ಚಾಕೊಲೆಟ್ ತಿನ್ನಲು ಎಷ್ಟು ಸಿಹಿಯೋ, ಜಾಸ್ತಿಯಾದ್ರೆ ಆರೋಗ್ಯಕ್ಕೆ ಅಷ್ಟೇ ಕಹಿ..!


Team Udayavani, May 17, 2021, 3:05 PM IST

vfgfgfgfg

ಚಾಕೊಲೆಟ್ ಯಾರಿಗೆ ತಾನೇ ಇಷ್ಟವಾಗದು? ವಿಶೇಷವಾಗಿ ಮಕ್ಕಳಿಗೆ ಅತಿಯಾಗಿ ಇಷ್ಟಪಡುವ ಚಾಕಲೇಟ್ ಹಲ್ಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.

ಚಾಕೊಲೇಟ್ ಸೇವನೆ ಹಿತಮಿತವಾಗಿದ್ದರೆ ಯಾವುದೇ ತೊಂದರೆಯೂ ಉಂಟಾಗುವುದಿಲ್ಲ. ಇಂದು ಮಾರುಕಟ್ಟೆಗಳಲ್ಲಿ ಹಲವು ಬಗೆಗಳ ಚಾಕೊಲೇಟ್ ಅಥವಾ ಸಿಹಿತಿನಿಸುಗಳು ದೊರೆಯುತ್ತವೆ. ಹೆಚ್ಚು ಸಿಹಿಯಾದ ಮತ್ತು ಸಕ್ಕರೆಯಿಂದ ತಯಾರಿಸಲಾದ ಚಾಕೊಲೇಟುಗಳು ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.

ಸಕ್ಕರೆಯುಕ್ತ ಚಾಕೊಲೇಟನ್ನು ತಿನ್ನುವುದರಿಂದ ಬಾಯಿಯಲ್ಲಿನ ಸಕ್ಕರೆಯ ಪ್ರಮಾಣವೂ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯಕವಾಗಿ ಪ್ಲ್ಯಾಕ್​ನ (ಬ್ಯಾಕ್ಟೀರಿಯಾ ವೃದ್ಧಿಯಾಗಲು ಅವಕಾಶ ಕೊಡುವಂತಹ ಹಲ್ಲಿನ ಮೇಲಿನ ಲೋಳೆಯ ನಿಕ್ಷೇಪ) ರಚನೆಗೆ ಪುಷ್ಟಿ ನೀಡುತ್ತದೆ. ಅಲ್ಲದೆ ಬಾಯಿಯ ಆಮ್ಲೀಯತೆಯನ್ನು ಹೆಚ್ಚಾಗಿಸಿ ಹಲ್ಲಿನ ಮೇಲಿರುವ ಎನಾಮಲ್ ಅನ್ನು ನಷ್ಟಗೊಳಿಸಿ ಹುಳುಕಾಗುವಂತೆ ಮಾಡುತ್ತದೆ. ಹಾಗಾದರೆ ಚಾಕಲೇಟ್ ಅಥವಾ ಸಿಹಿಪದಾರ್ಥಗಳನ್ನು ತಿನ್ನಲೇಬಾರದೇ? ಹೀಗೆ ಹೇಳುವುದು ತಪ್ಪಾಗುತ್ತದೆ. ಸಕ್ಕರೆಯುಕ್ತ ಚಾಕೊಲೇಟ್ ಅಥವಾ ಸಿಹಿತಿನಿಸು ಅಥವಾ ಜಿಗುಟಾದ ಸಿಹಿಪದಾರ್ಥಗಳನ್ನು ಯಾವಾಗಲೂ ಊಟದ ಜೊತೆಯಲ್ಲೇ ತಿನ್ನುವುದು ಸೂಕ್ತ. ಅಲ್ಲದೆ ತಿಂದ ತಕ್ಷಣ ಬಾಯಿಯನ್ನು ಶುಚಿಗೊಳಿಸಿಕೊಳ್ಳಬೇಕು. ಇದರಿಂದ ಹಲ್ಲುಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ.

ಮಕ್ಕಳ ಹಲ್ಲುಗಳು ಹುಳುಕಾಗುವುದಕ್ಕೆ – ಸಿಹಿಪದಾರ್ಥಗಳಾದ ಬಿಸ್ಕತ್ತ, ಚಾಕೊಲೇಟ್ ಅಥವಾ ಚಿಪ್ಸ್​ನಂತಹ ಜಿಗುಟಾದ ಆಹಾರಗಳು ಪ್ರಮುಖ ಕಾರಣ. ಜಿಗುಟಾದ ಸಿಹಿಪದಾರ್ಥಗಳು ಹಲ್ಲುಗಳ ಸಂದುಗಳಲ್ಲಿ ಸೇರಿಕೊಂಡು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ವಿುಸುತ್ತವೆ. ಆದ್ದರಿಂದ ಯಾವುದೇ ರೀತಿಯ ಚಾಕೊಲೇಟ್, ಸಿಹಿತಿನಿಸುಗಳು ಅಥವಾ ಜಿಗುಟಾದ ಸಿಹಿಪದಾರ್ಥಗಳನ್ನು ತಿಂದ ನಂತರ ಬಾಯಿಯನ್ನು ಶುಚಿಗೊಳಿಸಿಕೊಳ್ಳುವುದರ ಮೂಲಕ ಹಲ್ಲುಗಳು ಹುಳುಕಾಗದ ಹಾಗೆ ನೋಡಿಕೊಳ್ಳಬಹುದು.

ಹಲ್ಲಿನ ಕಲೆಗಳಲ್ಲಿ ಬಾಹ್ಯ ಹಾಗೂ ಆಂತರಿಕ ಎಂದು ಎರಡು ಬಗೆಗಳಿವೆ. ಆಂತರಿಕ ಕಲೆಗಳು ಹಲ್ಲಿನ ಒಳಭಾಗದಿಂದ ಉಂಟಾಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಫ್ಲೋರೈಡ್ ಕಲೆಗಳು ಅಥವಾ ಹಲ್ಲಿನಲ್ಲಿ ಆಂತರಿಕ ರಕ್ತಸ್ರಾವ ಉಂಟಾದಾಗ – ಹೀಗೆ ಹಲವು ಬಗೆ. ಇನ್ನು ಬಾಹ್ಯ ಕಲೆಗಳು ಹಲ್ಲಿನ ಮೇಲ್ಮೈಯಲ್ಲಿ ಉಂಟಾಗುತ್ತವೆ. ಇದು ಸಾಮಾನ್ಯವಾಗಿ ತಂಬಾಕು ಬಳಕೆಯಿಂದ, ಅತಿಯಾಗಿ ಕಾಫಿ ಅಥವಾ ಚಹಾ ಕುಡಿಯುವುದರಿಂದ ಮತ್ತು ಆಮ್ಲೀಯ ಪಾನೀಯಗಳಿಂದಲೂ ಉಂಟಾಗುತ್ತವೆ. ಯಾವ ರೀತಿಯ ಕಲೆಗಳಿವೆ ಎಂದು ಪರೀಕ್ಷಿಸಿ ತಕ್ಕ ಚಿಕಿತ್ಸೆಯನ್ನು ಪಡೆಯಬಹುದು.

ಟಾಪ್ ನ್ಯೂಸ್

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

coco

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

03

Box Office: ದೀಪಾವಳಿಗೆ ರಿಲೀಸ್‌ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.