ಕಪ್ಪು ಶಿಲೀಂಧ್ರ ನಿಯಂತ್ರಣಕ್ಕೆ ಅಗತ್ಯ ಕ್ರಮ
Team Udayavani, May 19, 2021, 9:19 PM IST
ಚಿತ್ರದುರ್ಗ: ಕೊರೊನಾ ಮಹಾಮಾರಿಯ ನಡುವೆಯೇ ಬ್ಲಾಕ್ ಫಂಗಸ್ ಎಂಬ ರೋಗ ಹರಡುತ್ತಿದೆ. ಈ ರೋಗದ ಲಕ್ಷಣಗಳು ಕಂಡು ಬಂದಲ್ಲಿ ನಿತ್ಯವೂ ವರದಿ ಮಾಡಬೇಕು ಎಂದು ಜಿಲ್ಲಾಧಿ ಕಾರಿ ಕವಿತಾ ಎಸ್. ಮನ್ನಿಕೇರಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅ ಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬ್ಲಾಕ್‌ಫಂಗಸ್ ಒಬ್ಬರಿಂದ ಮತ್ತೂಬ್ಬರಿಗೆ ಹರಡುವುದಿಲ್ಲ. ಮೂಗಿನಲ್ಲಿ ಕಫದ ಮಾದರಿ ರಕ್ತ, ಮೂಗಿನ ನಾಳಗಳಲ್ಲಿ ಕೆಂಪು ಬದಲಾಗಿ ಕಪ್ಪಾಗುವುದು, ಕಣ್ಣು, ಮೂಗಿನ ಮೂಲಕ ಮೆದುಳಿಗೆ ಹೋಗುತ್ತದೆ. ಆದ್ದರಿಂದ ಇದನ್ನು ಆರಂಭದಲ್ಲಿಯೇ ತಡೆಗಟ್ಟಬೇಕಾಗಿದ್ದು ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರು ಸೂಕ್ತ ಚಿಕಿತ್ಸೆಗೆ ಸಲಹೆ ನೀಡಬೇಕೆಂದರು.
ಇಎನ್‌ಟಿ ವೈದ್ಯರ ಮೂಲಕ ಎಲ್ಲಾ ವೈದ್ಯರಿಗೆ ಈ ರೋಗ ಲಕ್ಷಣಗಳ ಬಗ್ಗೆ ಆನ್‌ಲೈನ್‌ನಲ್ಲಿ ಕಾರ್ಯಾಗಾರ ಏರ್ಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿಗಳಿಗೆ ತಿಳಿಸಿದರು. ಪ್ರತಿ ತಾಲೂಕಿನಲ್ಲಿ ಇಎನ್‌ಟಿ ವೈದ್ಯರನ್ನು ನೋಡಲ್ ಅಧಿ ಕಾರಿಗಳನ್ನಾಗಿ ನೇಮಕ ಮಾಡಿ ಪ್ರತಿನಿತ್ಯ ಚಿಕಿತ್ಸೆ ಮಾಡುವ ವೇಳೆ ಈ ಲಕ್ಷಣಗಳು ಕಂಡುಬಂದ ರೋಗಿಗಳ ವಿವರವನ್ನು ಕಳುಹಿಸಬೇಕೆಂದರು. ನಗರದ ಇಎನ್‌ಟಿ ತಜ್ಞ ಡಾ| ಪ್ರಹ್ಲಾದ್ ಮಾತನಾಡಿ, ಬ್ಲಾಕ್ ಫಂಗಸ್ ಬಹಳ ಅಪಾಯಕಾರಿಯಾಗಿದೆ. ಆರಂಭದಲ್ಲಿ ಮುಂಜಾಗ್ರತೆ ವಹಿಸಿದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಮೂಗಿನ ಎರಡು ಕಡೆ ಕೆಂಪಗಿನ ಬದಲಾಗಿ ಕಪ್ಪಾಗಿರುತ್ತದೆ. ಕಣ್ಣು ನೋವು, ತಲೆನೋವಿನಂತಹ ಲಕ್ಷಣಗಳು ಕಂಡು ಬರುತ್ತವೆ. ದಂತ ವೈದ್ಯರು, ನರರೋಗ ತಜ್ಞರು ಇದನ್ನು ಗಮನಿಸಿ ವರದಿ ಮಾಡಬಹುದಾಗಿದೆ. ಆರಂಭದಲ್ಲಿ ಕಂಡುಕೊಂಡಲ್ಲಿ ಇದನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.
28, 500 ಡೋಸ್ ಲಸಿಕೆ ಲಭ್ಯ: ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ಹಾಕುತ್ತಿದ್ದು, 28500 ಡೋಸ್ ಲಸಿಕೆಗಳು ಬಂದಿದೆ. ಎರಡನೇ ಡೋಸ್ ಅವಶ್ಯಕತೆ ಇರುವ 4800 ಫಲಾನುಭವಿಗಳನ್ನು ಗುರುತಿಸಲಾಗಿದೆ. 1750 ಕೋವ್ಯಾಕ್ಸಿನ್ ಎರಡನೇ ಲಸಿಕೆಯನ್ನು ಹಾಕಲಾಗುತ್ತದೆ. ಲಸಿಕೆ ಹಾಕಲು ಜಿಲ್ಲೆಯಲ್ಲಿ 500 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿಗ ತ ಶಾಲೆಯಲ್ಲಿ ಹಾಕಲಾಗುತ್ತದೆ. ಮತ್ತು ಉಪ ಕೇಂದ್ರಗಳ ವ್ಯಾಪ್ತಿಯ ಗ್ರಾಮ ಹಾಗೂ ಇದೇ ವ್ಯಾಪ್ತಿಯ ಇನ್ನೊಂದು ಗ್ರಾಮದಲ್ಲಿ ಲಸಿಕೆ ಹಾಕಲಾಗುತ್ತದೆ.
ಸಾರ್ವಜನಿಕರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬಹುದಾಗಿದೆ ಮತ್ತು ಲಸಿಕಾ ಕೇಂದ್ರಕ್ಕೆ ಆಗಮಿಸುವವರಿಗೂ ಶೇ. 50 ರಷ್ಟು ಲಸಿಕೆ ಹಾಕಲಾಗುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಧಿಕಾರಿ ತಿಳಿಸಿದರು.
ಆಕ್ಸಿಜನ್ ಸಮರ್ಪಕ ಪೂರೈಕೆ: ಜಿಲ್ಲೆಗೆ 8.5 ಕೆ.ಎಲ್ ಆಕ್ಸಿಜನ್ ಅಗತ್ಯವಿದ್ದು, ಪೂರೈಕೆ ಮಾಡಲಾಗುತ್ತಿದೆ. ಪ್ರತಿ ನಿತ್ಯ ಜಿಲ್ಲಾಸ್ಪತ್ರೆಗೆ 3 ಕೆ.ಎಲ್, ಬಸವೇಶ್ವರ ಆಸ್ಪತ್ರೆಗೆ 2.5 ಕೆ.ಎಲ್, ರೇಣುಕಾ ಗ್ಯಾಸ್‌ಗೆ 1 ಕೆ.ಎಲ್, ಸದರನ್ ಪೂರೈಕೆದಾರರಿಗೆ 2 ಕೆ.ಎಲ್ ಹಂಚಿಕೆ ಮಾಡಿ ಪೂರೈಸಲಾಗುತ್ತಿದೆ. ಇದರೊಂದಿಗೆ 379 ಜಂಬೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ.
ಜಿಲ್ಲಾಸ್ಪತ್ರೆಗೆ 80, ಬಸವೇಶ್ವರ ಆಸ್ಪತ್ರೆಗೆ 5, ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ 40, ಕೃಷ್ಣಾ ನರ್ಸಿಂಗ್ ಹೋಂಗೆ 20, ಬಸಪ್ಪ ಆಸ್ಪತ್ರೆಗೆ 25, ಸಾಯಿ ನಾರಾಯಣ ಆಸ್ಪತ್ರೆಗೆ 20, ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ 8, ಸಿರಿಗೆರೆಗೆ 8, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ 20, ಪರಶುರಾಮಪುರಕ್ಕೆ 5, ನಾಯಕನಹಟ್ಟಿಗೆ 5, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳ ಕಚೇರಿಗೆ 17 ಸೇರಿದಂತೆ 253 ಹಾಗೂ ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ 28, ಧರ್ಮಪುರಕ್ಕೆ 10, ಮರಡಿಹಳ್ಳಿಗೆ 10, ಹೊಳಲ್ಕೆರೆಗೆ 30, ಬಿ.ದುರ್ಗಕ್ಕೆ 9, ಹೊಸದುರ್ಗಕ್ಕೆ 20, ಕಂಚೀಪುರ-ಕಿಟ್ಟದಾಳ್ ಗೆ 5 ಹಾಗೂ ಶ್ರೀರಾಂಪುರಕ್ಕೆ 4 ಸೇರಿದಂತೆ 126 ಸೇರಿದಂತೆ ಒಟ್ಟು 379 ಜಂಬೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ, ಡಿಎಚ್‌ಒ ಡಾ| ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ| ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಂಗನಾಥ್, ಡಾ| ತುಳಸಿರಂಗನಾಥ್, ಆರ್‌ಸಿಎಚ್ ಅ ಧಿಕಾರಿ ಡಾ| ಕುಮಾರಸ್ವಾಮಿ, ಹೊಸದುರ್ಗ ತಾಲೂಕು ಆರೋಗ್ಯಾ ಧಿಕಾರಿ ಡಾ| ಚಂದ್ರಶೇಖರ್ ಕಂಬಾಳಿಮಠ, ಬಿಸಿಎಂ ಅ ಧಿಕಾರಿ ಅವೀನ್, ಮಲೇರಿಯಾ ನಿಯಂತ್ರಣಾಧಿ ಕಾರಿ ಡಾ| ಕಾಶಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.