ದೇಹದಾರ್ಢ್ಯ ಪಟುವಿನ ಆಸೆಗೆ ಬರೆ ಎಳೆದ ಬಿಸಿ ಎಣ್ಣೆ!
ಮೀನುಗಾರಿಕೆ ಆದಾಯವಿಲ್ಲ; ಜಿಮ್ ತರಬೇತಿಯೂ ಇಲ್ಲ
Team Udayavani, May 18, 2021, 10:00 PM IST
ಗಂಗೊಳ್ಳಿ : ಎಲ್ಲವೂ ನಿಗದಿಯಂತೆ ನಡೆದರೆ, ಹಣಕಾಸಿನ ವ್ಯವಸ್ಥೆಯಾಗಿದ್ದರೆ ಅವರು ಜೂ. 13ರಂದು ನಡೆಯಬೇಕಿದ್ದ ಮಿ| ಇಂಡಿಯಾ ದೇಹದಾರ್ಢ್ಯ ಪಟು ಸ್ಪರ್ಧೆಯಲ್ಲಿ ಭಾಗ ವಹಿಸಲು ಸಿದ್ಧರಾಗಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಅತ್ತ ಭಾಗವಹಿಸಲು ಒಂದೆಡೆ ದುಡ್ಡಿನ ವ್ಯವಸ್ಥೆಯೂ ಆಗಿಲ್ಲ; ಕೋವಿಡ್ ಲಾಕ್‌ಡೌನ್ ಕೂಟ ಆಯೋಜನೆಗೆ ಬಿಡಲಿಲ್ಲ. ಇದೆಲ್ಲದರ ನಡುವೆ ಬಿಸಿ ಎಣ್ಣೆ ಅವರ ದೇಹದ ಮೇಲೆ ಬಿದ್ದು ದಪ್ಪ ದಪ್ಪ ಗುಳ್ಳೆಗಳಾಗಿವೆ. ಇದರಿಂದ ಅವರ ದೈನಂದಿನ ಅಭ್ಯಾಸಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಮೇ 15ರ ಘಟನೆ
ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸು ಕಂಡಿದ್ದ ತ್ರಾಸಿ ಕಂಚುಗೋಡಿನ ಸೋಮಶೇಖರ್ ಖಾರ್ವಿ ಅವರ ಪಾಲಿಗೆ ಮೇ 15 ದುರಂತದ ದಿನವಾಗಿತ್ತು. ಆ ದಿನ ಮೀನುಗಾರರ ಜತೆ ಕಂಚುಗೋಡಿನ ಸಮುದ್ರ ತಟದಲ್ಲಿ ರಕ್ಷಣೆಯ ಕಾರ್ಯದಲ್ಲಿದ್ದ ಸೋಮಶೇಖರ್ ಅಪರಾಹ್ನ ಊಟ ಮುಗಿಸಿ ಮತ್ತೆ ಹೊರಡುವಾಗ ಅಡುಗೆ ಮನೆಯಲ್ಲಿ ಎಣ್ಣೆ ಬಾಣಲೆಯಲ್ಲಿ ಬೆಂಕಿ ಇರುವುದನ್ನು ಕಂಡರು. ತತ್‌ಕ್ಷಣ ಎಣ್ಣೆ ಪಾತ್ರೆಯನ್ನು ಎತ್ತಿಕೊಂಡು ಹೊರಗಡೆ ಹೋಗುವ ವೇಳೆ ಜಾರಿ ಬಿಸಿ ಎಣ್ಣೆ ಮೈ ಕೈ ಮುಖದ ಮೇಲೆ ಬಿದ್ದು ಗಾಯಗಳಾದವು. ಒದ್ದೆ ಬಟ್ಟೆ ತೊಟ್ಟಿದ್ದರಿಂದ ಗಂಭೀರ ಅಪಾಯದಿಂದ ಅವರು ಪಾರಾದರು.
ಒಂದೆಡೆ ಮೀನುಗಾರಿಕೆ ಇಲ್ಲ, ಇನ್ನೊಂದೆಡೆ ಜಿಮ್ ತರಬೇತಿ ಇಲ್ಲ. ಅತ್ತ ಮಿ| ಇಂಡಿಯಾ ಮುಂದೂಡಿಕೆ ಯಾದರೂ ಅದರಲ್ಲಿ ಭಾಗವಹಿಸಲು ದೇಹವನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೋ ಗೊತ್ತಿಲ್ಲ ಎಂದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ 12 ವರ್ಷಗಳಿಂದ ಹಲವು ದೇಹದಾಡ್ಯì ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅವರು 70ರಷ್ಟು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಸತತ ಮೂರು ವರ್ಷ ಮಿ| ಕರ್ನಾಟಕ ಆಗಿ ಹೊರಹೊಮ್ಮಿರುವ ಅವರು 2019ರಲ್ಲಿ ದಸರಾ ಸಿಎಂ ಕಪ್ ಪಡೆದಿದ್ದಾರೆ. ಸತತ 8 ಬಾರಿ ಮಿ| ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರೂ ಬಡತನದಿಂದಾಗಿ ಭಾಗವಹಿಸಲು ಅಸಾಧ್ಯವಾಗಿದೆ.
ಆದಾಯ ಇಲ್ಲ
ಮಿ| ಇಂಡಿಯಾ ಸ್ಪರ್ಧೆಗೆ ಹೋಗಲು ಸಿದ್ಧನಾಗುತ್ತಿದ್ದೆ. ಹಣಕಾಸಿನ ಅಡಚಣೆ ಇದ್ದರೂ ದೇಹದಂಡನೆ ಮನೆಯಲ್ಲೇ ಮಾಡುತ್ತಿದ್ದೆ. ಈಗ ಅದೇ ದೇಹದ ಮೇಲೆ ಇನ್ನೊಂದು ಆಘಾತ ಎದುರಾಗಿದೆ. ಮೀನುಗಾರಿಕೆ ಆದಾಯವೂ ಇಲ್ಲವಾಗಿದೆ.
-ಸೋಮಶೇಖರ ಖಾರ್ವಿ, ತ್ರಾಸಿ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.