ಕೋವಿಡ್‌ನ‌ಲ್ಲಿ ಭಕ್ತರ ಕೈ ಹಿಡಿದ ಮಠಗಳು

ತೋಂಟದಾರ್ಯ ಮಠದಿಂದ ಕೋವಿಡ್‌ ಕೇರ್‌ ಸೆಂಟರ್‌! ­ಶಾಲಾ ಕಟ್ಟಡ ಬಿಟ್ಟು ಕೊಡಲು ಸಜ್ಜಾದ ಅನ್ನದಾನೀಶ್ವರ ಶ್ರೀ

Team Udayavani, May 15, 2021, 6:58 PM IST

cats

ವರದಿ : ವೀರೇಂದ್ರ ನಾಗಲದಿನ್ನಿ

ಗದಗ: ಕರ್ನಾಟಕ ಏಕೀಕರಣ, ಕನ್ನಡ ಜಾಗೃತಿ ಹಾಗೂ ಅಕ್ಷರ, ಅನ್ನದಾಸೋಹ, ಸೌಹಾರ್ದತೆ ಸಾರುವ ಮೂಲಕ ಗಮನ ಸೆಳೆದಿರುವ ಜಿಲ್ಲೆಯ ಹತ್ತಾರು ಮಠಗಳು ಇದೀಗ ಕೋವಿಡ್‌-19ರ ವಿರುದ್ಧ ಸಮರ ಸಾರಿವೆ.

ಜಿಲ್ಲೆಯ ಜನಸಾಮಾನ್ಯರ ಮಠ ಎಂಬ ಖ್ಯಾತಿ ಪಡೆದಿರುವ ಜ| ತೋಂಟದಾರ್ಯ ಮಠ ಹಾವೇರಿಯಲ್ಲಿರುವ ಆರ್ಯುವೇದ ಕಾಲೇಜಿನಲ್ಲಿ 60 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ ನಿರ್ಮಿಸುತ್ತಿದೆ. ಅದಕ್ಕಾಗಿ ಆಕ್ಸಿಜನ್‌ ಪೈಪ್‌ಲೈನ್‌ ಅಳವಡಿಕೆ ಕಾರ್ಯವೂ ನಡೆದಿದೆ. ಗದಗ ಚಿರಾಯು ಆಸ್ಪತ್ರೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಪೂರ್ಣಗೊಂಡ ಬಳಿಕ ಜಿಲ್ಲಾಡಳಿತದ ಸಹಯೋಗದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಅಗತ್ಯವಾದರೆ, ಜಿಲ್ಲಾಡಳಿತ ಸೂಚಿಸುವ ಸ್ಥಳಕ್ಕೆ ಆಹಾರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಶ್ರೀಮಠದ ಆಡಳಿತಾ ಧಿಕಾರಿ ಎಸ್‌.ಎಸ್‌.ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಕಳೆದ ಬಾರಿ ಜನರಿಗೆ ಆಹಾರ ಕಿಟ್‌ ಒದಗಿಸಲಾಗಿತ್ತು. ಇತ್ತೀಚೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಜನರಿಗೆ ಒಂದು ದಿನ ಮಧ್ಯಾಹ್ನ ಊಟ ವಿತರಿಸಲಾಯಿತು. ನಮ್ಮಲ್ಲಿ ಸ್ಥಳಾವಕಾಶಕ್ಕೆ ಕೊರತೆಯಿಲ್ಲ. ಶ್ರೀಮಠದಿಂದಲೇ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲು ವೈದ್ಯರು, ಸಿಬ್ಬಂದಿ ಬೇಕಾಗುತ್ತದೆ. ಆಸಕ್ತ ವೈದ್ಯರು ಅಥವಾ ಜಿಲ್ಲಾಡಳಿತ ಬಯಸಿದರೆ ನಮ್ಮ ಶಾಲಾ ಕಟ್ಟಡವನ್ನೇ ಬಿಟ್ಟು ಕೊಡುತ್ತೇವೆ ಎಂದು ಮುಂಡರಗಿ ಸಂಸ್ಥಾನಮಠದ ನಾಡೋಜ ಜ| ಡಾ|ಅನ್ನದಾನೀಶ್ವರ ಸ್ವಾಮೀಜಿ ಹೇಳಿದ್ದಾರೆ.

ಅಗತ್ಯವಿರುವ ಭಕ್ತರಿಗೆ ಆಸ್ಪತ್ರೆಗಳಲ್ಲಿ ಬೆಡ್‌ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇವೆ. ಜಿಲ್ಲಾಡಳಿತ ಬಯಸಿದರೆ ಶ್ರೀಮಠದಲ್ಲಿರುವ 5 ಸಾವಿರ ಚದರ ಅಡಿ ವಿಸ್ತ್ರೀರ್ಣದ ಎರಡು ಅಂತಸ್ತಿನ ಕಟ್ಟಡ ಬಿಟ್ಟು ಕೊಡುತ್ತೇವೆ ಎಂದು ಬಾಲೆಹೊಸೂರು ದಿಂಗಾಲೇಶ್ವರಮಠದ ಶ್ರೀ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಕಳೆದ ಬಾರಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮೂಲಕ 10 ಲಕ್ಷ ರೂ. ಚೆಕ್‌ ನೀಡಿದ್ದ ಹಾಗೂ ಭಕ್ತರಿಗೆ ಆಹಾರ ಕಿಟ್‌ ಒದಗಿಸಿದ್ದ ಹಾಲಕೆರೆ ಅನ್ನದಾನೀಶ್ವರ ಮಠ ಈ ಬಾರಿ ಲಸಿಕಾಕರಣಕ್ಕೆ ಒತ್ತು ನೀಡಿದೆ. ಕಳೆದ ಬಾರಿಯೂ ನೆರವು: ಕಳೆದ ವರ್ಷ ಎದುರಾಗಿದ್ದ ಕೊರೊನಾ ಒಂದನೇ ಅಲೆಯಲ್ಲಿ ಜನರಿಗೆ ಆಹಾರ ಕಿಟ್‌, ಮಾಸ್ಕ್, ಸ್ಯಾನಿಟೈಸರ್‌ ವಿತರಿಸುವ ಮೂಲಕ ಜಿಲ್ಲೆಯ ಮಠಗಳು ಸಹಾಯ ಹಸ್ತ ಚಾಚಿದ್ದವು.

ಮುಂಡರಗಿ ಅನ್ನದಾನೀಶ್ವರ ಮಠ, ಗದಗಿನ ಜ|ತೋಂಟದಾರ್ಯ ಮಠಗಳು ಭಕ್ತರಿಗೆ ಆಹಾರ ಕಿಟ್‌, ಮಾಸ್ಕ್ ವಿತರಿಸಿದ್ದವು. ಶಿರಹಟ್ಟಿ ಫಕ್ಕೀರೇಶ್ವರ ಸ್ವಾಮಿ ಮಠ ಕಳೆದ ಬಾರಿ ಸರ್ಕಾರಕ್ಕೆ 2 ಲಕ್ಷ ರೂ. ಚೆಕ್‌ ನೀಡಿತ್ತು. ಆದರೆ ಈ ಬಾರಿ ಕೊರೊನಾ ಜಾಗೃತಿ ಕೈಗೊಂಡಿವೆ. ಶಿವಾನಂದ ಮಠ, ಭೈರನಹಟ್ಟಿ ದೊರೆಸ್ವಾಮಿಮಠ ಸೇರಿದಂತೆ ಅನೇಕ ಮಠಗಳು ಬರ, ನೆರೆ, ಅತಿವೃಷ್ಟಿ ಸೇರಿದಂತೆ ಅನೇಕ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ನೆರವು ನೀಡುವುದರ ಜತೆಗೆ ಭಕ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿವೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಹಲವು ಮಠಗಳು ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ತಾತ್ಕಾಲಿಕ ಆಸ್ಪತ್ರೆಗಳ ಆರಂಭಕ್ಕೆ ಹಿಂದೇಟು ಹಾಕುತ್ತಿವೆ.

ಟಾಪ್ ನ್ಯೂಸ್

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.