ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ನಟ ಕಿಚ್ಚ ಸುದೀಪ್
Team Udayavani, May 20, 2021, 8:07 PM IST
ಬೆಂಗಳೂರು: ಕೋವಿಡ್ ಸೃಷ್ಠಿಸಿರುವ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಜನರಿಗೆ ಕಿಚ್ಚ ಸುದೀಪ್ ಅವರ ಟ್ರಸ್ಟ್ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಯೋಗ ಕ್ಷೇಮ ವಿಚಾರಿಸುವ ಕಾರ್ಯ ಮಾಡಿದೆ.
ತಮ್ಮ ತಂಡದ ಮೂಲಕ ಹಿರಿಯ ಕಲಾವಿದರ ಮನೆಗೆ ವಿಶೇಷ ತಿಂಡಿಯ ಪೊಟ್ಟಣವನ್ನು ಕಳುಹಿಸಿ ಕೊಟ್ಟಿರುವ ಸುದೀಪ್ , ಅದರ ಜೊತೆಗೆ ‘ನನ್ನ ಕುಟುಂಬದ ಹಿರಿಯರು ನೀವು, ನೀವೆಲ್ಲಾ ಹೇಗಿದ್ದೀರಾ ? ಎಂದು ಯೋಗಕ್ಷೇಮ ವಿಚಾರಿಸುವ ಪುಟ್ಟ ಪತ್ರವನ್ನು ಬರೆದಿದ್ದಾರೆ.
ಕಿಚ್ಚ ಸುದೀಪ್ ಅವರ ಟ್ರಸ್ಟ್ ನಾಲ್ಕು ತಂಡಗಳಾಗಿ ಕಲಾವಿದರ ಮನೆಗೆ ತೆರಳಿ, ಯೋಗಕ್ಷೇಮ ವಿಚಾರಿಸುತ್ತಿದೆ. ಕೋವಿಡ್ ಸೋಂಕಿನಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಹಿರಿಯ ಜೀವಿಗಳಿಗೆ ಸುದೀಪ್ ಅವರ ಈ ಕಾರ್ಯ ಚೈತನ್ಯ ಹಾಗೂ ಧೈರ್ಯವನ್ನು ನೀಡಿದೆ.
ಇತ್ತೀಚಿಗಷ್ಟೆ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿಯ ಆಸ್ಪತ್ರೆಯ ಬಿಲ್ ನ್ನು ತಾವೇ ಕಟ್ಟಿದ್ದರು. ಹಾಗೂ ತಮ್ಮ ಅಭಿಮಾನಿಯ ಪತಿಯ ಚಿಕಿತ್ಸೆಗೂ ಧನ ಸಹಾಯ ಮಾಡಿದ್ದರು.
ಕೋವಿಡ್ ಸಂದರ್ಭದಲ್ಲಿ ಸುದೀಪ್ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪುರ ಹರಿದು ಬರುತ್ತಿದೆ. ಜನರ ಪಾಲಿಗೆ ಅವರು ರಿಯಲ್ ಹೀರೋ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
MUST WATCH
ಹೊಸ ಸೇರ್ಪಡೆ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.