ವಾರ್ಡ್‌ವಾರು ಮಾರುಕಟ್ಟೆಗೆ ಇದು ಸಕಾಲ
Team Udayavani, May 14, 2021, 9:03 PM IST
ಎಚ್.ಕೆ. ನಟರಾಜ
ದಾವಣಗೆರೆ: ಪ್ರಸ್ತುತ ಎದುರಿಸುತ್ತಿರುವ ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಹಾಗೂ ಭವಿಷ್ಯದಲ್ಲಿ ಜನದಟ್ಟಣೆ ತಪ್ಪಿಸಿ ಜನಾರೋಗ್ಯ ಕಾಪಾಡುವ ದಿಸೆಯಲ್ಲಿ ಮಹಾನಗರ ಪಾಲಿಕೆ, ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಿಸಲು ಮಹಾನಗರ ಪಾಲಿಕೆ ಗಂಭೀರ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ದಾವಣಗೆರೆ ಸುತ್ತಲಿನ ಗ್ರಾಮೀಣ ಜನರು ಹಾಗೂ ಮಹಾನಗರದ ಜನರು ಹಣ್ಣು, ತರಕಾರಿ, ಆಹಾರಧಾನ್ಯಗಳಿಗಾಗಿ ಕೆ.ಆರ್. ಮಾರ್ಕೆಟ್, ಚಾಮರಾಜಪೇಟೆ, ಚೌಕಿಪೇಟೆ, ಗಡಿಯಾರ ವೃತ್ತ, ವಿಜಯ ರಸ್ತೆ, ದೊಡ್ಡಪೇಟೆ, ಮಹಾವೀರ ರಸ್ತೆ, ಎಸ್‌ಕೆಪಿ ರಸ್ತೆ, ಪ್ರದೇಶಗಳಲ್ಲಿನ ಮಾರುಕಟ್ಟೆಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇವೆಲ್ಲ ಮಾರುಕಟ್ಟೆ ಪ್ರದೇಶಗಳು ಒಂದೇ ಕಡೆಯಿದ್ದು ದಾವಣಗೆರೆಯ ಪ್ರಮುಖ ವ್ಯಾಪಾರಿ ಸ್ಥಳ ಎನಿಸಿಕೊಂಡಿದೆ. ಈ ಮಾರುಕಟ್ಟೆ ಪ್ರದೇಶದಲ್ಲಿ ಹಣ್ಣು, ತರಕಾರಿ, ಧಾನ್ಯ ವ್ಯಾಪಾರ ಭರಪೂರ ನಡೆಯುತ್ತದೆ.
ಈ ಪ್ರದೇಶದಲ್ಲಿಯೇ ಹೆಚ್ಚು ಜವಳಿ ಅಂಗಡಿಗಳು, ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳ ಮಾರಾಟ ಅಂಗಡಿಗಳು ಸಹ ಇರುವುದರಿಂದ ಇಲ್ಲಿ ನಿತ್ಯ ಜನಜಾತ್ರೆ ಮಾಮೂಲಾಗಿದೆ. ಈ ಕೇಂದೀಕೃತ ಮಾರುಕಟ್ಟೆ ಪ್ರದೇಶವನ್ನು ವಿಕೇಂದ್ರೀಕರಿಸಲು, ಕೆಲವೇ ಕೆಲವು ಮಾರುಕಟ್ಟೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ವಾರ್ಡ್‌ವಾರು ಮಾರುಕಟ್ಟೆ ಸಹಕಾರಿಯಾಗಲಿದೆ. ವಾರ್ಡ್‌ಗೊಂಡು ಮಾರುಕಟ್ಟೆ ನಿರ್ಮಾಣವಾಗಿದರೆ ಜನಸಂದಣಿ ತಪ್ಪುವ ಜತೆಗೆ ಜನರಿಗೂ ದೂರದ ಮಾರುಕಟ್ಟೆಗೆ ಹೋಗಿ ಬರಲು ವ್ಯಯಿಸುವ ವಾಹನ ಇಂಧನ ಉಳಿತಾಯವಾಗುವ ಜತೆಗೆ ಅಮೂಲ್ಯ ಸಮಯವೂ ಉಳಿತಾಯವಾಗುತ್ತದೆ. ಈ ವ್ಯವಸ್ಥೆಯಿಂದ ಹಲವರಿಗೆ ವಾರ್ಡ್‌ಗಳಲ್ಲಿ ಉದ್ಯೋಗ ಸೃಷ್ಟಿ ಮಾಡಿಕೊಟ್ಟಂತೆಯೂ ಆಗುತ್ತದೆ.
ಈ ವ್ಯವಸ್ಥೆ ಜಾರಿಯಾದರೆ ಭವಿಷ್ಯದಲ್ಲಿ ಜನದಟ್ಟಣೆಯಿಂದ ಬರಬಹುದಾದ ವೈರಾಣುಗಳಿಂದ ಜನರು ತಮ್ಮನ್ನ ತಾವು ಸುಲಭವಾಗಿ ರಕ್ಷಿಸಿಕೊಳ್ಳಲು ಸಹ ಅನುಕೂಲವಾಗಲಿದೆ ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.
ಕಷ್ಟದ ಕೆಲಸವಲ್ಲ…: ಮಹಾನಗರದಲ್ಲಿ 45ವಾಡ್ ìಗಳಿದ್ದು ಪ್ರತಿ ವಾರ್ಡ್‌ನಲ್ಲಿ 10-12ಸಾವಿರದ ವರೆಗೂ ಜನಸಂಖ್ಯೆ ಇದೆ. ಪ್ರತಿ ವಾರ್ಡ್ ಎರಡೂ ಕಿ.ಮೀ. ವ್ಯಾಪ್ತಿ ಹೊಂದಿದೆ. ಪ್ರತಿ ವಾರ್ಡ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಪಾಲಿಕೆಗೆ ಕಷ್ಟದ ಕೆಲಸವೂ ಆಗದು. ವಾರ್ಡ್‌ಗಳಲ್ಲಿರುವ ಬಯಲು ಜಾಗೆಗಳನ್ನು ಮಾರುಕಟ್ಟೆಗಾಗಿ ಬಳಸಿಕೊಂಡು ವ್ಯಾಪಾರಿಗಳಿಗೆ ಒಂದಿಷ್ಟು ನೀರು, ಶೌಚಾಲಯದಂಥ ಮೂಲಸೌಲಭ್ಯ ಹಾಗೂ ಗ್ರಾಹಕರಿಗೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿದರೆ ಸಾಕಾಗುತ್ತದೆ. ಇನ್ನು ಇದರ ನಿರ್ವಹಣೆಗಾಗಿ ಪಾಲಿಕೆಗೆ ಒಂದಿಷ್ಟು ಆದಾಯವೂ ಸಂಗ್ರಹವಾಗುತ್ತದೆ. ವಾರ್ಡ್‌ಗೊಂದು ಮಾರುಕಟ್ಟೆ ಮಾಡಿದರೆ ಸಾವಿರಾರು ಜನರಿಗೆ ವ್ಯಾಪಾರದ ಹೊಸ ಉದ್ಯೋಗ ಸೃಷ್ಟಿಸಿದಂತೆಯೂ ಆಗುತ್ತದೆ. ಜನರಿಗೂ ತಮ್ಮ ವಾರ್ಡ್‌ನಲ್ಲಿಯೇ ಹಣ್ಣು, ತರಕಾರಿ, ಧಾನ್ಯ ಸಿಗುವ ಜತೆಗೆ ಒಂದೇ ಕಡೆ ಜನದಟ್ಟಣೆ ಆಗುವುದು ತಪ್ಪಿದಂತಾಗುತ್ತದೆ. ರೈತರಿಗೂ ವಾರ್ಡ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟರೆ ವಾರದ ಒಂದು ದಿನ ವಾರ್ಡ್‌ಗಳಲ್ಲಿಯೂ ರೈತ ಸಂತೆಯೂ ಮಾಡಬಹುದಾಗಿದೆ. ರೈತರಿಗೂ ತಮ್ಮ ಉತ್ಪನ್ನ ಮಾರಾಟದ ಅವಕಾಶಗಳು ಹೆಚ್ಚಾಗಿ ಉತ್ತಮ ದರವೂ ಸಿಗಲಿದೆ. ಒಟ್ಟಾರೆ ವಾರ್ಡ್‌ವಾರು ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ಮಹಾನಗರ ಪಾಲಿಕೆ ಶೀಘ್ರ ಚಿಂತನೆ ಮಾಡಿ ದಿಟ್ಟ ಹೆಜ್ಜೆ ಇಡಲು ಇದು ಸಕಾಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.