ಕೋವಿಡ್ ನಿಯಂತ್ರಣಕ್ಕೆ ಮತ್ತೆ ಸೀಲ್‌ಡೌನ್
Team Udayavani, May 21, 2021, 7:21 AM IST
ಉಡುಪಿ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಹಿಡಿತಕ್ಕೆ ತರಲು ಜಿಲ್ಲಾಡಳಿತ ಇದೀಗ ಮತ್ತೆ ಪಾಸಿಟಿವ್ ಪತ್ತೆಯಾದ ಸ್ಥಳವನ್ನು ಸೀಲ್‌ಡೌನ್ ಮಾಡಲು ನಿರ್ಧರಿಸಿದೆ.
ಪಾಸಿಟಿವ್ ಪ್ರಕರಣ ದಾಖಲಾದರೂ, ಮನೆಯವರು ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ವರದಿಯಾಗುತ್ತಿದೆ. ಇದರಿಂದಾಗಿ ಕೋವಿಡ್ ವೈರಸ್ ಸಮುದಾಯಕ್ಕೆ ಹರಡಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಿಂದೆ ಬಳಸುತ್ತಿದ್ದ ಸೀಲ್‌ಡೌನ್ ಸೂತ್ರವನ್ನು ಅಳವಡಿಸಲು ಜಿಲ್ಲಾಡಳಿತ ಮುಂದಾಗಿದೆ.
ಆಕ್ಸಿ ಮೀಟರ್ ವಿತರಣೆ :
ಶಾಸಕ ಕೆ. ರಘುಪತಿ ಭಟ್ ಅವರ ಶಾಸಕರ ಅಭಿವೃದ್ಧಿ ನಿಧಿಯಿಂದ 10 ಲ.ರೂ. ವೆಚ್ಚದಲ್ಲಿ 1,000 ಆಕ್ಸಿಪಲ್ಸ್ ಮೀಟರ್‌ಗಳನ್ನು 35 ವಾರ್ಡ್ ಹಾಗೂ 19 ಗ್ರಾ.ಪಂ.ಗಳಿಗೆ ವಿತರಿಸಲಾಗಿದೆ. ರೋಬೊ ಸಾಫ್ಟ್ ಕಂಪೆನಿಯು ತನ್ನ ಸಿಎಸ್‌ಆರ್ ನಿಧಿಯಿಂದ 1,000 ಆಕ್ಸಿಪಲ್ಸ್ ಮೀಟರ್‌ಗಳನ್ನು ನೀಡಲಿದೆ. ಇವುಗಳನ್ನು ಕೊರೊನಾ ಲಕ್ಷಣವಿರದ ಹಾಗೂ ಹೋಂ ಐಸೊಲೇಶನ್‌ನಲ್ಲಿರುವ ರೋಗಿಗಳ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಲು ಬಳಸ ಬಹುದಾಗಿದೆ.
ಎಂಐಟಿಯಲ್ಲಿ ಕೇರ್ ಸೆಂಟರ್ :
ಕೋವಿಡ್ ಲಕ್ಷಣವಿರದ ಹಾಗೂ ಮನೆಯಲ್ಲಿ ಐಸೊಲೇಶನ್‌ಗೆ ಕಷ್ಟ ವಾದವರಿಗೆ ಅನುಕೂಲವಾಗುವಂತೆ ಮಣಿಪಾಲದ ಎಂಐಟಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಸುಮಾರು 300 ಬೆಡ್ ಹಾಕಲಾಗಿದ್ದು, ಇಲ್ಲಿ 24 ಗಂಟೆಯೂ ವೈದ್ಯಕೀಯ ಸೇವೆ ಸಿಗಲಿದೆ. ಊಟದ ವ್ಯವಸ್ಥೆಯನ್ನು ನೀಡಲಾಗುತ್ತದೆ. ಇಲ್ಲಿ ಸಿಗುವ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿದೆ. ಸೆಂಟರ್‌ಗೆ ಸೇರಲು ಬಯಸುವ ಕೋವಿಡ್ ರೋಗಿಗಳು ಕೋವಿಡ್ ಕೇರ್ ಕಾಲ್‌ಸೆಂಟರ್ ದೂ.ಸಂ. 7204789104 ಕರೆ ಮಾಡಿ ದಾಖಲಾತಿ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.