ಅಡುಗೆ ಮನೆಗೆ ಲಗ್ಗೆಯಿಟ್ಟ ಸ್ಮಾರ್ಟ್ ಪಾಟ್

ಶ್ರೀರಾಜ್ ವಕ್ವಾಡಿ, May 21, 2021, 7:11 PM IST

The smart appliances on this list, big and small, connect to voice … 20 of the Most Clever Smart Kitchen Appliances You Can Buy Online.

ಗೃಹಿಣಿಯರು ತಮ್ಮ ನಿತ್ಯದ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿಯೇ ಕಳೆಯುತ್ತಾರೆ. ಹಿಂದೆಲ್ಲಾ ಯಾವುದೇ ಮೆಷಿನರಿಗಳು ಇಲ್ಲದೇ ಒಲೆಯ ಮುಂದೆ ಹೊಗೆ ಎಳೆದುಕೊಂಡು ಕಷ್ಟಪಡಬೇಕಿತ್ತು. ಈಗೀಗ ಪ್ರತಿಯೊಂದು ಕ್ಷೇತ್ರಕ್ಕೂ ಸ್ಮಾರ್ಟ್ ನೆಸ್ ಲಗ್ಗೆಯಿಟ್ಟಿದೆ. ಇದರಿಂದಾಗಿ ಅಡುಗೆ ಮನೆಯನ್ನೂ ಬೆರಳ ತುದಿಯಲ್ಲೇ ನಿರ್ವಹಿಸಬಹುದು. ಗೃಹಿಣಿಯರ ಅಡುಗೆ ಕೆಲಸವನ್ನು ಸುಲಭವಾಗಿಸಲು ಲಭ್ಯವಿರುವ ಸ್ಮಾರ್ಟ್ ತಂತ್ರಜ್ಞಾನಗಳು ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ.

ಅಡುಗೆ ಬಳಕೆಯಾಗುವಂತಹ ಸಲಕರಣೆಗಳು ಆ್ಯಪ್‌ಗೆ ಜೋಡಣೆಯಾದರೆ ಕೆಲಸ ಸಲೀಸಾಗುತ್ತದೆ. ಈ ನಿಟ್ಟಿನಲ್ಲಿ ಇನ್‌ಸ್ಟಂಟ್‌ ಪಾಟ್‌ ನ್ನು ಪರಿಚಯಿಸಲಾಗಿದೆ. ಈ ಪಾಟ್  ಪ್ರೆಶರ್‌ ಕುಕರ್‌, ರೈಸ್‌ ಕುಕರ್‌, ಸ್ಟೀಮರ್‌, ಯೋಗ್ಹರ್ಟ್‌ ಮೇಕರ್‌, ಕೇಕ್‌ ಮೇಕರ್‌ ಹಾಗೂ ವಾರ್ಮರ್‌ ಆಗಿ ಬಳಸಬಹುದು. ಇದರ ಜತೆಗೆ ಮಸಾಲೆಗಳನ್ನು ಕೂಡ  ಹುರಿಯಬಹುದು. ಇನ್‌ ಸ್ಟಂಟ್‌ ಪಾಟ್‌ ವಿಶೇಷವೆಂದರೆ ಇದು ವೈಫೈ ಆಧಾರಿತವಾಗಿ ಚಾಲ್ತಿಯಲ್ಲಿರುತ್ತದೆ ಅಲ್ಲದೇ ಮೊಬೈಲ್ ಆ್ಯಪ್‌ ಗೆ ಜೋಡಣೆಯಾಗಿರುತ್ತದೆ.

ಸ್ಮಾರ್ಟ್ ಪಾಟ್ ನ ವಿಶೇಷತೆಗಳೇನು..?

ಅನ್ನ, ಮಾಂಸ ಸೇರಿದಂತೆ ಯಾವುದೇ ರೀತಿಯ ತರಕಾರಿಗಳನ್ನು ಕಡಿಮೆ ಸಮಯದಲ್ಲಿ ಬೇಯಿಸಲು ನೆರವಾಗುತ್ತದೆ.  ಇದರಿಂದ ಸಮಯದ ಉಳಿತಾಯವಾಗುವುದಲ್ಲದೇ 8 ಬಗೆಯ ಕೆಲಸಗಳನ್ನು ಒಂದೇ ಪಾಟ್ ನಲ್ಲಿ ಮಾಡಬಹುದು.  ಒಂದು ಟಚ್‌ ನಲ್ಲಿ 13 ಬಗೆಯ ಪ್ರೋಗ್ರಾಮ್‌ಗಳಿದ್ದು, ಸ್ವೀಟ್, ಖಾರದೊಂದಿಗೆ ಯಾವುದೇ ರೀತಿಯ ಅಡುಗೆಯನ್ನು ಕೂಡ ಮಾಡಬಹುದು. ಅಲೆಕ್ಸಾ ಮತ್ತು ವೈಫೈಗೆ ಜೋಡಣೆಯಾಗಿರುವ ಕಾರಣ ಎಲ್ಲಿಯೇ ಇದ್ದರೂ ಸ್ಮಾರ್ಟ್‌ ಫೋನ್‌ ಮೂಲಕ ನಿಯಂತ್ರಿಸಬಹುದು. ಅಲೆಕ್ಸಾ ಮೂಲಕವೂ ನಿರ್ದೇಶನಗಳನ್ನು ನೀಡಬಹುದು. ಅಡುಗೆ ಆಗುತ್ತಿರುವ ಬಗ್ಗೆ ಅಪ್‌ಡೇಟ್‌ ಪಡೆಯಬಹುದು. ಈ ಪಾಟ್ ನಲ್ಲಿ  ಒಂದು ಸಾವಿರಕ್ಕೂ ಅಧಿಕ ತಿನಿಸುಗಳನ್ನು ಮೊದಲೇ ಪ್ರೋಗ್ರಾಮ್‌ ಮಾಡಲಾಗಿದೆ.

ಇದನ್ನೂ ಓದಿ : ಸಂಪೂರ್ಣ ಲಾಕ್‌ಡೌನ್‌: ವಾಹನ ಸಂಚಾರ ಸ್ಥಬ್ದ

ಆನ್ಲೈನ್ ನಲ್ಲಿ ಖರೀದಿಸಬಹುದಾದ ಪಾಟ್ ಜೊತೆಗೆ  ಸ್ಟೇನ್‌ ಲೆಸ್‌ ಸ್ಟೀಲ್‌ ಸ್ಟೀಮ್‌ ರ‍್ಯಾಕ್‌, ಸೂಪ್‌ ಸ್ಪೂನ್‌, ಅಳತೆ ಕಪ್‌ ಗಳನ್ನು ನೀಡಲಾಗುತ್ತದೆ. ಇದರ ಕಾರ್ಯನಿರ್ವಹಣೆಗೆ 120ವ್ಯಾಟ್‌– 60ಎಚ್‌ ಝೆಡ್‌ ವಿದ್ಯುತ್‌ ಅಗತ್ಯವಿದೆ. ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಪಾಟ್ ನಲ್ಲಿ ಸೇಫ್ಟಿ ಲಾಕ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ ಉಚಿತ ಪಾಟ್‌ ಆ್ಯಪ್‌ ಇದ್ದು ನೂರಾರು ತಿನಿಸುಗಳ ತಯಾರಿಯನ್ನು ಅಳವಡಿಸಲಾಗಿದೆ. ಈ ಪಾಟ್ ನಲ್ಲಿ ಒಮ್ಮೆಗೆ ಆರು ಜನರಿಗೆ ಸಾಕಾಗುವಷ್ಟು ಅಡುಗೆ ಮಾಡಬಹುದು.  ಪಾಟ್‌ನ ಒಳಗಿರುವ ಸ್ಟೇನ್‌ಲೆಸ್‌ ಸ್ಟೀಲ್‌ನ ಭಾಗ ಹಲವು ವರ್ಷಗಳ ಕಾಲ ಬಾಳಿಕೆ ಬರುವುದಲ್ಲದೇ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಕೂಡ. ಬ್ಯಾಚುಲರ್ಸ್ ಹಾಗೂ ಕೆಲಸಕ್ಕೆ ಹೋಗುವವರಿಗೆ ತರಾತುರಿಯಲ್ಲಿ ಅಡಿಗೆ ಮಾಡಲು ಇದೊಂದು ಉಪಯುಕ್ತ ಸಾಧನ.

ದುರ್ಗಾ ಭಟ್ ಕೆದುಕೋಡಿ

ಇದನ್ನೂ ಓದಿ : SSLC ಆನ್‌ಲೈನ್‌ ಕಿರು ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ.. ಎಸ್‌.ಮಹೇಶ್‌

ಟಾಪ್ ನ್ಯೂಸ್

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.