ಕೋವಿಡ್ ಎದುರಿಸಲು ಕುಂದಾಪುರ, ಬೆಳ್ತಂಗಡಿ : ಪೂರ್ವಸಿದ್ಧತೆ ಪರ್ವ

Team Udayavani, May 16, 2021, 6:55 AM IST

ಕೋವಿಡ್ ಎದುರಿಸಲು ಕುಂದಾಪುರ, ಬೆಳ್ತಂಗಡಿ : ಪೂರ್ವಸಿದ್ಧತೆ ಪರ್ವ

ಬೆಳ್ತಂಗಡಿ ಹಾಗೂ ಕುಂದಾಪುರ ಕ್ಷೇತ್ರಗಳಲ್ಲಿ ಕೊರೊನಾ ಎದುರಿಸಲು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸೇವಾ ಸಂಸ್ಥೆಗಳನ್ನೂ ಕೈಂಕರ್ಯಕ್ಕೆ ಸಜ್ಜುಗೊಳಿಸಲಾಗಿದೆ. ಆಮ್ಲಜನಕ, ಬೆಡ್‌ ಕೊರತೆಯಂಥ ಸಮಸ್ಯೆಗಳನ್ನು ನಿಭಾಯಿಸಲು ಯೋಜನೆ ರೂಪಿಸಲಾಗಿದೆ ಎಂಬುದು ಉಭಯ ಕ್ಷೇತ್ರಗಳ ಶಾಸಕರ ಅಭಿಪ್ರಾಯ.

ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ:

1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್‌ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?

ಪುರಸಭೆ ಹಾಗೂ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್ಫೋರ್ಸ್‌ ಸಭೆಗಳು ನಡೆಯುತ್ತಿದ್ದು ಆರೋಗ್ಯ ಇಲಾಖೆಯ ವಾರ್‌ರೂಂ ಕಾರ್ಯನಿರತವಾಗಿದೆ. ಆರೋಗ್ಯ ಇಲಾಖೆ ಜತೆಗೆ ಕಂದಾಯ, ಪೊಲೀಸ್‌ ಸೇರಿದಂತೆ ಎಲ್ಲ ಇಲಾಖೆಗಳನ್ನೂ ಇದಕ್ಕಾಗಿ ಸಜ್ಜುಗೊಳಿಸಲಾಗಿದೆ.

2.  ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್‌ ಬಿ) ರೂಪಿಸಿದ್ದೀರಾ?

ಹಾಸಿಗೆಗಳ ಸರಕಾರಿ ಕೋವಿಡ್‌ ಆಸ್ಪತ್ರೆ ಅಲ್ಲದೇ, ಕುಂದಾಪುರ ಹಳೆ ಆದರ್ಶ ಆಸ್ಪತ್ರೆಯನ್ನು 60 ಹಾಸಿಗೆಗಳ ಆಕ್ಸಿಜನ್‌ ಬೆಡ್‌ಗಳಿರುವ ಸರಕಾರಿ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಕಳೆದ ಬಾರಿ ಇದ್ದ ವಿರೋಧ ಈ ಬಾರಿ ಇಲ್ಲ. ಬಿಸಿಎಂ ಹಾಸ್ಟೆಲ್‌ನಲ್ಲಿ ರೆಡ್‌ಕ್ರಾಸ್‌ ಮೂಲಕ 75 ಹಾಸಿಗೆಗಳ ಐಸೋ ಲೇಶನ್‌ ಸೆಂಟರ್‌ ತೆರೆಯಲಾಗಿದೆ. ಅಗತ್ಯವಿದ್ದರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಐಸೋಲೇಶನ್‌ ಸೆಂಟರ್‌ ತೆರೆಯಲಾಗುವುದು.

3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?

ರೋಗಲಕ್ಷಣ ಇದ್ದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ. ಸ್ವತಃ ಸಾಕಷ್ಟು ಜಾಗರೂಕತೆ ಮಾಡಿದ್ದರೂ ನನಗೆ ಪಾಸಿಟಿವ್‌ ಬಂದು ಗುಣವಾಗಿದೆ. ಕಳೆದ ಬಾರಿ 3 ಲಕ್ಷ ಮಾಸ್ಕ್ಗಳನ್ನು, ಸ್ಯಾನಿಟೈಸರ್‌, ಜೀವರಕ್ಷಕಗಳನ್ನು ನೀಡಲಾಗಿದೆ. ಮಾಸ್ಕ್ ಉಪಯೋಗಿಸುವುದು ಹೇಗೆ ಎಂಬ ತರಬೇತಿ ಗಳನ್ನು ಪ್ರತಿ ಹಾಲಿನ ಸೊಸೈಟಿಗಳಲ್ಲಿ ನಡೆಸಲಾಗಿದೆ. ದೈಹಿಕ ಅಂತರ ಕಾಪಾಡುವುದೂ ಸೇರಿದಂತೆ ಎಲ್ಲ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗುತ್ತಿದೆ.

4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್‌ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?

ಐಸಿಯು, ವೆಂಟಿಲೇಟರ್‌ ಕೊರತೆ ಇದೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉಳಿದಂತೆ ಬೆಡ್‌ ಕೊರತೆ ಇತ್ಯಾದಿ ಇಲ್ಲ. ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ.

5. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?

ಜನರಿಗೆ ತಿಳುವಳಿಕೆ ಬಂದಿದೆ. ಅಂತಹ ಬೇಡಿಕೆ ಈವರೆಗೆ ಬಂದಿಲ್ಲ. ಕಳೆದ ಬಾರಿ ಬಂದಾಗ ನೀಡಲಾಗಿತ್ತು. ಈ ಬಾರಿ ಜನರು ಅನುಭವದಿಂದ ನಮಗೆ ನಾವೇ ಎಂಬ ಭಾವನೆಯಿಂದ ಬದುಕುತ್ತಿದ್ದಾರೆ.

6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?

ಜನ ತುಂಬ ಸಹನೆಯಿಂದ ಇದ್ದಾರೆ. ಜವಾಬ್ದಾರಿಯನ್ನು ಅರಿತಿದ್ದಾರೆ. ಎಲ್ಲರೂ ಅವರ ಪಾಲಿನ ಕರ್ತವ್ಯವನ್ನು ಮಾಡುತ್ತಿದ್ದಾರೆ.

7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?

ನಾನು ಯಾವುದೇ ಕ್ಷಣದಲ್ಲಿಯಾದರೂ ಲಭ್ಯ. ದೂ: 9448381341
***
ಹರೀಶ್‌ ಪೂಂಜ ಶಾಸಕರು, ಬೆಳ್ತಂಗಡಿ :

1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್‌ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?

ಸೋಂಕು ಪ್ರಕರಣಗಳನ್ನು ಗ್ರಾಮಮಟ್ಟದಲ್ಲೇ ನಿಯಂತ್ರಿಸಲು ತಾಲೂಕಿನ 48 ಗ್ರಾ.ಪಂ. ಹಾಗೂ ಬೂತ್‌ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಉಜಿರೆಯಲ್ಲಿ ಸೇವಾಭಾರತಿ ಜತೆಗೂಡಿ ತೆರೆದಿರುವ ವಾರ್‌ರೂಂ ನಲ್ಲಿ 16 ಮಂದಿ ತುರ್ತು ಸೇವೆ ಕಲ್ಪಿಸುತ್ತಿದ್ದಾರೆ. ಸಂಘ ಸಂಸ್ಥೆಗಳ ಸಹಕಾರದಿಂದ ಉಚಿತ ಆ್ಯಂಬುಲೆನ್ಸ್‌Õ ಸೇವೆ ಕಲ್ಪಿಸಲಾಗಿದೆ. ಜನರ ಕಷ್ಟ ಆಲಿಸಲು ಗ್ರಾ. ಪಂ. ಅಧ್ಯಕ್ಷರು ಹಾಗೂ ಪ್ರತಿ ವಾರ್ಡ್‌ನ ಸದಸ್ಯರಿಗೆ ಜವಾಬ್ದಾರಿ ವಹಿಸಲಾಗಿದೆ.

2.  ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್‌ ಬಿ) ರೂಪಿಸಿದ್ದೀರಾ?

ಈಗಾಗಲೇ ಗಣ್ಯರು, ಸಂಘ ಸಂಸ್ಥೆ, ಉದ್ಯಮಿಗಳನ್ನು ಸಂಪರ್ಕಿಸಿ ಯಾವ ರೂಪದಲ್ಲಾದರೂ ಸೇವೆ ಒದಗಿಸುವಂತೆ ಕೋರಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಪ್ರತಿ ಗ್ರಾ.ಪಂ.ನಲ್ಲಿ ಸ್ವಯಂಸೇವಕರ ತಂಡ ರಚಿಸಿ ಸೋಂಕಿತರಿಗೆ ಸಹಕಾರ ಒದಗಿಸಲಾಗುತ್ತಿದೆ.

3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?

ತಾಲೂಕಿನ 48 ಗ್ರಾ.ಪಂ.ಗಳಲ್ಲಿ ಸಭೆ ನಡೆಸಿದ್ದು, ತಮ್ಮ ವಾರ್ಡ್‌ನ ಮಾಹಿತಿ ಸಂಗ್ರಹಿಸಿ ನೀಡುವಂತೆ ಸದಸ್ಯರಿಗೆ ಸೂಚಿಸಲಾಗಿದೆ. ಶಾಸಕರ ಕಚೇರಿಯಿಂ ದ ಪಂಚಾಯತ್‌ ಅಧ್ಯಕ್ಷರಿಗೆ ಪ್ರತಿನಿತ್ಯ ಕರೆ ಮಾಡಿ ಮಾಹಿತಿ ಪಡೆಯಲಾಗು ತ್ತಿದೆ. ಪ್ರತಿ ಜಿ.ಪಂ. ಕ್ಷೇತ್ರಕ್ಕೆ ಸಂಚಾಲಕ್‌ ಮತ್ತು ಸಹ ಸಂಚಾಲಕ್‌ ರನ್ನು ಪಕ್ಷ ನೇಮಿಸಿದ್ದು, ಕಾರ್ಯ ನಿರ್ವಹಿಸುತ್ತಾರೆ.

4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್‌ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?

ಈಗಾಗಲೆ ತಾಲೂಕು ಆಸ್ಪತ್ರೆಯಲ್ಲಿ 34 ಜಂಬೋ ಸಿಲಿಂಡರ್‌ಗಳಿದ್ದು, ಹೆಚ್ಚುವರಿ 16 ಜಂಬೋ ಸಿಲಿಂಡರ್‌ ತರಿಸಲು ಪತ್ರ ಬರೆಯಲಾಗಿದೆ. ತಾಲೂಕಿನ ಜನತೆಗೆ ಆಕ್ಸಿಜನ್‌ ಕೊರತೆ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

5. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?

ಕೂಲಿ ಕಾರ್ಮಿಕರು, ಹಸಿವಿನಿಂದ ಇರುವವರಿಗೆ ಪಕ್ಷ, ದಾನಿಗಳ ಸಹಕಾ ರದಿಂದ ಆಹಾರ ನೀಡಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿ ದಿನಕ್ಕೆ 100 ಆಹಾರ ಪೊಟ್ಟಣ ಒದಗಿಸಲಿದ್ದು, ಮತ್ತಷ್ಟು ಅಗತ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು.

6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?

ತಾಲೂಕಿನಲ್ಲಿ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಹಕಾರದಿಂದ ಶ್ರೀ ಕ್ಷೇ.ಧ. ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಕೇರ್‌ ಸೆಂಟರ್‌ಗೆ 200 ಹಾಸಿಗೆ, ರಜತಾದ್ರಿ ಕಟ್ಟಡದಲ್ಲಿ ಕ್ವಾರಂಟೈನ್‌ ಕೇಂದ್ರಕ್ಕಾಗಿ 600 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸಂಘ-ಸಂಸ್ಥೆಗಳನ್ನು ವಿನಂತಿ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ, ಆಹಾರ ಸಾಮಗ್ರಿ ಸಾಗಾಟಕ್ಕೆ, ಆಸ್ಪತ್ರೆಗೆ ಕರೆತರಲು ವಾಹನ, ಆ್ಯಂಬುಲೆನ್ಸ್‌ ಉಚಿತ ಸೇವೆ, ಮೃತ ಸೋಂಕಿತರ ದಹನ ಕ್ರಿಯೆ ಸೇರಿದಂತೆ ಎಲ್ಲವನ್ನೂ ಕೈಗೊಳ್ಳಲಾಗುತ್ತಿದೆ.

7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?

ನಾನು ಸದಾ ಲಭ್ಯ. ಸೋಂಕಿತರು ಧೈರ್ಯಗುಂದಬಾರದು. ಸಂಪರ್ಕ ಸಂಖ್ಯೆ 9900000207/900757149/9008161300

ಟಾಪ್ ನ್ಯೂಸ್

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.