ಆರೋಗ್ಯ ತಪಾಸಣೆ ಅಭಿಯಾನಕ್ಕೆ ಚಾಲನೆ
ರೋಗ್ಯ ಕಾರ್ಯಕರ್ತರು ಸಚಿವರಿಗೆ ಅಭಿಯಾನದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.
Team Udayavani, May 21, 2021, 8:40 PM IST
ಬೀದರ: ಕೋವಿಡ್ ಲಕ್ಷಣವುಳ್ಳವರು ತಪಾಸಣೆಯಿಂದ ಬಿಟ್ಟು ಹೋಗಬಾರದು ಎನ್ನುವ ಮಹತ್ವದ ಮನೆ-ಮನೆ ಭೇಟಿ ಆರೋಗ್ಯ ತಪಾಸಣೆ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ತಾಲೂಕಿನ ನಾಗೋರಾ ಗ್ರಾಮದಲ್ಲಿ ಗುರುವಾರ ವಿಧ್ಯುಕ್ ಚಾಲನೆ ನೀಡಿದರು.
ಶಾಸಕರಾದ ಬಂಡೆಪ್ಪ ಖಾಶೆಂಪುರ ಅವರೊಂದಿಗೆ ಸಚಿವರು ಗ್ರಾಮದ ರವೀಂದ್ರ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ನಾಗೋರಾ ಪಿಡಿಒ ಗಾಯತ್ರಿದೇವಿ ಹೊಸಮನಿ ಅವರ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಾದ ನಿರ್ಮಲಾ ಮತ್ತು ಪ್ರಮಿಳಾ ಅವರು, ರೆಡ್ಡಿ ಕುಟುಂಬದ ಸದಸ್ಯರಾದ ಶ್ರೀದೇವಿ, ಓಂಕಾರ, ನಿಖಲ್ ಅವರ ದೇಹದ ತಾಪಮಾನ ಮತ್ತು ಅವರ ಫಲ್ಸ್ ರೇಟ್ ಪರೀಕ್ಷಿಸಿ ಆರೋಗ್ಯ ತಪಾಸಣೆ ನಡೆಸಿದರು.
ವಾರದೊಳಗಡೆ ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು, ಗಂಟಲು ನೋವು ಇದ್ದರೆ, ದೇಹದ ತಾಪಮಾನ 38ಕ್ಕಿಂತ ಹೆಚ್ಚಿಗೆ ಇದ್ದರೆ ಅಂಥವರಿಗೆ ರ್ಯಾಟ್ ತಪಾಸಣೆ ನಡೆಸುತ್ತೇವೆ ಎಂದು ಇದೇ ವೇಳೆ ಆರೋಗ್ಯ ಕಾರ್ಯಕರ್ತರು ಸಚಿವರಿಗೆ ಅಭಿಯಾನದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ಅತ್ಯಂತ ಮಹತ್ವದ ಈ ಅಭಿಯಾನವು ಆಯಾ ಪಿಡಿಒ ನೇತೃತ್ವದಲ್ಲಿ ಬೀದರ ಜಿಲ್ಲಾದ್ಯಂತ ಎಲ್ಲ ಗ್ರಾಮಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಇದೆ ವೇಳೆ ಸಚಿವರು ತಿಳಿಸಿದರು. ನಾಗೋರಾ ಗ್ರಾಪಂ ವ್ಯಾಪ್ತಿಯ ಸಾತೋಳಿ, ಯಾಕತಪುರ, ಘೋಡಂಪಳ್ಳಿ, ನಾಗೋರಾ ಮತ್ತು ಮಿರ್ಜಾಪುರ ಗ್ರಾಮಗಳನ್ನು ಒಳಗೊಂಡು ಕೋವಿಡ್-19 ಸಹಾಯವಾಣಿ ಆರಂಭಿಸಿ ಉತ್ತಮ ಕಾರ್ಯ ಮಾಡಲಾಗುತ್ತಿದೆ ಎಂದು ಡಿಸಿ ರಾಮಚಂದ್ರನ್ ಆರ್ ತಿಳಿಸಿದರು.
ಗ್ರಾಪಂ ಕೋವಿಡ್ ಮಾಹಿತಿ: ನಾಗೋರಾದಲ್ಲಿ 2775 ಜನಸಂಖ್ಯೆ ಪೈಕಿ 7 ಜನರಿಗೆ, ಯಾಕತಪುರದಲ್ಲಿನ 3,234 ಜನಸಂಖ್ಯೆ ಪೈಕಿ ಮೂವರಿಗೆ ಮತ್ತು ಸಾತೋಳಿ ಗ್ರಾಮದ 2240 ಜನಸಂಖ್ಯೆ ಪೈಕಿ ಮೂವರಿಗೆ ಕೋವಿಡ್ ಪಾಜಿಟಿವ್ ಆಗಿರುವ ಬಗ್ಗೆ ಎಂದು ಜಿಪಂ ಸಿಇಒ ಜಹೀರಾ ನಸೀಮ್ ಅವರು ಸಚಿವರಿಗೆ ಮಾಹಿತಿ ನೀಡಿದರು.
ಸ್ಥಳದಲ್ಲೇ ರ್ಯಾಟ್ ಪರೀಕ್ಷೆ: ಮನೆ-ಮನೆ ಭೇಟಿ ಆರೋಗ್ಯ ತಪಾಸಣೆ ಬಳಿಕ ಸಚಿವರು, ಗ್ರಾಮದ ಗ್ರಂಥಾಲಯ ಪಕ್ಕದ ಜಾಗದಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣವಿರುವವರಿಗೆ ನಡೆಸುತ್ತಿದ್ದ ಕೋವಿಡ್ ರ್ಯಾಟ್ ತಪಾಸಣೆ ಗಮನಿಸಿದರು. ಟಿಎಚ್‌ಒ ಡಾ| ಸಂಗಾರೆಡ್ಡಿ, ಎಂಎಲ್‌ಎಚ್‌ವಿ ಇಮಾನ್ವೆ ಮತ್ತು ಎಎನ್‌ಎಂ ಝರೆಮ್ಮ ಅವರು ಸ್ಥಳದಲ್ಲಿಯೇ ಕೆಲವರಿಗೆ ರ್ಯಾಟ್ ಪರೀಕ್ಷೆ ನಡೆಸಿದರು.ಈ ಸಂದರ್ಭದಲ್ಲಿ ಎಸ್‌ಪಿ ನಾಗೇಶ ಡಿ.ಎಲ್., ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ಡಿವೈಎಸ್‌ಪಿ ಬಸವರಾಜ ಹೀರಾ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್., ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ, ವೈದ್ಯಾಧಿಕಾರಿ ಡಾ| ಮಹೇಶ ಬಿರಾದಾರ, ನಾಗೋರಾ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಉಪಾಧ್ಯಕ್ಷ ಶಿವಕುಮಾರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.