ನಲುಗಿದ ಕಡಲತೀರದ ಜನ
120ಕ್ಕೂ ಅಧಿಕ ಜನ ಕಾಳಜಿ ಕೇಂದ್ರಕ್ಕೆ! ವಿದ್ಯುತ್ ಕಂಬಗಳು ನೆಲಕ್ಕುರುಳಿ ಭಾರೀ ಹಾನಿ
Team Udayavani, May 17, 2021, 10:21 PM IST
ಕುಮಟಾ: ಅರಬ್ಬಿ ಸಮುದ್ರದಲ್ಲಿ ಉಲ್ಬಣಗೊಂಡ ತೌಕ್ತೇ ಚಂಡಮಾರುತದ ಪರಿಣಾಮ ಕಡಲು ಕಳೆದೆರಡು ದಿನಗಳಿಂದ ರೌದ್ರಾವತಾರ ತಾಳಿದೆ. ತಾಲೂಕಿನ ವನ್ನಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳು ವಿಸ್ತಾರಗೊಂಡಿದ್ದು, ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ತೌಕ್ತೇ ಚಂಡಮಾರುತದ ಪರಿಣಾಮ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಗಾಳಿ ರಭಸವಾಗಿ ಬೀಸುತ್ತಿದ್ದು, ಎಡಬಿಡದೆ ಮಳೆ ಸುರಿಯಲಾರಂಭಿಸಿದೆ. ಶನಿವಾರ ಮಧ್ಯರಾತ್ರಿ ಬೀಸಿದ ಭಾರಿ ಗಾಳಿ ಮಳೆಯಿಂದ ಧಾರೇಶ್ವರ ಹಾಗೂ ವನ್ನಳ್ಳಿ ಬೀಚ್ನಲ್ಲಿ ಬೃಹದಾಕಾರದ ಅಲೆಗಳು ಏಳುತ್ತಿವೆ. ಸಮುದ್ರ ವಿಸ್ತಾರಗೊಂಡ ಪರಿಣಾಮ ಕೆಲವೆಡೆ ಸಮುದ್ರ ಕೊರೆತದ ಭೀತಿ ಎದುರಾಗಿದೆ. ವನ್ನಳ್ಳಿ, ಧಾರೇಶ್ವರ, ಶಶಿಹಿತ್ತಲ ಪ್ರದೇಶಗಳಲ್ಲಿ ಕಡಲ ಕೊರೆತ ಉಂಟಾಗಿದೆ.
ಇನ್ನು ಸಮುದ್ರದ ಅಲೆಗಳ ರಭಸಕ್ಕೆ ತಗ್ಗು ಪ್ರದೇಶದ 32ಕ್ಕೂ ಅಧಿಕ ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಆಸ್ತಿಪಾಸ್ತಿ ಸಮುದ್ರ ಪಾಲಾಗಿದೆ. ಜನ ಕಾಳಜಿ ಕೇಂದ್ರಗಳಿಗೆ: ಉಪವಿಭಾಗಾಧಿಕಾರಿಗಳ ಆದೇಶದಂತೆ ತಾಲೂಕಾಡಳಿತ, ಪುರಸಭೆ ಹಾಗೂ ಸ್ಥಳೀಯಾಡಳಿತ ಶಶಿಹಿತ್ತಲ ಹಾಗೂ ಕಲಭಾಗ ಶಾಲೆಯಲ್ಲಿ ನಿರ್ಮಿಸಿದ ಕಾಳಜಿ ಕೇಂದ್ರಗಳಲ್ಲಿ ಜಲಾವೃತಗೊಂಡ ಪ್ರದೇಶದ 120ಕ್ಕೂ ಅಧಿಕ ಜನರು ವಾಸ್ತವ್ಯ ಹೂಡಿದ್ದಾರೆ. ಪುರಸಭೆ ಊಟದ ವ್ಯವಸ್ಥೆ ಕಲ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.