ಆಟೋ ಬೇಕಿದ್ದರೆ ಸಹಾಯವಾಣಿ ಸಂಪರ್ಕಿಸಿ: ಡಿವೈಎಸ್ಪಿ ರಂಗಪ್ಪ
Team Udayavani, May 14, 2021, 2:12 PM IST
ದೊಡ್ಡಬಳ್ಳಾಪುರ: ನಗರದ 31 ವಾರ್ಡ್‌ಗಳಿಗೂ ಪೊಲೀಸ್ ಠಾಣೆಯಿಂದ ಆಟೋ ನಿಜಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಆಟೋಗಳ ಸಹಾಯ ಬೇಕಿದ್ದಲ್ಲಿ ಪೊಲೀಸ್ ಠಾಣೆಯಲ್ಲಿ ತೆರೆದಿರುವ ಸಹಾಯವಾಣಿ ಸಂಪರ್ಕಿಸಿ ಎಂದು ಡಿವೈಎಸ್ಪಿ ಟಿ.ರಂಗಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಹಣ್ಣು, ತರಕಾರಿ ನಗರದ 31 ವಾರ್ಡ್ ಗಳಲ್ಲೂ ಮಾರಾಟ ಮಾಡುವ ಮೂಲಕ ಯಾರೂ ಸಹ ಎಪಿಎಂಸಿ ಸೇರಿದಂತೆ ಮಾರುಕಟ್ಟೆ ಪ್ರದೇಶದವರೆಗೂ ನಡೆದುಕೊಂಡು ಬಂದು ಹೋಗುವಂತೆ ಹಾಗೂ ಜನ ಸಂದಣಿ ಹೆಚ್ಚಾಗುವುದನ್ನು ತಪ್ಪಿಸಲಾ ಗುತ್ತಿದೆ ಎಂದರು.
ಪ್ರತಿ ವಾರ್ಡ್‌ಗಳಿಗೆ ತಲಾ 4 ತಳ್ಳುವ ಗಾಡಿಗಳನ್ನು ನಿಗದಿಮಾಡಿ ಅನುಮತಿ ನೀಡಲಾಗಿದೆ. ಮಾರುಕಟ್ಟೆಗಿಂತಲು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚಿಸಲಾಗಿದೆ ಎಂದರು.
ನಗರದಲ್ಲಿ ನಿರ್ಗತಿಕರು, ವಲಸೆ ಕಾರ್ಮಿಕರು ಇರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಜನರು ಇರುವಲ್ಲಿಗೆ ದಿನಕ್ಕೆ 2 ಬಾರಿ ಆಹಾರ ಪೊಟ್ಟಣ ತಲುಪಿಸಲಾಗುತ್ತಿದೆ. ನಗರದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆಗೆ ಊಟದ ಪೊಟ್ಟಣಗಳ ವಿತರಿಸಲಾಗುವುದು. ನಗರ ದಲ್ಲಿ ಊಟ ಇಲ್ಲದೆ ಕಷ್ಟಕ್ಕೆ ಸಿಲುಕಿರುವ ಯಾರಾದರು ಕಂಡು ಬಂದರೆ ಪೊಲೀಸರ ಗಮನಕ್ಕೆ ತಂದರೆ ಸೂಕ್ತ ವ್ಯವಸ್ಥೆ ಮಾಡ ಲಾಗುವುದು. ಊಟದ ಸೌಲಭ್ಯ ಮಾಡಲು ನಗರದ ಹಲವಾರು ಸಂಘಟನೆ ಗಳು ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ ಎಂದರು. ದೊಡ್ಡಬಳ್ಳಾಪುರ ಉಪವಿಭಾಗ ಸಹಾಯವಾಣಿ 7411707112 ಸಂಪರ್ಕಿ ಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.