![1-adani](https://www.udayavani.com/wp-content/uploads/2025/02/1-adani-415x233.jpg)
![1-adani](https://www.udayavani.com/wp-content/uploads/2025/02/1-adani-415x233.jpg)
Team Udayavani, May 16, 2021, 7:17 AM IST
ಮೇಷ: ಹೋರಾಟದ ಮನೋಪ್ರವೃತ್ತಿ ಮನಸಾಕ್ಷಿಗೆ ವಿರುದ್ಧವಾಗಿ ವರ್ತಿಸಬೇಕಾದ ಸಂದಿಗ್ಧತೆ ಕಂಡು ಬರುವುದು. ಸಹೋದ್ಯೋಗಿಗಳೊಂದಿಗೆ ವಿರೋಧ ಕಟ್ಟಿಕೊಳ್ಳ ಬೇಕಾದ ಪರಿಸ್ಥಿತಿಯು ಎದುರಾದೀತು. ಜಾಗ್ರತೆ.
ವೃಷಭ: ವ್ಯವಹಾರದಲ್ಲಿ ಬಿರುಸಿನ ಸ್ಪರ್ಧೆಯನ್ನು ಎದುರಿಸಬೇಕಾದ ಸನ್ನಿವೇಶಗಳು ಎದುರಾಗಲಿದೆ. ಮಕ್ಕಳ ಚಟುವಟಿಕೆಯತ್ತ ಗಮನಹರಿಸಿದರೆ ಉತ್ತಮ. ಕಿರು ಪ್ರಯಾಣದ ಅವಕಾಶಗಳು ಒದಗಿ ಬರಬಹುದು.
ಮಿಥುನ: ಆರೋಗ್ಯ ಹಾಗೂ ಮನಃಶ್ಯಾಂತಿಗಾಗಿ ಕುಲದೇವತಾ ಪ್ರಾರ್ಥನೆ ಮಾಡುವುದು ಅಗತ್ಯವಾಗಿರು ತ್ತದೆ. ಅತೀ ಒತ್ತಡಗಳ ನಡುವೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿಯು ಕಂಡುಬರುವುದು. ಹಿಂಜರಿಕೆ ಬೇಡ.
ಕರ್ಕ: ಆರ್ಥಿಕ ಕಾರ್ಯ ಸಫಲತೆಗಾಗಿ ಹೆಣಗಾಡ ಬೇಕಾದ ಪರಿಸ್ಥಿತಿಯು ಕಂಡುಬರಬಹುದು. ಮರೀಚಿಕೆ ಯಾಗಲಿರುವ ವಿಷಯಾದಿ ಕಂಡು ಬೇಸರವಾದೀತು. ಇದ್ದುದರಲ್ಲೇ ಸಮಾಧಾನದಿಂದ ಮುಂದುವರಿಯಿರಿ.
ಸಿಂಹ: ಜಾಗ ನಿವೇಶನದ ವಿಷಯದಲ್ಲಿ ದಾಯಾದಿ ಗಳೊಂದಿಗೆ ಸ್ವಲ್ಪ ಕಿರಿಕಿರಿ ತೋರಿಬಂದೀತು. ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುನ್ನಡೆದರೆ ಉತ್ತಮ. ಮನಸ್ಸು ಅಶಾಂತಿಯಿಂದ ತೊಳಲಾಡಲಿದೆ. ಸಂತಸದಿಂದಿರಿ.
ಕನ್ಯಾ: ಶುಭ ಕಾರ್ಯಗಳಿಗೆ ಅನೇಕ ರೀತಿಯ ವಿಘ್ನಗಳು ಕಾಡಲಿದೆ. ಆತ್ಮೀಯರಿಂದ ವಿಶ್ವಾಸದ್ರೋಹದ ಪ್ರಸಂಗ ಎದುರಾಗಲಿದೆ. ವೃತ್ತಿರಂಗದಲ್ಲಿ ಯೋಜನಾಬದ್ಧ ಕಾರ್ಯತಂತ್ರಗಳ ರೂಪಣೆಯಿಂದ ಯಶಸ್ಸು.
ತುಲಾ: ಸಂಚಾರದಿಂದ ಕಾರ್ಯರಂಗದಲ್ಲಿ ಕ್ಲೇಶ ಕಂಡುಬರಲಿದೆ. ದೇಹಾಯಾಸವು ಆದೀತು. ಹೊಸದಾಗಿ ಆರಂಭಿಸಿದ ಕೆಲಸ ಕಾರ್ಯದಲ್ಲಿ ಪ್ರಬಲ ವಿರೋಧವು ವ್ಯಕ್ತವಾದೀತು. ಆದರೂ ಪ್ರಗತಿಪಥದತ್ತ ಸಾಗುವಿರಿ.
ವೃಶ್ಚಿಕ: ನಿಮ್ಮ ಹಿತಶತ್ರುಗಳು ಕಾಲೆಳೆತ ಶುರು ಮಾಡಿಯಾರು. ನಿಮ್ಮ ಪ್ರಾಮಾಣಿಕತೆಯು ನಿಮ್ಮನ್ನು ರಕ್ಷಿಸಲಿದೆ. ಅರ್ಧಕ್ಕೆ ಬಿದ್ದ ಕೆಲಸ ಕಾರ್ಯವು ಮುನ್ನಡೆಗೆ ಪ್ರಾರಂಭವಾದೀತು. ಆತ್ಮವಿಶ್ವಾಸವು ಅಗತ್ಯ.
ಧನು: ಋಣ ಪರಿಹಾರವಾಗಿ ಸ್ವಲ್ಪ ನೆಮ್ಮದಿ ಕಂಡು ಬರುವುದು. ಮನೆಯಲ್ಲಿ ಪತ್ನಿಯಿಂದ ಶಾಂತಿ ಸಮಾಧಾನದ ವಾತಾವರಣ ಕಂಡು ಬರಲಿದೆ. ತಪ್ಪಿದ ಅವಕಾಶಗಳು ಪುನಃಹ ಲಭಿಸುವ ಸಾಧ್ಯತೆ ಇರುತ್ತದೆ.
ಮಕರ: ಮುಂದಿನ ಭವ್ಯ ಭವಿಷ್ಯಕ್ಕಾಗಿ ಕಾಯುವಂತಾ ದೀತು. ನಿಮ್ಮ ಕಠಿಣ ಕಾರ್ಯಶೈಲಿ, ಆತ್ಮವಿಶ್ವಾಸ ದೃಢ ನಿರ್ಧಾರವು ನಿಮ್ಮನ್ನು ಪ್ರಗತಿಪಥದತ್ತ ಒಯ್ಯಲಿದೆ. ದುಡುಕು ನಿರ್ಧಾರಗಳು ಕೆಲಸ ಹಾಳು ಮಾಡೀತು.
ಕುಂಭ: ಸಂಶಯ ಅಪನಂಬಿಕೆಗಳ ಮನಸ್ಥಿತಿ ಕಾಡಲಿರುವ ನಿಮಗೆ ಋಣ ಚಿಂತನೆಯಾಗಲಿದೆ. ಉದ್ಯೋಗರಂಗದಲ್ಲಿ ಮೇಲಾಧಿಕಾರಿಗಳಿಂದ ಪೀಡೆ ಕಂಡು ಬರುವುದು. ನಿಧಾನವಾಗಿಯಾದರೂ ಮುನ್ನಡೆ ಇದೆ.
ಮೀನ: ಹಳೆಯ ಸ್ನೇಹಿತೆಯ ಭೇಟಿಯಿಂದ ಸಂತಸ ಕಂಡುಬರುವುದು. ಕಾರ್ಯರಂಗದಲ್ಲಿ ಅತಿಯಾದ ಕಾರ್ಯದಿಂದ ದೇಹಾಯಾಸವು ತೋರಿಬರಲಿದೆ. ಮಂಗಲಕಾರ್ಯದ ಬಗ್ಗೆ ಚಿಂತಿಸುವ ಅಗತ್ಯತೆ ಕಂಡುಬರಲಿದೆ.
You seem to have an Ad Blocker on.
To continue reading, please turn it off or whitelist Udayavani.