![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 15, 2021, 9:19 AM IST
ಹುಣಸೂರು: ರಾಜ್ಯ ಮತ್ತು ದೇಶದಲ್ಲಿ ಕೋವಿಡ್ 2 ನೇ ಅಲೆ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಅಮೂಲ್ಯ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದೆ ತಾತ್ಸಾರ ಮಾಡಿದ್ದರಿಂದಲೇ ಇಂದು ಜನಸಾಮಾನ್ಯರು ಜೀವ ಬಲಿಕೊಡಬೇಕಾಗಿದೆ, ಮೊದಲ ಅಲೆ ನಂತರದಲ್ಲಿ ಎರಡನೇ ಅಲೆ ಬಗ್ಗೆ ಮುನ್ಸೂಚನೆ ಇದ್ದರೂ ಸಹ ಕೇಂದ್ರ ಸರಕಾರ ಲಸಿಕೆ ಸಿದ್ದಪಡಿಸಿಕೊಳ್ಳುವಲ್ಲಿ ಉಡಾಫೆ ಮಾಡಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರ್‌ನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಬ್ಬಲ್ ಇಂಜಿನ್ ಎಂದು ತಮಗೆ ತಾವೇ ಬೆನ್ನು ತಟ್ಟಿಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರ ಕೊರೋನಾ ನಿಯಂತ್ರಣದಲ್ಲಿ ಸಂಪೂರ್ಣ ಎಡವಿದೆ. ಮೊದಲ ಹಂತದ ಲಸಿಕೆ ಪಡೆದವರು ಎರಡನೇ ಲಸಿಕೆ ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲೇ 18ರಿಂದ 44ವರ್ಷದವರಿಗೆ ಲಸಿಕೆ ನೀಡಲು ನೊಂದಣಿ ಮಾಡಿಸಿರುವುದು ಎಷ್ಟು ಸರಿ, ಮೊದಲು ಎರಡನೇ ಹಂತದ ಲಸಿಕೆ ಮುಕ್ತಾಯಕ್ಕೆ ದಿನಾಂಕ ನಿಗದಿಪಡಿಸಿ. ನಂತರದಲ್ಲಿ ಯುವ ಸಮುದಾಯಕ್ಕೂ ನೀಡಲಿ ಎಂದರು.
ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ತಾರಕಕ್ಕೆ; ಗಾಜಾದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿಕೆ
ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಮದ್ದು ಕಂಡು ಹಿಡಿದ ದೇಶವೆಂಬ ಅಹಂನಲ್ಲಿದ್ದ ದೇಶದ ಪ್ರಧಾನಿಗೆ ಎರಡನೇ ಅಲೆ ತಕ್ಕ ಪಾಠ ಕಲಿಸಿದೆ ಎಂದರು. ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಗಿಟ್ಟಿಸಿಕೊಳ್ಳಲು 6.6 ಕೋಟಿ ಡೋಸೇಜ್ ಅನ್ನು ರಪ್ತು ಮಾಡಿದ ಪ್ರಧಾನಿ ರಾಷ್ಟ್ರದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ 200 ಕೋಟಿಯಷ್ಟು ಲಸಿಕೆ ಸಿದ್ದಪಡಿಸಿಟ್ಟುಕೊಳ್ಳದೆ ನಾಗರೀಕರ ಜೀವನದ ಜೊತೆ ಚೆಲ್ಲಾಟ ವಾಡಿದ್ದಾರೆಂದು ಜರಿದರು.
ಡಬ್ಬಲ್ ಕೂಲಿಗೆ ಆಗ್ರಹ: ಉದ್ಯೋಗ ಖಾತರಿಯಲ್ಲಿ(ನರೇಗಾ)ದಲ್ಲಿ ಈಗ ನೀಡುತ್ತಿರುವ ರೂ.273 ಕೂಲಿಗೆ ಬದಲು ಎರಡು ಪಟ್ಟು ಹೆಚ್ಚಿಸಿ, ಕೂಲಿ ಇಲ್ಲದೆ ಅತಂತ್ರರಾಗಿರುವ ಶ್ರಮಿಕ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬಿಸಬೇಕು ಎಂದರು.
ಸದಸ್ಯತ್ವದ ಅವಧಿ ತೃಪ್ತಿ ತಂದಿದೆ:
ತಮ್ಮ ಜಿ.ಪಂ ಸದಸ್ಯರ ಅವಧಿ ಮುಗಿದಿದ್ದು. 5 ವರ್ಷದ ಅಧಿಕಾರದ ಅವಧಿಯಲ್ಲಿ ಅಡಗೂರು ಎಚ್. ವಿಶ್ವನಾಥ್ ಶಾಸಕರಾಗಿದ್ದ ಅವಧಿ ಅಷ್ಟಾಗಿ ಅಭಿವೃದ್ದಿ ಪಡಿಸಲಾಗಿರಲಿಲ್ಲ. ಶಾಸಕ ಎಚ್.ಪಿ.ಮಂಜುನಾಥ್ ಉತ್ತಮ ಸಾಥ್ ನೀಡಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ, ಹಿಂದೆ ಬನ್ನಿಕುಪ್ಪೆ ಕ್ಷೇತ್ರದ ದೊಂಬರ ಕಾಲೋನಿಯ ಡೊಂಗ್ರಿ ಗೆರಾಸಿಯಾ ಅಲೆಮಾರಿ ಸಮೂದಾಯದ ಸಮುದಾಯ ಕಳೆದ 4 ದಶಕಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿದ್ದ 23 ಕುಟುಂಬಗಳಿಗೆ ನಿವೇಶನ ಕೊಡಿಸುವ ಭರವಸೆ ನೀಡಿದ್ದಂತೆ ಅವರಿಗೆ ತಮ್ಮ ಅಧಿಕಾರದ ಅಂತಿಮ ದಿನದಲ್ಲಿ ಹಕ್ಕು ಪತ್ರ ನೀಡಿರುವುದು ತೃಪ್ತಿ ಸಿಕ್ಕಿದೆ ಎಂದರು.
ಇದನ್ನೂ ಓದಿ: ‘ತೌಖ್ತೆ’ ಚಂಡಮಾರುತ ಪರಿಣಾಮ: ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.