ಕೋವಿಡ್: ಒಡಿಶಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಾಪಾತ್ರ ನಿಧನ
Team Udayavani, May 20, 2021, 12:39 AM IST
ಭುವನೇಶ್ವರ: ಒಡಿಶಾ ಕ್ರಿಕೆಟ್ ತಂಡದ ಮಾಜಿ ನಾಯಕ ಪ್ರಶಾಂತ್ ಮೊಹಾಪಾತ್ರ (47) ಬುಧವಾರ ಬೆಳಗ್ಗೆ ಇಲ್ಲಿನ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಕೊನೆಯುಸಿರೆಳೆದರು.
ಇದರೊಂದಿಗೆ ಹತ್ತೇ ದಿನಗಳ ಅಂತರದಲ್ಲಿ ತಂದೆ ಹಾಗೂ ಮಗ ಇಬ್ಬರೂ ಕೋವಿಡ್‌ಗೆ ಬಲಿಯಾದಂತಾಯಿತು. ಪ್ರಶಾಂತ್ ಮೊಹಾಪಾತ್ರ ಅವರ ತಂದೆ, ರಾಜ್ಯಸಭಾ ಎಂಪಿ, ಪದ್ಮಭೂಷಣ ಪುರಸ್ಕೃತ ರಘುನಾಥ್ ಮೊಹಾಪಾತ್ರ ಮೇ 9ರಂದು ಇದೇ ಸೋಂಕಿನಿಂದ ಸಾವನ್ನಪ್ಪಿದ್ದರು.
ಪ್ರಶಾಂತ್ ಸ್ಥಿತಿ ಗಂಭೀರವಾದ್ದರಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಆಸ್ಪತ್ರೆಯ ತಜ್ಞ ವೈದ್ಯರ ತಂಡವೊಂದು ಇವರ ಆರೋಗ್ಯದ ಮೇಲೆ ವಿಶೇಷ ನಿಗಾ ಇರಿಸಿತ್ತು. ಆದರೆ ಇದು ಫಲಕಾರಿಯಾಗಲಿಲ್ಲ ಎಂದು ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ| ಎಸ್.ಎನ್. ಮೊಹಂತಿ ಹೇಳಿದರು.
ಪ್ರಶಾಂತ್ ಅವರ ಸಹೋದರ ಜಸೋಬಂತ್ ಕೂಡ ಕೋವಿಡ್ ಪಾಸಿಟಿವ್ ಫಲಿತಾಂಶ ಹೊಂದಿದ್ದು, ಇದೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಲಗೈ ಓಪನರ್
1973ರ ಸೆ. ಒಂದರಂದು ಜನಿಸಿದ ಪ್ರಶಾಂತ್ ಮೊಹಾಪಾತ್ರ ಆತ್ಮೀಯರ ವಲಯದಲ್ಲಿ “ಮುನ್ನಾ’ ಎಂದೇ ಜನಪ್ರಿಯರಾಗಿದ್ದರು. ಬಲಗೈ ಓಪನರ್ ಆಗಿದ್ದ ಅವರು ಮೊದಲು ಅಂಡರ್-19, ಬಳಿಕ 1990ರಲ್ಲಿ ಒಡಿಶಾ ರಣಜಿ ತಂಡವನ್ನು ಪ್ರವೇಶಿಸಿದರು. ದುಲೀಪ್ ಟ್ರೋಫಿ ಹಾಗೂ ದೇವಧರ್ ಟ್ರೋಫಿ ಕ್ರಿಕೆಟ್‌ನಲ್ಲಿ ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. 45 ಪ್ರಥಮ ದರ್ಜೆ ಪಂದ್ಯಗಳಿಂದ 2,196 ರನ್ ಗಳಿಸಿದ್ದರು. ಇದರಲ್ಲಿ 5 ಶತಕ ಸೇರಿತ್ತು. ನಿವೃತ್ತಿ ಬಳಿಕ ಬಿಸಿಸಿಐ ಮ್ಯಾಚ್ ರೆಫ್ರಿಯಾಗಿಯೂ ಕರ್ತವ್ಯ ನಿಭಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.