ವೈದ್ಯಕೀಯ ಪೂರಕ ಉಪಕರಣ ಕೊಡುಗೆ
Team Udayavani, May 20, 2021, 5:34 PM IST
ಚಿಕ್ಕಬಳ್ಳಾಪುರ: ನಗರದ ಜೈನ್ ಖಾಸಗಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಲು ಯೋಜಿಸಲಾಗಿದ್ದು ಬೇಕಾಗಿರುವ ಹಲವು ವೈದ್ಯಕೀಯ ಪೂರಕ ಉಪಕರಣ ಪೂರೈಸಲು ಇಶಾ ಫೌಂಡೇಶನ್ ಸ್ವಇಚ್ಛೆಯಿಂದ ಮುಂದೆ ಬಂದಿರುವುದು ಶ್ಲಾಘನೀಯಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಬುಧವಾರ ನಗರ ಹೊರವಲಯದ ಜೈನ್‌ಖಾಸಗಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ವತಿಯಿಂದಕೋವಿಡ್ ಆಸ್ಪತ್ರೆ ಮಾಡಲು ಸುಮಾರು 15ಲಕ್ಷ ರೂ.ಮೌಲ್ಯದ ವೈದ್ಯಕೀಯ ಪೂರಕ ಉಪಕರಣಗಳನ್ನುಇಶಾ ಫೌಂಡೇಶನ್ ಅವರಿಂದ ಪಡೆದು ಮಾತನಾಡಿದರು. ಜಿಲ್ಲಾಡಳಿತ ಮತ್ತು ಜೈನ್ ಟ್ರಸ್ಟ್ ಸಂಸ್ಥೆಯ ಸಹಯೋಗದಲ್ಲಿ ನಗರದ ಜೈನ್ ಖಾಸಗಿ ಆಸ್ಪತ್ರೆಯನ್ನುಸದ್ಯದಲ್ಲೇ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲುಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಇಶಾಫೌಂಡೇಶನ್ 15 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಇಸಿಜಿ ಯಂತ್ರ, ಆಟೋಮ್ಯಾಟಿಕ್‌ಮಲ್ಟಿ ಪ್ಯಾರಾಮೀಟರ್, ಕಾರ್ಡಿಯಾಕ್ ಮಿಷನ್,ಫೇಸ್ ಟ್ರ್ಯಾಕ್ , ಡ್ರೆಸ್ಸಿಂಗ್ ಬಿನ್, ಹಾಟ್ ವಾಟರ್‌ಬ್ಯಾಗ್ ಇನ್ನು ಮುಂತಾದ ವೈದ್ಯಕೀಯ ಪೂರಕ ಉಪಕರಣ ಕೊಡುಗೆಯಾಗಿ ನೀಡಿದ್ದಾರೆಂದರು.
ಇದಲ್ಲದೆಮುಂದಿನದಿನಗಳಲ್ಲಿ100ಆಮ್ಲಜನಕಜಂಬೋ ಸಿಲಿಂಡರ್ ನೀಡುವುದಾಗಿಇಶಾಫೌಂಡೇಶನ್ ಸಂಸ್ಥೆಯ ರಾಘವೇಂದ್ರ ಶಾಸ್ತ್ರಿ ಮತ್ತು ಪ್ರಭಾಕರ್ ತಿಳಿಸಿದ್ದಾರೆ.ಕೋವಿಡ್ ಸಂಕಷ್ಟದಈಸ್ಥಿತಿಯಲ್ಲಿಸರ್ಕಾರೇತರ ಸಂಸ್ಥೆಗಳು ಈರೀತಿಯಾಗಿ ಕೋವಿಡ್‌ನಿಯಂತ್ರಿಸಲು ಜಿಲ್ಲಾಡಳಿತದ ಬೆಂಬಲಕ್ಕೆ ನಿಂತಿರುವಇಶಾ ಫೌಂಡೇಶನ್ ಮತ್ತು ಜೈನ್ ಟ್ರಸ್ಟ್‌ಸಂಸ್ಥೆಯವರಿಗೆ ವಿಶೇಷವಾದ ಧನ್ಯವಾದ ಎಂದರು.ಇದೇ ವೇಳೆ ರೋಟರಿ ಕ್ಲಬ್ ಸಂಸ್ಥೆಯವರುಜಿಲ್ಲಾ ಸರ್ಕಾರಿ ನೌಕರರ ಸಂಘದ ಮುಖಾಂತರ 1ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಜಿಲ್ಲಾಡಳಿತಕ್ಕೆನೀಡಿದರು.
ಸರ್ಕಾರೇತರ ಸಂಸ್ಥೆಗಳು ನೀಡುವ ಈಅಮೂಲ್ಯ ಕೊಡುಗೆಗಳನ್ನು ಜಿಲ್ಲಾಡಳಿತ ಸದ್ವಿನಿಯೋಗ ಮಾಡಿಕೊಳ್ಳಲಿದೆ. ಕೋವಿಡ್ ಸೋಂಕುನಿಯಂತ್ರಿಸಲು ಈವರೆಗೆ ಸಹಕಾರ ಸಹಾಯಹಸ್ತಚಾಚಿದ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಿಗೆಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ರಮೇಶ್,ಉಪವಿಭಾಗಾಧಿಕಾರಿ ಎ.ಎನ್. ರಘುನಂದನ್,ಇಶಾ ಫೌಂಡೇಶನ್ ಸಂಸ್ಥೆಯ ರಾಘವೇಂದ್ರಶಾಸ್ತ್ರಿ,ಪ್ರಭಾಕರ್, ಜಿಲ್ಲಾ ಸರ್ಕಾರಿ ನೌಕರರ ಸಂಘದಜಂಟಿ ಕಾರ್ಯದರ್ಶಿ ಸುನೀಲ್ ಪಿ.ಆರ್,ಪದಾಧಿಕಾರಿಗಳಾದ ಅಮರ್, ನಾಗರಾಜಪ್ಪ , ಜೈನ್‌ಟ್ರಸ್ಟ್‌ನ ಪದಾಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.