ಬ್ಲ್ಯಾಕ್ ಫಂಗಸ್…ಏಕೆ? ಹೇಗೆ ಬರುತ್ತದೆ: ಮುಂಜಾಗ್ರತೆ ಅಗತ್ಯ
Team Udayavani, May 20, 2021, 1:38 PM IST
ಈಗೀಗ ಸುದ್ದಿಯಲ್ಲಿರುವ ಬ್ಲ್ಯಾಕ್ ಫಂಗಸ್ ಕೊರೊನೋತ್ತರವಾಗಿ ಕಂಡು ಬರುವ ಒಂದು ರೋಗವಾಗಿದೆ. ಇದರಿಂದ ಪಾರಾಗಲು ಕೆಲವು ಸರಳ ಎಚ್ಚರಿಕೆಗಳನ್ನು ಪಾಲಿಸಬೇಕಾಗಿದೆ. ಬ್ಲ್ಯಾಕ್ ಫಂಗಸ್‌ನ್ನು ಮ್ಯೂಕೋರ್ ಮೈಕೊಸಿಸ್ ಎನ್ನುತ್ತಾರೆ. ಈಗ ಕೋವಿಡ್ ಗುಣಮುಖರಾದ ಒಂದು ವಾರ ಅಥವಾ 10 ದಿನಗಳಲ್ಲಿ ಕಂಡುಬಂದಿದೆ. ಇದರಿಂದ ಕಣ್ಣು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅನಂತರ ಮೂಗಿನ ಮೂಲಕ ವೈರಾಣು ಮಿದುಳಿಗೆ ಹೋಗುತ್ತದೆ. ಇಡೀ ಕಣ್ಣನ್ನೇ ರೆಪ್ಪೆ ಸಹಿತ ತೆಗೆಯಬೇಕಾಗುತ್ತದೆ. ಬೆಂಗಳೂರು, ಮಂಗಳೂರು ಸಹಿತ ರಾಜ್ಯದ ಹಲವೆಡೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ.
ಸುದೈವವಶಾತ್ ಉಡುಪಿ ಜಿಲ್ಲೆಯಲ್ಲಿ ಪ್ರಕರಣಗಳು ಕಂಡುಬಂದಿಲ್ಲ. ಕೆಲವು ಮಾರ್ಗೋಪಾಯಗಳನ್ನು ಅನುಸರಿಸಿದರೆ ಬ್ಲ್ಯಾಕ್ ಫಂಗಸ್‌ನಿಂದ ಪಾರಾಗಬಹುದು ಎಂಬುದು ಪರಿಣತ ವಿಜ್ಞಾನಿಗಳ ಅಭಿಮತ
ಏಕೆ? ಹೇಗೆ ಬರುತ್ತದೆ?
ಮಧುಮೇಹ ಹೆಚ್ಚಿಗೆ ಇರುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ (ಕ್ಯಾನ್ಸರ್ ಇತ್ಯಾದಿ ಗಳಿಂದಾಗಿ) ಚಿಕಿತ್ಸೆ ನೀಡುವಾಗ ಅನಿವಾರ್ಯವಾಗಿ ಸ್ಟಿರಾಯ್ಡ ಕೊಡ ಬೇಕಾಗುತ್ತದೆ. ಗಂಭೀರವಾಗಿ ರೋಗಿಗಳು ಆಸ್ಪತ್ರೆಗಳಿಗೆ ಬರುವುದ ರಿಂದ ಸ್ಟಿರಾಯ್ಡ ಕೊಡಲೇ ಬೇಕಾಗುತ್ತದೆ. ಹೆಚ್ಚು ಮಧುಮೇಹ ಇರುವವರಿಗೆ ಸ್ಟಿರಾಯ್ಡ ಕೊಟ್ಟರೆ ಮಾತ್ರ ಕೊರೊನಾವನ್ನು ನಿಯಂತ್ರಿಸ ಬಹುದು. ಇದರ ಜತೆಗೆ ದೇಹದ ರೋಗನಿರೋಧಕ ಶಕ್ತಿಯೂ ಕಡಿಮೆ ಯಾಗುತ್ತದೆ. ಸೋಂಕಿತರು ತಾವು ಗುಣ ಮುಖರಾಗಿದ್ದೇವೆಂದು ಸಂತೋಷ ದಿಂದ ಮನೆಗೆ ಖುಷಿಯಾಗಿ ಮರಳ ಬಹುದು. ನಿರ್ಲಕ್ಷ್ಯ ವಹಿಸಿದರೆ ಬ್ಲ್ಯಾಕ್ ಫಂಗಸ್ ಬರುವ ಅಪಾಯವಿದೆ.
-ಡಾ|ಕೃಷ್ಣ ಪ್ರಸಾದ್, ಹಿರಿಯ ನೇತ್ರ ತಜ್ಞ , ಉಡುಪಿ
ಇದನ್ನೂ ಓದಿ:ಮಾಸ್ಕ್ ಧರಿಸಿಲ್ಲ ಎಂದು ಮಹಿಳೆಗೆ ಮಗಳ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಸಿಬ್ಬಂದಿ
ಸರಳ ಮುಂಜಾಗ್ರತೆ ಕ್ರಮಗಳು
1. ಕೋರೊನಾದಿಂದ ಗುಣಮುಖರಾದವರು ಗದ್ದೆ, ತೋಟ, ಗಾರ್ಡನ್, ಪ್ರಾಣಿ- ಪಕ್ಷಿಗಳ ಸಂಪರ್ಕದಲ್ಲಿದ್ದರೆ ಅಲ್ಲಿರುವ ಫಂಗಸ್ ವ್ಯಕ್ತಿಗಳಿಗೆ ಹರಡುತ್ತದೆ. ಆದ್ದರಿಂದ ಗುಣಮುಖರಾದ ಬಳಿಕ ಒಂದು ತಿಂಗಳು ಇವುಗಳಿಂದ ದೂರ ಇರಬೇಕು.
2 .ಬಿಸಿ ನೀರಿನ ಆವಿಯನ್ನು ತೆಗೆದುಕೊಳ್ಳುವಾಗ ಒಂದೆರಡು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ತೆಗೆದುಕೊಳ್ಳಿ. ಇದಕ್ಕೆ ಫಂಗಸ್ ಅನ್ನು ಕೊಲ್ಲುವ ಶಕ್ತಿ ಇರುತ್ತದೆ.
3.ಉಪ್ಪು ನೀರಿನಲ್ಲಿ ಗಂಟಲು ಶುದ್ಧ ಮಾಡುವ ಪ್ರಕ್ರಿಯೆ ಎಲ್ಲರಿಗೂ ಗೊತ್ತಿದೆ. ಕ್ಲೊರೆಕ್ಸಿಡಿನ್ ಮೌತ್ ವಾಶ್ ಸಿಗುತ್ತದೆ. ಇದರಿಂದ ಗಂಟಲು ಶುದ್ಧ ಮಾಡಿದರೆ ಫಂಗಸ್ ಸಾಯುತ್ತದೆ.
4.ಈಗ ಆಕ್ಸಿಜನ್ ಕಾನ್ಸಂ ಟ್ರೇಟರ್ ನ ಯಂತ್ರವನ್ನು ಮನೆಯಲ್ಲಿರಿಸಿಕೊಂಡು ಬಳಸುತ್ತಿದ್ದಾರೆ. ಇದಕ್ಕೆ ನೀರು ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ನಳ್ಳಿ ನೀರನ್ನು ಹಾಕುತ್ತಾರೆ. ಇದು ಸರಿಯಲ್ಲ. ನಳ್ಳಿ ನೀರಿನಲ್ಲಿಯೂ ಫಂಗಸ್ ಬರುವ ಸಾಧ್ಯತೆ ಇದೆ. ಆದ್ದರಿಂದ ಡಿಸ್ಟಿಲ್ ವಾಟರ್ (ಪ್ಯೂರಿಫೈಡ್ ವಾಟರ್) ಅಥವಾ ಬಿಸಿ ಮಾಡಿ ಆರಿದ ನೀರನ್ನು ಹಾಕಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.