ಭರವಸೆಯೊಂದೇ ಬೆಳಕು
Team Udayavani, May 14, 2021, 9:10 AM IST
ಕೊರೊನಾ ಮೊದಲ ಅಲೆಯ ಹೊಡೆತದಿಂದ ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಈ ವರ್ಷಕ್ಕೆ ತಮ್ಮ ಬಿಡುಗಡೆಯನ್ನು ಮುಂದೂಡಿಕೊಂಡಿದ್ದವು. ಇನ್ನು ಕಳೆದ ವರ್ಷದಂತೆ, ಈ ವರ್ಷ ಕೂಡ ಅದೇ ಸಮಯಕ್ಕೆ ಕೊರೊನಾ ಎರಡನೇ ಅಲೆಯ ಆತಂಕ ಶುರುವಾಗಿದ್ದು, ಮತ್ತೆ ಲಾಕ್‌ಡೌನ್ ಘೋಷಣೆ ಯಾಗಿದೆ. ಹೀಗಾಗಿ ಬಿಡುಗಡೆಗೆ ಸಿದ್ಧವಾಗಿದ್ದರೂ, ಬಹುತೇಕ ಸ್ಟಾರ್ ನಟರ, ಬಿಗ್ ಬಜೆಟ್ ಸಿನಿಮಾ ಗಳು ಈ ವರ್ಷವೂ ತೆರೆಗೆ ಬರೋದು ಡೌಟು ಎನ್ನುವ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ.
ಇದೇ ವೇಳೆ ಸ್ಟಾರ್ ಸಿನಿಮಾಗಳಿಗೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕರು, ಈ ವರ್ಷವೂ ಹೀಗಾದರೆ, ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ. ಕನ್ನಡದಲ್ಲಿ ಸದ್ಯದ ಮಟ್ಟಿಗೆ “ಕೋಟಿಗೊಬ್ಬ-3′, “ಭಜರಂಗಿ-2′, “ಸಲಗ’, “ಕೆಜಿಎಫ್-2′, “ವಿಕ್ರಾಂತ್ ರೋಣ’ ಹೀಗೆ ಹಲವು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಈ ವರ್ಷದಲ್ಲಿ ಈ ಎಲ್ಲ ಸಿನಿಮಾಗಳು ತೆರೆಗೆ ಬರುತ್ತವೆಯಾ? ಇಲ್ಲವಾ? ಎಂಬ ಬಗ್ಗೆ ಚಿತ್ರತಂಡಕ್ಕೂ ಸ್ಪಷ್ಟತೆಯಿಲ್ಲ. ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತನಾಡಿರುವ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರು ತಮ್ಮ ಮನದಾಳದ ಆತಂಕ, ಅಳಲನ್ನು ತಮ್ಮದೇ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸಿಕೊಳ್ಳುವುದು ತುಂಬ ಮುಖ್ಯ. ಜನರ ಜೀವ ಆರೋಗ್ಯ ಎಲ್ಲವೂ ಚೆನ್ನಾಗಿದ್ದರೆ, ಬೇರೆ ಏನು ಬೇಕಾದ್ರೂ ಮಾಡಬಹುದು. ಈ ಸಿನಿಮಾವನ್ನ ಸುದೀಪ್ ಅಭಿಮಾನಿ ಗಳಿಗಾಗಿಯೇ ಮಾಡಿದ್ದು. ಹಾಗಾಗಿ ಇದನ್ನು ಥಿಯೇಟರ್ ನಲ್ಲೇ ರಿಲೀಸ್ ಮಾಡಬೇಕು ಅನ್ನೋದು ನಮ್ಮ ಆಸೆ. ಥಿಯೇಟರ್ ಬಿಟ್ಟು ಒಟಿಟಿ ಅಥವಾ ಬೇರೆಲ್ಲೋ ಸಿನಿಮಾ ರಿಲೀಸ್ ಮಾಡುವುದಿಲ್ಲ. ಸದ್ಯ ಎಲ್ಲವೂ ಮೊದಲಿನಂತಾಗಬೇಕು ಅಂಥ ಕಾಯುತ್ತಿ ದ್ದೇವೆ. ಚಿತ್ರರಂಗ ಮೊದಲಿನ ಸ್ಥಿತಿಗೆ ಬರುವವರೆಗೂ, ನಮ್ಮ ಸಿನಿಮಾ ಬಿಡುಗಡೆ ಮಾಡುವ ಯಾವುದೇ ಯೋಚನೆ ಇಲ್ಲ.
- ಸೂರಪ್ಪ ಬಾಬು, ನಿರ್ಮಾಪಕ
ಇದನ್ನೂ ಓದಿ:ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ
ಕನ್ನಡ ಚಿತ್ರರಂಗದಲ್ಲಿ ಕಾರ್ಪೋರೆಟ್ ಶೈಲಿಯಲ್ಲಿ ಸಿನಿಮಾ ನಿರ್ಮಾಣವಾಗುವು ದಿಲ್ಲ. ಕೈಯಲ್ಲಿ ಹಣ ಇಟ್ಟುಕೊಂಡು ಸಿನಿಮಾ ಮಾಡುವ ನಿರ್ಮಾಪಕರ ಸಂಖ್ಯೆ ತುಂಬ ಕಡಿಮೆ. ಇಲ್ಲಿನ ಬಹುತೇಕ ನಿರ್ಮಾಪಕರು ಫೈನಾನ್ಸಿಯರ್ ಮೇಲೆ ಅವಲಂಬಿತರಾಗಿ ರುತ್ತಾರೆ.
ಹೀಗಾಗಿ ಅಂದು ಕೊಂಡ ಟೈಮ್ ಒಳಗೆ ಸಿನಿಮಾ ಮಾಡಿ ಅದು ರಿಲೀಸ್ ಆಗಿ ಹಣ ಬಂದ್ರೆ, ಅದರಿಂದ ಫೈನಾನ್ಸಿಯರ್ಗೆ ಬಡ್ಡಿ, ಅಸಲು ಎರಡನ್ನೂ ಪಾವತಿಸಬಹುದು. ಇಲ್ಲದಿದ್ರೆ, ಸಿನಿಮಾ ರಿಲೀಸ್ ಆಗಿ ಹಣ ಬರುವವರೆಗೂ ಬಡ್ಡಿ ಕಟ್ಟುತ್ತಲೇ ಇರಬೇಕು. ಇವತ್ತು ತುಂಬ ಬಿಗ್ ಬಜೆಟ್ ನಿರ್ಮಾಪಕರ ಸ್ಥಿತಿ ಹಾಗೇ ಆಗಿದೆ. ಎರಡು ವರ್ಷದಿಂದ ತಮ್ಮ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗದೆ, ಅನೇಕ ನಿರ್ಮಾಪಕರು ಬಡ್ಡಿ ಕಟ್ಟುತ್ತಾ ನಷ್ಟ ಅನುಭವಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಆಗೋದು ತಡವಾದಷ್ಟು, ಬಂದ ಲಾಭವೆಲ್ಲ ಸಾಲ ಕಟ್ಟೋದಕ್ಕೇ ಸರಿಯಾಗುತ್ತದೆ. ಆದ್ರೆ ಈಗಿನ ಪರಿಸ್ಥಿತಿ ಯಾರ ನಿಯಂತ್ರಣದಲ್ಲೂ ಇಲ್ಲದಿರೋದ್ರಿಂದ, ಏನೂ ಮಾಡಲಾಗದು. ಸದ್ಯಕ್ಕೆ ಎಲ್ಲರೂ ತಮ್ಮ ಜೀವದ ಕಡೆಗೆ ಗಮನ ಹರಿಸಬೇಕಾಗಿದ್ದರಿಂದ, ಮೊದಲು ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಸುಧಾರಿಸಬೇಕು. ಆನಂತರವೇ ಬೇರೆ ಯೋಚನೆ. ಹಾಗಾಗಿ ಸಿನಿಮಾ ಬಿಡುಗಡೆಯ ಬಗ್ಗೆ ಈಗಲೇ ಏನೂ ಹೇಳಲಾರೆ.
ಜಾಕ್ ಮಂಜುನಾಥ್, ನಿರ್ಮಾಪಕ ಮತ್ತು ವಿತರಕ
ಕಳೆದ ವರ್ಷ ಲಾಕ್‌ಡೌನ್ ಆದಾಗ ಕೆಲ ತಿಂಗಳಲ್ಲಿ ಎಲ್ಲ ಸರಿ ಹೋಗುತ್ತೆ, ಥಿಯೇಟರ್ ಓಪನ್ ಆಗಿ ಸಿನಿಮಾಗಳು ರಿಲೀಸ್ ಆಗುತ್ತವೆ ಅಂಥ ಭರವಸೆನಾದ್ರೂ ಕಾಣಿಸುತ್ತಿತ್ತು. ಆದ್ರೆ ಈ ಸಲ ಲಾಕ್ ಡೌನ್‌ನಲ್ಲಿ ಮುಂದೇನು ಅನ್ನೋದೆ ಕಾಣಿಸ್ತಿಲ್ಲ. ಈ ಸಾವು-ನೋವು ನೋಡ್ತಿದ್ರೆ, ಈಗಿನ ಪರಿಸ್ಥಿತಿಯಲ್ಲಿ ಉಸಿರು ಉಳಿಸಿಕೊಳ್ಳೋದೆ ದೊಡª ವಿಷಯ. ಎಲ್ಲ ಸರಿಯಾಗಿದ್ದರೆ, ಈ ವಾರ “ಭಜರಂಗಿ-2′ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಈಗ ಲಾಕ್‌ಡೌನ್‌ನಿಂದಾಗಿ ಇಡೀ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಜೀರೋ ಆಗಿದೆ. ಸದ್ಯ ನಮ್ಮ ಬ್ಯಾನರ್‌ನಲ್ಲಿ “ಭಜರಂಗಿ-2′, “ಶಿವ 143′ ಎರಡೂ ಸಿನಿಮಾಗಳೂ ರಿಲೀಸ್‌ಗೆ ರೆಡಿಯಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಮುಂದೇನಾಗುತ್ತದೆ ಅನ್ನೋದನ್ನ ಕಾದು ನೋಡುವುದನ್ನ ಬಿಟ್ಟರೆ ಬೇರೆ ದಾರಿ ಇಲ್ಲ. ಎಲ್ಲ ಸರಿಯಾದ ಮೇಲೆ ಮುಂದಿನ ಯೋಚನೆ ಮಾಡಬೇಕು.
- ಜಯಣ್ಣ, ನಿರ್ಮಾಪಕ ಮತ್ತು ವಿತರಕ
ಇವತ್ತು ಎಲ್ಲ ಕ್ಷೇತ್ರಗಳಿಗಿಂತ ಸಿನಿಮಾ ಕ್ಷೇತ್ರಕ್ಕೆ ಹೆಚ್ಚು ನಷ್ಟವಾಗುತ್ತಿದೆ. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಸೀಮಿತ ಮಾರುಕಟ್ಟೆ, ಪ್ರೇಕ್ಷಕ ವರ್ಗ ಇರೋದ್ರಿಂದ, ಅದರ ನೇರ ಪರಿಣಾಮ ನಮ್ಮ ಚಿತ್ರರಂಗದ ಮೇಲೆ ಆಗುತ್ತಿದೆ. ಆದ್ರೆ, ಸದ್ಯದ ಪರಿಸ್ಥಿತಿಯಲ್ಲಿ ಜನರ ಯೋಗಕ್ಷೇಮ ತುಂಬ ಮುಖ್ಯ. ಜನ ಆರೋಗ್ಯದಿಂದ ಇದ್ದು, ಪರಿಸ್ಥಿತಿ ಸುಧಾರಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಆದಷ್ಟು ಬೇಗ ಸರಿಹೋಗುತ್ತದೆ ಎಂಬ ನಿರೀಕ್ಷೆ, ಭರವಸೆಯಲ್ಲಿದ್ದೇವೆ. ಎಲ್ಲವೂ ಸರಿ ಹೋಗುವವರೆಗೆ ನಮ್ಮ ಸಿನಿಮಾ ಬಿಡುಗಡೆಯ ಬಗ್ಗೆ ಏನೂ ಯೋಚಿಸುವುದಿಲ್ಲ.
- ಕೆ.ಪಿ ಶ್ರೀಕಾಂತ್, ನಿರ್ಮಾಪಕ
ಜಿ.ಎ ಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್: ಯೂಟ್ಯೂಬ್!
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.