆ.

ಇಂಥ ಹೃದಯವಿದ್ರಾವಕ ಘಟನೆಗಳು ದಿನಕ್ಕೊಂದು ನಡೆಯುತ್ತಿದ್ದು ಸಾವಿನ ಊರು ಎಂಬಂತಾಗಿದೆ. ಗ್ರಾಮದಲ್ಲಿ ಒಟ್ಟು 34ಕ್ಕೂ ಹೆಚ್ಚು ಸಕ್ರಿಯ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾದಂತೆಲ್ಲಾ ಸೋಂಕು ಪೀಡಿತರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ 6 ಮಂದಿ ಮೃತಪಟ್ಟಿದ್ದು ತಾಲೂಕಿನಲ್ಲಿ ಪಟ್ಟಣ ಪ್ರಥಮವಾದರೆ, ತಂಬ್ರಹಳ್ಳಿ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ತಂಬ್ರಹಳ್ಳಿ ಉತ್ತರಭಾಗದ ಮುಖ್ಯಶಿಕ್ಷಕಿ ಸಮಾಜದ ಬಗ್ಗೆ ಉತ್ತಮ ಕಾಳಜಿ ಹೊಂದಿದ್ದ ಮಂಜುಳಾ ಹವಾಲ್ದಾರ್‌ ವೈರಸ್‌ಗೆ ಬಲಿಯಾಗಿದ್ದು ಶಿಕ್ಷಕ ವರ್ಗ, ಮಹಿಳಾ ಸಂಘಟನೆಗಳು ಇನ್ನೂ ನೋವಿನಿಂದ ಹೊರಬರದಂತೆ ಮಾಡಿದೆ.

ಗ್ರಾಮದ ಬಹುತೇಕರಿಗೆ ಜ್ವರ, ಮೈಕೈ ನೋವು, ಶೀತ, ಕೆಮ್ಮ ಇದ್ದರೂ ಕೂಡ ಕೇವಲ ಮಾತ್ರೆ ನುಂಗಿ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳುತ್ತಿರುವುದು ಸೋಂಕು ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ವೈರಸ್‌ ಪೀಡಿತ ಯುವಕನೋರ್ವ ಗ್ರಾಮದಲ್ಲಿ ಆಗಾಗ ಬೈಕ್‌ ಸವಾರಿ ಮಾಡುತ್ತಾ ಸಂಚರಿಸಿರುವುದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.

ಯುವಕರ ಕಾಳಜಿ: ಸಾವಿನ ಸಂಖ್ಯೆ ದಿನೇದಿನೆ ಹೆಚ್ಚಾಗುವುದನ್ನು ತಡೆಯಲು ಗ್ರಾಮದ ಯುವ ಮುಖಂಡರು ಗ್ರಾಮವನ್ನು ಸ್ವಯಂ ಲಾಕ್‌ ಡೌನ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಮ್ಮ ತಂಬ್ರಹಳ್ಳಿ ವ್ಯಾಟ್ಸಾಪ್‌ ಗ್ರೂಪ್‌ ಮೂಲಕ ಲಾಕ್‌ಡೌನ್‌ನೂ° ಇನ್ನೂ ಬಿಗಿ ಮಾಡಿಕೊಳ್ಳಲು ಪೂರಕವಾಗಿ ಚರ್ಚಿಸಿದ್ದಾರೆ.

ಸರಕಾರ ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ತರಕಾರಿ ಕಿರಾಣಿಗೆ ಅವಕಾಶ ನೀಡಿರುವುದನ್ನು ಇನ್ನಷ್ಟು ಬಿಗಿಗೊಳಿಸಲು ವಾರದಲ್ಲಿ ಎರಡು ದಿನಮಾತ್ರ, ಸರಕಾರ ನಿರ್ಧಾರ ಮಾಡಿರುವ ಸಮಯದಲ್ಲಿ ಮಾತ್ರ ಕಿರಾಣಿ ಅಂಗಡಿ, ಇತರೆ ಅಂಗಡಿಗಳು ತೆರೆಯಬೇಕು ಎಂದು ನಿರ್ಧರಿಸಿ ಜಾರಿಗೊಳಿಸಲು ಪ್ರಯತ್ನ ನಡೆಸಿದ್ದಾರೆ.

ಇದಕ್ಕೆ ಸ್ಥಳೀಯ ಗ್ರಾಪಂ ಕೂಡ ಪೂರಕವಾಗಿದ್ದು, ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಯುವ ಪ್ರಮುಖರಾದ ಬಿ.ದೇವಿಪ್ರಸಾದ, ಸುಣಗಾರ ರಾಮು, ವೈ.ಕೆ. ಶ್ರೀನಿವಾಸ, ಹರೀಶ್‌ ಸೊಬಟಿ, ರವಿಕುಮಾರ ಸಕ್ರಹಳ್ಳಿ, ಬಾಳಿಕಾಯಿ ವೀರೇಶ್‌, ಯಮನೂರ, ಬಿ.ಶಕ್ತಿಪ್ರಸಾದ, ಸುಣಗಾರ ಮಂಜುನಾಥ, ನಂದೀಶ್‌, ಕುಮಾರ ಸುಣಗಾರ, ಗೌರಜ್ಜನವರ ಕೊಟ್ರೇಶ, ಆಕಾಶ್‌ ಸೇರಿದಂತೆ ಸಮಾನ ಮನಸ್ಕರು ಗ್ರೂಪ್‌ನಲ್ಲಿ ಚರ್ಚೆ ನಡೆಸಿ ಒಂದು ಹಂತದ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಯುವಕರು ಸೋಷಿಯಲ್‌ ಮೀಡಿಯಾಗಳ ಮೂಲಕ ಕೊರೊನಾ ವಿರುದ್ದ ಜನಜಾಗೃತಿ ಜೊತೆಗೆ ಸ್ವಯಂ ಲಾಕ್‌ಡೌನ್‌ಗೆ ನಿರ್ಧಾರ ಮಾಡಿರುವುದನ್ನು ಗ್ರಾಮದ ಹಿರಿಯರು ಪ್ರಶಂಸಿಸಿದ್ದಾರೆ.

ಗ್ರಾಪಂ ಕಾಳಜಿ: ಈಗಾಗಲೇ ಗ್ರಾಪಂನವರು ಗ್ರಾಮದ ಚರಂಡಿಗಳನ್ನು ಸ್ವತ್ಛಗೊಳಿಸುವ ಮೂಲಕ ಕಾಳಜಿ ಮೆರೆದಿದ್ದಾರೆ. ವೈರಸ್‌ ತಡೆಗಟ್ಟಲು ಗ್ರಾಮದ ಎಲ್ಲ ವಾರ್ಡ್‌ಗಳಿಗೆ ಸ್ಯಾನಿಟೈಸರ್‌ ಸಿಂಪಡಣೆ ಮಾಡಿದ್ದಾರೆ.

ಗ್ರಾಪಂನ ಸದಸ್ಯರುಗಳು ಯುವಕರಿರುವುದರಿಂದ ಸ್ವತ್ಛತೆ, ಮೂಲಭೂತ ಸೌಕರ್ಯಗಳು, ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಜನರಿಗೆ ಸುಲಭವಾಗಿ ಸೂಕ್ತ ಸಮಯದಲ್ಲಿ ಒದಗುತ್ತಿವೆ.

ಟಾಪ್ ನ್ಯೂಸ್

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Woqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Woqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.