ರಾಜ್ಯಕ್ಕೆ 68 ಆಕ್ಸಿಜನ್ ಜನರೇಟರ್ ಯುನಿಟ್
Team Udayavani, May 21, 2021, 6:00 AM IST
ಬೆಳ್ತಂಗಡಿ: ಕೋವಿಡ್ ಸೋಂಕಿತರಿಗೆ ತೀವ್ರ ಆಮ್ಲಜನಕ ಕೊರತೆ ಎದುರಾಗುತ್ತಲೇ ರಾಜ್ಯ ಸರಕಾರ 10 ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದ 30 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದಿಸುವ ಘಟಕ(On oxygen Generator unit)ನಿರ್ಮಾಣಕ್ಕೆ ಮುಂದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ವಿಭಾಗದಿಂದ ಘಟಕ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು ಜೂನ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರ ಸೂಚಿಸಿದೆ. ಇದಲ್ಲದೆ ಎಂ.ಆರ್.ಪಿ.ಎಲ್., ಇಂಡೇನ್ ಆಯಿಲ್ ಸೇರಿದಂತೆ ಇತರ ಆಯಿಲ್ ಕಂಪೆನಿಗಳು, ಇನ್ಫೋಸಿಸ್ ಸೇರಿದಂತೆ ಇತರ ಸಂಸ್ಥೆಗಳು ಸೇರಿ ರಾಜ್ಯದ ಇತರ 28 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಘಟಕ ನಿರ್ಮಾಣಕ್ಕೆ ಮುಂದೆ ಬಂದಿದೆ. ಹೀಗೆ ರಾಜ್ಯದಲ್ಲಿ ಒಟ್ಟು 68 ಘಟಕ ನಿರ್ಮಾಣವಾಗಲಿದೆ.
38.60 ಕೋ.ರೂ. ವೆಚ್ಚ :
ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳಲ್ಲಿ ವಿ.ಎಸ್.ಎ. ತಂತ್ರಜ್ಞಾನವುಳ್ಳ 500 ಎಲ್. ಪಿ.ಎಂ. ಸಾಮರ್ಥ್ಯ(ಪ್ರತಿ ಘಟಕಕ್ಕೆ 1.37 ಕೋ.ರೂ.)ದಂತೆ ಅಂದಾಜು 14 ಕೋ.ರೂ. ವೆಚ್ಚದಲ್ಲಿ ಹಾಗೂ 30 ತಾಲೂಕು ಆಸ್ಪತ್ರೆಗಳಿಗೆ ಪಿ.ಎಸ್.ಎ. ತಂತ್ರಜ್ಞಾನವುಳ್ಳ 390 ಎಲ್.ಪಿ.ಎಂ. ಸಾಮರ್ಥ್ಯ (ಪ್ರತಿ ಘಟಕಕ್ಕೆ 82 ಲಕ್ಷ ರೂ.)ದಂತೆ ಅಂದಾಜು 24.60 ಕೋ.ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದೆ.
ಉಭಯ ಜಿಲ್ಲೆಯಲ್ಲಿ ಮೂರು ಕಡೆ :
ಕೊಯಮತ್ತೂರಿಂದ ಟ್ರೈಡೆಂಟ್ ಕಂಪೆನಿ ಯಂತ್ರೋಪಕರಣ ಸರಬರಾಜು ಮಾಡಲಿದ್ದು, ಗಾಳಿಯಿಂದಲೇ ಆಮ್ಲ ಜನಕ ಹೀರಿಕೊಂಡು ಉತ್ಪಾದಿಸುವ ಘಟಕವಾಗಿದ್ದು, ವೆನಾÉಕ್ ಆಸ್ಪತ್ರೆಯಲ್ಲಿ 930 ಎಲ್.ಪಿ.ಎಂ.(ಲೀಟರ್ ಪರ್ ಮಿನಿಟ್)ನ ಘಟಕವನ್ನು ನಿರ್ಮಿಸುವ ಜವಾಬ್ದಾರಿ ಎಂ.ಆರ್.ಪಿ.ಎಲ್. ಕಂಪೆನಿ ವಹಿಸಿದೆ. ಸರಕಾರದಿಂದ 500 ಎಲ್.ಪಿ.ಎಂ. ಸಾಮರ್ಥ್ಯದ ಘಟಕ, ಬೈಂದೂರು ಹಾಗೂ ಬೆಳ್ತಂಗಡಿಯಲ್ಲಿ 390 ಎಲ್.ಪಿ.ಎಂ. ಸಾಮರ್ಥ್ಯದ ಘಟಕ ನಿರ್ಮಾಣವಾಗಲಿದೆ. ಪ್ರತಿ ನಿತ್ಯ 38 ಎಂ.ಟಿ. ಆಕ್ಸಿಜನ್ ತಯಾರಿಸಬಹುದಾಗಿದ್ದು, 56 ಹಾಸಿಗೆಗೆ ನಿರಂತರ ಆಮ್ಲಜನಕ ಪೂರೈಸಬಲ್ಲದಾಗಿದೆ. 500 ಎಲ್.ಪಿ.ಎಂ. ಘಟಕವು 80 ಹಾಸಿಗೆ ಹಾಗೂ 930 ಎಲ್.ಪಿ.ಎಂ. ಸಾಮರ್ಥ್ಯದ ಘಟಕವು 100 ಹಾಸಿಗೆಗಳಿಗೆ ನಿರಂತರ ಆಮ್ಲಜನಕ ನೀಡಬಲ್ಲವು.
ಇದರಿಂದಾಗಿ ಮೆಡಿಕಲ್ ಆಕ್ಸಿಜನ್ ಸರಬರಾಜುದಾರರ ಮೇಲೆ ಅವ ಲಂಬಿರಾಗುವ ಹೊರೆ ತಗ್ಗುವ ಜತೆಗೆ ಗುಡ್ಡಗಾಡು ಮತ್ತು ಗ್ರಾಮೀಣ ಭಾಗಗಳಲ್ಲಿ ಮೆಡಿಕಲ್ ಆಕ್ಸಿಜನ್ ಒದಗಿಸುವುದು ಸುಲಭವಾಗಲಿದೆ. ಸದ್ಯ ಮಂಗಳೂರು ಮತ್ತು ಉಡುಪಿಯಲ್ಲಿ 6,000 ಲೀಟರ್‌ನ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಮಾತ್ರ ಇದ್ದು ಇದಕ್ಕೆ ಪರ್ಯಾಯವಾಗಿ ನೂತನ ಘಟಕವು ಕೊರೊನಾ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಲಿದೆ.
ರಾಜ್ಯದಲ್ಲೇ 10 ಜಿಲ್ಲಾಸ್ಪತ್ರೆ ಹಾಗೂ 30 ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಲಿದೆ. ಖಾಸಗಿ ಸಂಸ್ಥೆಗಳು ಹೆಚ್ಚಿನ ಕಡೆ ಕೊಡುಗೆ ನೀಡಲು ಮುಂದಾಗಿವೆ. ಜೂನ್ ತಿಂಗಳ ಒಳಗಾಗಿ ಘಟಕ ಸೇವೆಗೆ ಸಿದ್ಧವಾಗಲಿದ್ದು, ಕೋವಿಡ್ ಮೂರನೇ ಅಲೆ ಎದುರಿಸಲು ಘಟಕಗಳು ಆರೋಗ್ಯ ಇಲಾಖೆಗೆ ಬಲ ತುಂಬಲಿದೆ. –ಶ್ರೀನಾಥ್ ಎಂ.ಬಿ., ಕಾರ್ಯಪಾಲಕ ಎಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ಮೈಸೂರು ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.