ಮಾರ್ಗಸೂಚಿ ಪಾಲನೆ ಮರೀಚಿಕೆ
ಅಗತ್ಯತೆ ಮೀರಿ ನಾಗರಿಕರ ಓಡಾಟ ! ಹೋಂ ಐಸೋಲೇಷನ್‌ನಲ್ಲಿ ಇರುವವರ ಕೈಗೆ ಬಿದ್ದಿಲ್ಲ ಮುದ್ರೆ
Team Udayavani, May 13, 2021, 6:27 PM IST
ಅರಸೀಕೆರೆ: ಸರ್ಕಾರ ಬಿಗಿ ಲಾಕ್‌ಡೌನ್ ಜಾರಿ ಹಿನ್ನೆಲೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿ ರುವಂತೆಯೇ ಸೋಂಕಿನ ಪ್ರಮಾಣ ಇಳಿ ಮುಖವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಜನರು ಈಗಲೂ ಮಾರ್ಗಸೂಚಿ ಪಾಲನೆ ಯಲ್ಲಿ ಹಿಂದೆ ಬಿದ್ದಿದ್ದಾರೆ. ಪೊಲೀಸರ ಸರ್ಕಾರದ ನಿಯಮ ಜಾರಿಗೆ ತರಲು ರೋಡಿಗಿಳಿದಿದ್ದು, ಅವರನ್ನು ಕಣ್ಣ ತಪ್ಪಿಸಿ ಜನರು ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ.
ಕೊರೊ ನಾ ದಿಂದ ಹೋಂ ಐಸೋಲೇಷನ್‌ನಲ್ಲಿ ಇರುವವರೂ ಬೆಳಗ್ಗೆ ಹಣ್ಣು ತರಕಾರಿ ಖರೀದಿಗೆ ಆಗಮಿಸುತ್ತಿದ್ದು, ಸೋಂಕು ಉಲ್ಬಣದ ಭೀತಿ ಎದುರಾಗಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡರು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿದ್ದು, ಅವರ ಅಕ್ಕ-ಪಕ್ಕದಲ್ಲಿಯೇ ಇಬ್ಬರು ಸೊಂಕೀತರು ಹಾಜರಾಗಿದ್ದು ತಿಳಿಯುತ್ತಿದ್ದಂತೆ ಹೋಂ ಐಸೋಲೇಷನ್ ಅಲ್ಲಿ ಇಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಅವಾಂತರ ಸೃಷ್ಟಿ ತಡೆಯಲು ಕಳೆದ ಬಾರಿ ಕೈಗೆ ಸೀಲ್ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಕೈಗೆ ಸೀಲ್ ಹಾಕುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಲಾಕ್‌ಡೌನ್ ವೇಳೆಯಲ್ಲಿ ಸೋಂಕಿತರು ಹೊರ ಬಂದರೆ ಮೊಕದ್ದಮೆ ದಾಖಲಿಸುವುದಗಿ ಪೊಲೀಸರು ಹೇಳುತ್ತಿದ್ದಾರೆ. ಆದರೆ, ಇವರೇ ಸೋಂಕಿತರು ಎಂದು ಹೇಗೆ ಕಂಡುಹಿಡಿಯ ತ್ತಾರೆ ಎಂಬುದು ಮಾತ್ರ ತಿಳಿ ಯುತ್ತಿಲ್ಲ ಎಂದು ಜನರು ದೂರಿದ್ದಾರೆ. ಇನ್ನು 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲು ಆನ್‌ಲೈನ್ ನೋಂದಣಿ ಮಾಡಿಕೊಳ್ಳ ಲಾಗುತ್ತಿದ್ದು, ನೋಂದಣಿ ಮಾಡಿಸಿ ಸ್ಥಳಕ್ಕೆ ತೆರಳಿದರೆ ವಾಪಸ್ ಬರುವ ಸ್ಥಿತಿ ನಿರ್ಮಾಣ ವಾಗಿದೆ. 2ನೇ ಡೋಸ್ ಪಡೆಯುವವವರು ಪರ ದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.