![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, May 18, 2021, 2:40 PM IST
ಕೋಲಾರ: ನಗರದಲ್ಲಿ ಕೋವಿಡ್ ಸೋಂಕು ತಡೆಗೆ ನಗರಸಭಾ ಸದಸ್ಯರ ಟಾಸ್ಕ್ಪೋರ್ಸ್ ಸಮಿತಿ ಆಯಾ ವಾರ್ಡ್ ನಲ್ಲಿ ಸೋಂಕು ನಿವಾರಣೆ, ಜನರಲ್ಲಿಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿ ಕೋಲಾರವನ್ನು ಸೋಂಕು ಮುಕ್ತಗೊಳಿಸುವಂತೆ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್ ಮನವಿ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಸೋಮ ವಾರ ಜಿಲ್ಲಾಧಿಕಾರಿಗಳು ಪ್ರತಿ ವಾರ್ಡ್ ಗೊಬ್ಬರಂತೆ ನೇಮಿಸಿರುವ ಟಾಸ್ಕ್ ಫೋರ್ಸ್ ಸಮಿತಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರಸಭಾ ಸದಸ್ಯರು, ಆಗ್ನಿಶಾಮಕ ದಳದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮನೆಯಿಂದ ಹೊರಬರಬೇಡಿ: ಕೋವಿಡ್ ಹೆಮ್ಮಾರಿಯಾಗಿ ಬೆಳೆಯುತ್ತಿದೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದೆ, ಆಕ್ಸಿಜನ್ ಲಭ್ಯತೆಗೂ ಪರದಾಡಬೇಕಾಗಿದೆ. ಆದ್ದರಿಂದ ಜನತೆಯಲ್ಲಿಸೋಂಕಿನ ಕುರಿತು ಜಾಗೃತಿ ಮೂಡಿಸೋಣ, ಲಾಕ್‌ಡೌನ್ ಸಂದರ್ಭದಲ್ಲಿವಿನಾಕಾರಣ ಮನೆಯಿಂದ ಹೊರ ಬರದಂತೆ ಎಚ್ಚರಿಸೋಣಎಂದು ತಿಳಿಸಿದರು.ನಗರಸಭೆ ಆಯುಕ್ತ ಶ್ರೀಕಾಂತ್ ಸಭೆಗೆಮಾಹಿತಿ ನೀಡಿ, ಜಿಲ್ಲಾಧಿಕಾರಿಗಳು ನಗರದಲ್ಲಿ ಸೋಂಕು ಮುಕ್ತಗೊಳಿಸುವಸಂಬಂಧ ಪ್ರತಿ ವಾರ್ಡ್‌ಗೂ ಓರ್ವಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಎಲ್ಲಾ35ವಾರ್ಡುಗಳಿಗೂ ನೇಮಿಸಿದ್ದು, ಈ ಸಮಿತಿಗೆ ಆಯಾ ವಾರ್ಡ್‌ನ ನಗರಸಭಾಸದಸ್ಯರು ಅಧ್ಯಕ್ಷರಾಗಿರುತ್ತಾರೆ ಎಂದು ವಿವರಿಸಿದರು.
ಜನರಲ್ಲಿ ಜಾಗೃತಿ: ಈ ಸಮಿತಿ ತಮ್ಮ ವಾರ್ಡ್‌ಗಳ ಜನತೆಯಲ್ಲಿ ಸಾಮಾಜಿಕಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆ ಕಾಪಾಡುವುದು, ಕೋವಿಡ್ ಮಾರ್ಗಸೂಚಿ ಅನುಸರಿಸುವ ಕುರಿತು ಟಾಸ್ಕ್ ಪೋರ್ಸ್ ಜನತೆಗೆ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಅಗ್ನಿಶಾಮಕದಳದ ನೆರವಿನಿಂದ ಇಡೀ ನಗರದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಕಾರ್ಯವೂ ಈ ಸಮಿತಿ ನೇತೃತ್ವದಲ್ಲೇ ನಡೆಯಲಿದ್ದು,ಕೋವಿಡ್ ಮುಕ್ತ ಕೋಲಾರಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷ ಪ್ರವೀಣ್ ಗೌಡ, ನೋಡಲ್ ಅಧಿಕಾರಿಗಳು ಆಯಾ ವಾರ್ಡ್‌ನಲ್ಲಿನ ಅಂಗಡಿ ಮುಂಗಟ್ಟು ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಗಮನ ಹರಿಸುವರು,ಅವರೊಂದಿಗೆ ಆಯಾ ವಾರ್ಡ್‌ನ ನಗರಸಭಾ ಸದಸ್ಯರು ಸಹಕಾರ ನೀಡುವಂತೆಮನವಿ ಮಾಡಿದರು.
ಅಗ್ನಿಶಾಮಕ ದಳದ ಅಧಿಕಾರಿ ರಾಘವೇಂದ್ರ, ಸೋಂಕು ನಿವಾರಕ ಸಿಂಪಡಿಸಲು ತಮ್ಮ ಇಲಾಖೆ ಎಲ್ಲಾ ರೀತಿಯಸಹಕಾರ ನೀಡಲಿದೆ. ಈಗಾಗಲೇ ನಾವುಗ್ರಾಪಂ ಮಟ್ಟದಲ್ಲೂ ಈ ಕಾರ್ಯವನ್ನುಯಶಸ್ವಿಯಾಗಿ ಮಾಡಿದ್ದೇವೆ ಎಂದುತಿಳಿಸಿದರು. ಸಭೆಯಲ್ಲಿ ನಗರಸಭೆಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ಸೇರಿ ನಗರಸಭಾ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.