ಗ್ರಾಮಗಳಲ್ಲಿ ಸೋಂಕಿತರ ಸಂಸ್ಕಾರ: ಆತಂಕ, ವಿರೋಧ
Team Udayavani, May 20, 2021, 7:03 PM IST
ನೆಲಮಂಗಲ: ತಾಲೂಕಿನ ಗ್ರಾಮೀಣಪ್ರದೇಶಗಳಲ್ಲಿ ಸೋಂಕಿತ ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆಮುಂದಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮೀಣ ಜನರಲ್ಲಿ ಆತಂಕಮನೆ ಮನೆಮಾಡಿದೆ.
ಬೆಂಗಳೂರು ಅಂಚಿನಲ್ಲಿರುವ ನೆಲಮಂಗಲ ತಾಲೂಕು ಮತ್ತು ಪಟ್ಟಣ ಪ್ರದೇಶದ ಆಸುಪಾಸಿನಲ್ಲಿ ಸಾಕಷ್ಟುಮಂದಿ ಬೆಂಗಳೂರಿಗರು ಒಂದೆಡೆ ಫಾರ್ಮ್ ಹೌಸ್‌ಗಳನ್ನು ಮಾಡಿಕೊಂಡಿದ್ದರೆ ಮತ್ತೂಂದೆಡೆ ಟ್ರಸ್ಟ್ ಮತ್ತಿತರ ಸಂಸ್ಥೆಗಳನ್ನುಕಟ್ಟಿಕೊಂಡು ಅನಾಥಾಶ್ರಮ, ಧಾರ್ಮಿಕ ಕೇಂದ್ರ ಮತ್ತಿತರ ಚಟುವಟಿಕೆಗಳನ್ನು ಪ್ರಾರಂಭಿಸಿ ನೆಮ್ಮದಿಗೆ ನಗರ ಸಮೀಪದ ಹಳ್ಳಿಗಳನ್ನು ಸೇರಿದ್ದಾರೆ.
ಪ್ರಸ್ತುತ ಕೋರೊನಾ ಆತಂಕದಿಂದ ನಗರವಾಸಿಗಳು ಹಳ್ಳಿಗಳತ್ತ ಮುಖಮಾಡಿರುವುದಲ್ಲದೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಗ್ರಾಮೀಣ ಪ್ರದೇಶದತ್ತ ಧಾವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಹಳ್ಳಿಗಾಡಿನ ಜನರಲ್ಲಿ ಭಯದವಾತಾರಣ ಸೃಷ್ಟಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮೀಣ ಪ್ರದೇಶದ ಜನರಲ್ಲಿಆತಂಕವನ್ನು ಹೋಗಲಾಡಿಬೇಕೆಂಬುದು ಗ್ರಾಮೀಣ ಜನರ ಒತ್ತಾಯವಾಗಿದೆ.
ಬೆಂಗಳೂರು ನಗರ ಸೇರಿದಂತೆಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಸರಕಾರದಿಂದ ಸೌದೆ ಮತ್ತಿತರ ಸೌಲಭ್ಯಗಳನ್ನೊಳಗೊಂಡ ತಾತ್ಕಾಲಿಕ ಚಿತಾಗಾರಗಳನ್ನು ಮಾಡಲಾಗಿದೆ. ಸೋಂಕಿನಿಂದ ಮೃತಪಟ್ಟ ನಗರವಾಸಿಗಳು ಗ್ರಾಮೀಣ ಪ್ರದೇಶಗಳಿಗೆ ಮೃತದೇಹವನ್ನು ತಂದು ಅಂತ್ಯಕ್ರಿಯೆಯನ್ನು ಮಾಡುವುದರಿಂದ ಹಳ್ಳಿಗಾಡಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಇದರಿಂದಾಗಿ ಸೋಂಕು ಹೆಚ್ಚಾಗುವ ಲಕ್ಷಣಗಳನ್ನು ತಳ್ಳಿ ಹಾಕುವಂತಿಲ್ಲ,ಈಗಾಗಲೆ ಲಾಕ್‌ಡೌನ್‌ನಿಂದ ಹಳ್ಳಿಗೆಬಂದಿರುವವರಿಂದ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳವಾಗಿರುವುದು ಬೇಸರದ ಸಂಗತಿ ಎಂದು ಎಪಿಎಂಸಿನಿರ್ದೇಶಕ ಬೂದಿಹಾಳ್ ಗೋವಿಂದರಾಜು ತಿಳಿಸಿದರು.
ಸೋಂಕಿಗೆ ಕಡಿವಾಣ ಹಾಕುವಸಲುವಾಗಿ ಸರಕಾರ ಗ್ರಾಪಂವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿಕಾರ್ಯೋನ್ಮುಖರಾಗದಿದ್ದರೆ ಮತ್ತೂಂದೆಡೆಚಿಕಿತ್ಸೆಮತ್ತುಔಷಧೋಪಚಾರಕ್ಕಾಗಿಮೊಬೈಲ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಿದೆ.ಸಾಲದು ಎಂಬಂತೆ ರಾಜಸ್ವನಿರೀಕ್ಷಕರು.ಗ್ರಾಮಲೆಕ್ಕಾಧಿಕಾರಿಗಳು ಬೀಟ್‌ಪೊಲೀಸ್‌ನವರು ಹೆಚ್ಚುಜಾಗೃತರಾಗಬೇಕಿದ್ದು ಇಂತಹಪ್ರಕರಣಗಳು ಕಂಡುಬಂದಲ್ಲಿ ಸೂಕ್ತರೀತಿಯಕ್ರಮವಹಿಸಿ ಜಾಗೃತಿ ಮೂಡಿಸಿಆತಂಕವನ್ನು ದೂರಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.