ಮನೆಯಿಂದ ಹೊರ ಬರುವ ಮುನ್ನ ಎಚ್ಚರ: ಬಿಗಿ ಕ್ರಮಕ್ಕೆ ಪೊಲೀಸರಿಗೆ ಗೃಹ ಸಚಿವರ ಸೂಚನೆ
Team Udayavani, May 20, 2021, 11:59 AM IST
ಬೆಂಗಳೂರು: ಇನ್ನು ಮುಂದೆ ಅನಗತ್ಯವಾಗಿ ಮನೆಯಿಂದ ವಾನಹದೊಂದಿಗೆ ಹೊರಬಂದರೆ ವಾಹನದ ಆಸೆ ಬಿಟ್ಟು, ಕೇಸು ಹಾಕಿಸಿಕೊಳ್ಳಲು ಸಿದ್ದರಾಗಿ. ಯಾಕೆಂದರೆ ಇಂತಹ ಸೂಚನೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಜನರು ಕೋವಿಡ್ ನಿಯಮ ಪಾಲನೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಇದ್ದರೂ ಜನ ಅನಗತ್ಯ ಓಡಾಟ ನೆಡೆಸುತ್ತಿದ್ದಾರೆ. ಇದರಿಂದ ಲಾಕ್ ಡೌನ್ ಯಶಸ್ವಿ ಮಾಡಲು ಪೊಲೀಸರು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತಾರೆ. ವಾಹನಗನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವಾಗ್ತಿದೆ: ಪೊಲೀಸರಿಗೆ ಎಚ್ಚರಿಕೆ ನೀಡಿದ ಈಶ್ವರಪ್ಪ
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಅನಗತ್ಯವಾಗಿ ಓಡಾಡುವವರಿಗೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಕೇವಲ ದಂಡ ವಿಧಿಸದೆ ವಾಹನ ಜಪ್ತಿ ಮಾಡಿ, ಪ್ರಕರಣ ದಾಖಲಿಸಲು ಗೃಹ ಸಚಿವರು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.