ಪಾರುಲ್ ಯಾದವ್ ಪಾಸಿಟಿವ್ ಟಾಕ್
Team Udayavani, May 14, 2021, 8:57 AM IST
ಸದ್ಯ ಕೋವಿಡ್ ಆತಂಕ ಮತ್ತು ಲಾಕ್‌ಡೌನ್‌ನಿಂದಾಗಿ ಸಿನಿಮಾರಂಗದ ಎಲ್ಲ ಚಟುವಟಿಕೆಗಳು ಬಂದ್ ಆಗಿದೆ. ಪ್ರೀ-ಪ್ರೊಡಕ್ಷನ್ಸ್, ಶೂಟಿಂಗ್, ಡಬ್ಬಿಂಗ್, ಪ್ರಮೋಶನ್,ಇವೆಂಟ್ಸ್ ಅಂಥ ವರ್ಷವಿಡೀ ಬಿಝಿಯಾಗಿರುತ್ತಿದ್ದ ಬಹುತೇಕ ಸ್ಟಾರ್ ನಟ-ನಟಿಯರು, ಸೆಲೆಬ್ರಿಟಿಗಳು ಸದ್ಯ ಕೆಲಸವಿಲ್ಲದೆ ಮನೆಯಲ್ಲೇ ಕೂರುವಂತೆ ಆಗಿದ್ದಾರೆ.
ನಟಿ ಪಾರುಲ್ ಯಾದವ್ ಕೂಡ ಸದ್ಯಕ್ಕೆ ಹಾಗೆ,ಮನೆಯಲ್ಲೇ ಲಾಕ್ ಆಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮುಂಬೈನಲ್ಲೇ ಹೆಚ್ಚಾಗಿ ವಾಸವಿರುವ ಪಾರುಲ್, ತಮ್ಮ ಸಿನಿಮಾದ ಶೂಟಿಂಗ್ ಮತ್ತಿತರ ಕೆಲಸಗಳಿಗಾಗಿ ಅಲ್ಲಿಂದಲೇ ಓಡಾಟ ನಡೆಸುತ್ತಿರುತ್ತಾರೆ.
ಆದರೆ ಕಳೆದ ಒಂದೂವರೆ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ, ಅಲ್ಲಿನ ಸರ್ಕಾರಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವು ದರಿಂದ, ಪಾರುಲ್ ಸಿನಿಮಾ ಕೆಲಸಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆಯಂತೆ.
ಕೋವಿಡ್ ಲಾಕ್‌ಡೌನ್ ಬಗ್ಗೆಮಾತನಾಡುವ ಪಾರುಲ್, “ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಏನೇನು ಕ್ರಮಗಳನ್ನುಕೈಗೊಳ್ಳುತ್ತದೆಯೋ ಅದೆಲ್ಲ ವನ್ನೂ ನಾವುಬೆಂಬಲಿಸಬೇಕು. ಎಲ್ಲರಂತೆ ನನಗೂ ವೈಯಕ್ತಿಕವಾಗಿ ಇದರಿಂದ ತೊಂದರೆಯಾಗುತ್ತಿದೆ.
ಇದನ್ನೂ ಓದಿ:ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!
ನನ್ನಕೆಲಸ ಕಾರ್ಯಗಳಿಗೆ ಹಿನ್ನೆಯಾಗಿದ್ದರೂ, ನಾನುಸಮಾಜದ ಭಾಗವಾಗಿ ಇದನ್ನು ಒಪ್ಪಿಕೊಳ್ಳಲೇಬೇಕು.ನಮ್ಮ ಜೀವ, ಆರೋಗ್ಯ ಎಲ್ಲವೂ ಚೆನ್ನಾಗಿದ್ದರೆ, ನಾವುಮುಂದೆ ಏನು ಬೇಕಾದ್ರೂ ಮಾಡಬಹುದು. ಹಾಗಾಗಿಸದ್ಯಕ್ಕೆ ನಮ್ಮ ರಕ್ಷಣೆ ನಾವು ಮಾಡಿಕೊಳ್ಳುವುದು ಮೊದಲ ಆದ್ಯತೆ ಆಗಿರಬೇಕು’ ಎನ್ನುತ್ತಾರೆ.
“ಸದ್ಯ ನನ್ನ ಕೈಯಲ್ಲಿ ಒಂದಷ್ಟು ಸಿನಿಮಾಗಳಿವೆ.ಅದಕ್ಕಾಗಿ ಒಂದಷ್ಟು ಕೆಲಸ ಮಾಡುತ್ತಿದ್ದೇನೆ. ಆದರೆಅದೆಲ್ಲದಕ್ಕೂ ಮುಖ್ಯ ನಮ್ಮ ಸುತ್ತಮುತ್ತಲಿನವಾತಾವರಣ ಸರಿಯಾಗಬೇಕು. ಈ ಸಮಯದಲ್ಲಿಆದಷ್ಟು ನೆಗೆಟಿವ್ ಸುದ್ದಿಗಳನ್ನು ಹಬ್ಬಿಸುವುದನ್ನುಕಡಿಮೆ ಮಾಡಿ ಪಾಸಿಟಿವ್ ಯೋಚನೆಯನ್ನು ನಮ್ಮ ಸುತ್ತಮುತ್ತಿನವರಿಗೆ ತುಂಬಿ ಅವರ ಆತ್ಮವಿಶ್ವಾಸ ಹೆಚ್ಚಿಸುವಂತೆಮಾಡಬೇಕು’ ಅನ್ನೋದು ಪಾರುಲ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.