ಕಾಸರಗೋಡು : ದೇವಸ್ಥಾನದಲ್ಲಿ ಕೋವಿಡ್ ಜಾಗೃತಿ ಸಂದೇಶ
Team Udayavani, May 19, 2021, 6:22 PM IST
ಕಾಸರಗೋಡು : ಕೇರಳದ ದೇವಸ್ಥಾನವೊಂದರಲ್ಲಿ ಭಕ್ತಗೀತೆಯ ಬದಲಾಗಿ ಕೋವಿಡ್ ಜಾಗೃತಿ ಪದ್ಯವನ್ನು ಹಾಡುವುದರ ಮೂಲಕ ಮಾದರಿಯಾಗಿದೆ.
ಕೋವಿಡ್ ಸೋಂಕಿನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕೇರಳದಲ್ಲಿ ಲಾಕ್ ಡೌನ್ ಮೊದಲಾದ ಕಠಿಣ ಕ್ರಮ ಜರಿಗೊಳಿಸುವುದರ ಮೂಲಕ ಕೋವಿಡ್ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ಪ್ರಯತ್ನ ಪಡುತ್ತಿದೆ.
ಇದನ್ನೂ ಓದಿ : ಶಿರ್ವ ಕೋಳಿ ಅಂಕಕ್ಕೆ ದಾಳಿ: ವಾಹನಗಳ ಸಹಿತ ಇಬ್ಬರ ವಶ ; ಉಡುಪಿ ಡಿಎಆರ್ ಪೊಲೀಸ್ ಶಾಮೀಲು
ಸರ್ಕಾರ, ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಸರ್ಕಾರೇತರ ಸಂಘ ಸಂಸ್ಥೆಗಳು ಕೋವಿಡ್ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವುದರ ನಡುವೆ ಕೇರಳದ ದೇವಸ್ಥಾನವೊಂದರಲ್ಲಿ ಕೋವಿಡ್ ಜಾಗೃತಿ ಮಾಡುತ್ತಿರುವುದು ಈಗ ಸುದ್ದಿಯಾಗುತ್ತಿದೆ.
ಕಾಸರಗೋಡು ಜಿಲ್ಲೆಯ ತಿರುತಿ ಗ್ರಾಮದ ಭಗವತಿ ದೇವಸ್ಥಾನದಲ್ಲಿ ಕೋವಿಡ್ ಜಾಗೃತಿಯ ಸಂದೇಶವನ್ನು ಧ್ವನಿ ವರ್ಧಕಗಳ ಮೂಲಕ ಹೇಳಿ ಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಮಾದರಿಯ ವಿಚಾರವಾಗಿದೆ.
ಲಸಿಕೆ ಬಗ್ಗೆ ಹಾಗೂ ಸೋಂಕಿನ ಬಗ್ಗೆ ಮಾಧ್ಯಮಗಳಲ್ಲಿ, ಮೊಬೈಲ್ ಕಾಲರ್ ಟ್ಯೂನ್ ನಲ್ಲಿ ಜಾಗೃತಿ ಮೂಡಿಸುವುದನ್ನು ಎಲ್ಲರೂ ಗಮನಿಸಿದ್ದಾರೆ. ಆದರೇ, ದೇವಸ್ಥಾನವೊಂದರಲ್ಲಿ ಈ ರೀತಿಯ ಜಾಗೃತಿಯನ್ನು ಮೂಡಿಸುವುದರ ಮೂಲಕ ಸೋಂಕಿನ ಗಂಭೀರತೆಯನ್ನು ತಿಳಿ ಹೇಳುತ್ತಿರುವುದು ಮಾದರಿಯಾಗಿದೆ.
ಇದನ್ನೂ ಓದಿ : ಕೋವಿಡ್ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ : ಸಿದ್ದರಾಮಯ್ಯ ವಾಗ್ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.