ಧೋನಿ ಸಲಹೆಗಳೇ ನನಗೆ ಸ್ಫೂರ್ತಿ: ಇಂದ್ರಾಣಿ ರಾಯ್
Team Udayavani, May 17, 2021, 7:10 AM IST
ಜಾರ್ಖಂಡ್ : “ಲೆಜೆಂಡ್ರಿ ಕೀಪರ್ ಮಹೇಂದ್ರ ಸಿಂಗ್ ಧೋನಿ ನೀಡಿದ ಸಲಹೆಗಳೇ ನನಗೆ ಸ್ಫೂರ್ತಿ’ ಎಂಬುದಾಗಿ ಭಾರತೀಯ ವನಿತಾ ತಂಡಕ್ಕೆ ಮೊದಲ ಸಲ ಕರೆ ಪಡೆದ ಕೀಪರ್ ಇಂದ್ರಾಣಿ ರಾಯ್ ಹೇಳಿದ್ದಾರೆ.
“ರಾಂಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ನನಗೆ ಮಹಿ ಸರ್ ಜತೆ ಸಮಯ ಕಳೆಯುವ ಅವಕಾಶ ಲಭಿಸಿತು. ಈ ಸಂದರ್ಭದಲ್ಲಿ ಅವರು ಅನೇಕ ಕೀಪಿಂಗ್ ಟಿಪ್ಸ್ ನೀಡಿದರು. 5 ಮೀಟರ್ ಸುತ್ತಳತೆಯ ವ್ಯಾಪ್ತಿಯಲ್ಲಿ ರಿಫ್ಲೆಕ್ಸ್ ಮತ್ತು ಮೂವ್‌ಮೆಂಟ್ ಸುಧಾರಿಸಿಕೊಳ್ಳಬೇಕು ಎಂಬುದು ಇದರಲ್ಲಿ ಮುಖ್ಯವಾಗಿತ್ತು. ಇದನ್ನು ನಾನು ಕೂಡಲೇ ಅಳವಡಿಸಿಕೊಂಡೆ. ಇದರಿಂದ ನನ್ನ ಕೀಪಿಂಗ್‌ನಲ್ಲೂ ಸುಧಾರಣೆ ಕಂಡುಬಂತು. ಪ್ರತೀ ಸಲ ಕೀಪಿಂಗ್‌ಗೆ ಇಳಿಯುವಾಗ ನನಗೆ ಧೋನಿ ಕೊಟ್ಟ ಸಲಹೆ ನೆನಪಾಗುತ್ತದೆ’ ಎಂಬುದಾಗಿ ಇಂದ್ರಾಣಿ ಹೇಳಿದರು.
23 ವರ್ಷದ ಇಂದ್ರಾಣಿ ರಾಯ್ ಮೂಲತಃ ಬಂಗಾಲದವರು. ಕಳೆದ ಕೆಲವು ವರ್ಷಗಳಿಂದ ಜಾರ್ಖಂಡ್‌ಗೆ
ತಮ್ಮ ವಾಸ್ತವ್ಯ ಬದಲಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.
ಕಠಿನ ಶ್ರಮಕ್ಕೆ ಸಿಕ್ಕಿದ ಬೆಲೆ
ಭಾರತ ತಂಡಕ್ಕೆ ಆಯ್ಕೆಯಾದ ಕುರಿತು ಅತೀವ ಸಂತೋಷ ವ್ಯಕ್ತಪಡಿಸಿದ ಇಂದ್ರಾಣಿ, “ನನ್ನ ಕಠಿನ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿದೆ. ಸೀನಿಯರ್ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ಅವರೊಂದಿಗೆ ಎಷ್ಟೋ ಕ್ರಿಕೆಟ್ ಪಾಠಗಳನ್ನು ಕಲಿಯಬೇಕಿದೆ. ಹನ್ನೊಂದರ ಬಳಗಕ್ಕೆ ಆಯ್ಕೆಯಾಗಿ ಅತ್ಯುತ್ತಮ ಪ್ರದರ್ಶನ ನೀಡುವುದು ನನ್ನ ಗುರಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.