ಲಾಕ್‌ಡೌನ್‌ನಿಂದ ನಿಂತ ಮಗ್ಗಗಳ ಸದ್ದು: ನೇಕಾರರಿಗೆ ಸಂಕಷ್ಟ
Team Udayavani, May 19, 2021, 3:45 PM IST
ಕುದೂರು: ಕೊರೊನಾ ಸೋಂಕಿನ 2ನೇ ಅಲೆಯಿಂದಾಗಿ ಸರ್ಕಾರದ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ನೇಕಾರರು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಮುಂಜಾನೆಯೇ ಟಪ ಟಪನೆ ಸದ್ದು ಮಾಡುತ್ತಿದ್ದಮಗ್ಗಗಳು ಸದ್ದು ನಿಲ್ಲುವ ಸ್ಥಿತಿ ತಲುಪುತ್ತಿದೆ. ಜನತಾ ಕರ್ಫ್ಯೂ, ಸೆಮಿ ಲಾಕ್‌ಡೌನ್‌ಹಿನ್ನೆಲೆಯಲ್ಲಿನೇಕಾರರಿಗೆ ಅಗತ್ಯವಿರುವಷ್ಟು ಕಚ್ಚಾ ಮಾಲು ಪೂರೈಕೆಯಾಗುತ್ತಿಲ್ಲ. ಅಲ್ಲದೇ, ನೇಯ್ದ ಸೀರೆಗಳೂ ಮಾರಾಟವಾಗದ ಕಾರಣ ಗ್ರಾಮದ ವಿದ್ಯುತ್ ಮಗ್ಗಗಳು, ಕೈ ಮಗ್ಗಗಳನೇಕಾರರು ಆತಂಕದ ಸ್ಥಿತಿ ತಲುಪಿದ್ದಾರೆ.
ಕುದೂರು ಮತ್ತು ಮಾಗಡಿ ಪಟ್ಟಣದಹಲವು ಗ್ರಾಮದಲ್ಲಿ 5100ಕ್ಕಿಂತ ಹೆಚ್ಚುನೇಕಾರರ ಕುಟುಂಬಗಳಿವೆ. ನೇಕಾರಿಕೆಉದ್ಯೋಗ ನಂಬಿ ಜೀವನ ನಡೆಸುತ್ತಿದಾರೆ .ಆದರೆ, ಜನತಾ ಕರ್ಫ್ಯೂ ಗೆ ನೇಯ್ಗೆ ಉದ್ಯಮ ತತ್ತರಿಸಿದ್ದು ನೇಕಾರರು ಏದುಸಿರು ಬಿಡುವಂತಾಗಿದೆ.ನೇಕಾರರಿಗೆ ಆತಂಕ: ಮಾರ್ಚ್, ಏಪ್ರಿಲ್,ಮೇ ನಲ್ಲಿ ಮದುವೆ, ಮುಂಜಿಕಾರ್ಯಕ್ರಮಗಳು ಸಾಕಷ್ಟು ಇರುತ್ತವೆ.ಸದ್ಯ ಎಲ್ಲಾ ಸಮಾರಂಭಗಳೂ ಕುಟುಂಬಕ್ಕೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಹಲವರು ಮದುವೆ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಿದ್ದಾರೆ.
ಕೆಲವರು ಮನೆ ಮಟ್ಟಿಗೆ ದೇವಾಲಯಗಳಲ್ಲಿ ಮದುವೆ ಮಾಡುತ್ತಿದ್ದಾರೆ. ಹೀಗಾಗಿ ಸೀರೆಗಳ ವ್ಯಾಪಾರ ಕಡಿಮೆಯಾಗಿದೆ. ಇಲ್ಲಿನೇಯುವ ಸೀರೆಗಳು, ಬೆಂಗಳೂರು, ಮೈಸೂರು, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಸೆಮಿಲಾಕ್‌ಡೌನ್ ಆಗಿರುವ ಕಾರಣ ಅಂಗಡಿ ಮಳಿಗೆಗಳು ತೆಗೆಯದ ಕಾರಣ ಮತ್ತು ಸಾರಿಗೆ ಸೌಲಭ್ಯವಿಲ್ಲದೆನೇಕಾರರು ಆತಂಕ ಎದುರಿಸುವಂತಾಗಿದೆ.
ಕಚ್ಚಾ ವಸ್ತುಗಳ ಬೆಲೆಹೆಚ್ಚು: ಜನತಾ ಕಫ್ಯೂಜಾರಿಯಾದ ಬಳಿಕ ನೇಕಾರಿಕೆ ಕಚ್ಚಾ ಸಾಮಗ್ರಿಗಳಾದ ನೂಲು,ರೇಷ್ಮೆ, ಚಮಕಾ, ಇನ್ನಿತರಸಾಮಗ್ರಿಗಳಿಗೆ ಒಂದುಕೆ.ಜಿ.ಗೆ 100 ರೂ.ಗಳಷ್ಟುಹೆಚ್ಚಾಗಿದೆ.ಇದರಿಂದಾಗಿನೇಕಾರಿಕೆಗೆತಾವು ದುಡಿದ ಕೂಲಿಯೂ ಬಾರದ ಸ್ಥಿತಿತಲುಪಿದೆ.
ಸೀರೆಗಳ ಬೆಲೆ ಕಡಿಮೆ: ಈಗ ಸರ್ಕಾರ ಶುಭ ಸಮಾರಂಭಗಳನ್ನು ರದ್ದುಗೊಳಿಸಿ ಬಟ್ಟೆಅಂಗಡಿಗಳನ್ನುಬಂದ್ ಮಾಡಿಸಿರುವ ಹಿನ್ನೆಲೆ ನೇಕಾರರು ನೇಯ್ದ ಸೀರೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.ಕೆಲಅಂಗಡಿಗಳಲ್ಲಿಖರೀದಿಸಿದರೂಮೊದಲಿಗಿಂತ100-200ರೂ ಕಡಿಮೆ ಕೇಳುತ್ತಿದ್ದಾರೆ. ಒಂದು ಕಡೆಕಚ್ಚಾ ಸಾಮಾಗ್ರಿ ಬೆಲೆ ಹೆಚ್ಚಿದೆ. ಸೀರೆಗಳ ಬೆಲೆ ಕಡಿಮೆ ಆಗಿದೆ. ಅದರಿಂದ ನೇಕಾರರು ಕಂಗೆಟ್ಟಿದ್ದಾರೆ. ಸರ್ಕಾರ ನೆರವು ನೀಡಿದ್ದಲ್ಲಿ ಮಾತ್ರ ನೇಕಾರರ ಬದುಕಿನಲ್ಲಿ ಬೆಳಕುಮೂಡಲು ಸಾಧ್ಯವಾಗುತ್ತದೆ.
ಪ್ಯಾಕೇಜ್ ಘೋಷಿಸಿ: ಕೋವಿಡ್‌ಸೋಂಕಿನಿಂದ ಸಾವು, ನೋವುಅನುಭವಿಸಿತಲ್ಲಣಗೊಂಡಿರುವ ನೇಕಾರರ ಕುಟುಂಬಗಳ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ನೆರವಿಗೆ ಮುಂದಾಗಬೇಕು. ಸಾರ್ವಜನಿಕರಿಗೆ ಬಟ್ಟೆ ನೇಯ್ದು ಕೊಡುತ್ತಿದ್ದ ನಾವು ಇಂದು ಪರಿತಪಿಸುತ್ತಿದ್ದೇವೆ.ಜನಪ್ರತಿನಿಧಿಗಳು ನೆರವಿಗೆ ಬರಬೇಕುಎಂದು ಪದ್ಮನಾಭ್, ರಾಮಾಂಜನೇಯ,ಶಾನೇಶ್, ವಿನಯ್ ಒತ್ತಾಯಿಸಿದ್ದಾರೆ.
ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.