ತುರ್ತು ಕಾಮಗಾರಿ ಕೈಗೊಳ್ಳಲು ಸರ್ಕಾರ ವಿಫಲ
Team Udayavani, May 21, 2021, 9:03 PM IST
ಭಟ್ಕಳ: ಕಳೆದ ಸುಮಾರು ಐದು ದಿನಗಳ ಹಿಂದೆ ಅಬ್ಬರಿಸಿದ ಚಂಡಮಾರುತದಿಂದ ಬಂದರ-ತಲಗೋಡ ರಸ್ತೆ ಕೊಚ್ಚಿಕೊಂಡು ಹೋಗಿ ಅಪಾಯದಂಚಿನಲ್ಲಿದ್ದರೂ ಸಹ ಇನ್ನೂ ತನಕ ತುರ್ತು ಕಾಮಗಾರಿಯನ್ನು ಕೈಗೊಳ್ಳಲು ಸರಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಂಕಾಳ ಎಸ್. ವೈದ್ಯ ಅವರು ದೂರಿದ್ದಾರೆ.
ಗುರುವಾರ ಸಂಜೆ ಇಲ್ಲಿನ ಮಾವಿನಕುರ್ವೆ ಬಂದರಿನಲ್ಲಿ ಚಂಡಮಾರುತದಿಂದ ಆದ ಹಾನಿಯನ್ನು ಪರಿಶೀಲಿಸಿದ ನಂತರ ಮಾತನಾಡಿದರು. ಚಂಡಮಾರುತದಿಂದ ರಸ್ತೆ ಹಾನಿಯಾಗಿ ಸುಮಾರು ಐದು ದಿನಗಳೇ ಕಳೆದು ಹೋಗಿದೆ. ತಕ್ಷಣ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಸರಕಾರ ಇನ್ನೂ ಮೀನಮೇಷ ಮಾಡುತ್ತಿರುವುದು ಸರಿಯಲ್ಲ.
ಕಾಮಗಾರಿಗೆ ತುರ್ತಾಗಿ ದೊಡ್ಡ ದೊಡ್ಡ ಕಲ್ಲುಗಳನ್ನು ಇಲ್ಲವೇ ಸಿಮೆಂಟ್ ಕಾಂಕ್ರೀಟನ್ನಾದರೂ ಬಳಸಬಹುದೇ ವಿನಃ ಇಂಥ ಸಂದರ್ಭದಲ್ಲಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸರಕಾರ ದೂಡಬಾರದು ಎಂದೂ ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಕಡಲಕೊರೆತ ಪ್ರದೇಶಕ್ಕೆ ಹಾನಿ ವೀಕ್ಷಿಸಲು ಇಡೀ ಸರಕಾರವೇ ಬಂದು ಹೋಗಿದ್ದು 24 ಗಂಟೆಗಳಲ್ಲಿ ಹಾನೀಗೀಡಾದ ಪ್ರದೇಶದಲ್ಲಿ ಅಗತ್ಯ ಕಾಮಗಾರಿ ನಡೆಸಬೇಕಾಗಿರುವುದು ಸರಕಾರದ ಜವಾಬ್ದಾರಿಯ ನಡೆಯಾಗಿತ್ತು. ಆದರೆ ಇನ್ನೂ ಕಾಮಗಾರಿ ಮಾಡದೇ ಇರುವುದು ಕಡಲತೀರವಾಸಿಗಳು ಸಂಕಷ್ಟದಲ್ಲಿರುವಂತೆ ಮಾಡಿದೆ. ಎಷ್ಟೋ ಜನರು ಮನೆಗಳಿಗೆ ನೀರು ನುಗ್ಗುತ್ತವೆಂಬ ಭೀತಿಯಲ್ಲೇ ಇನ್ನೂ ಕೂಡಾ ಕಾಲ ಕಳೆಯುತ್ತಿದ್ದಾರೆ.
ಅತಿವೃಷ್ಟಿ ಹಾನಿ ಉಂಟಾದ ಪ್ರದೇಶದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾ ಧಿಕಾರಿಯವರ ಖಾತೆಯಲ್ಲಿ ಸಾಕಷ್ಟು ಹಣವಿರುತ್ತದೆ. ಈ ಹಣವನ್ನು ಬಳಸಿಕೊಂಡು ತುರ್ತು ಕಾಮಗಾರಿಯನ್ನು ಹಾನಿಯಾದ ಮರುದಿನವೇ ಆರಂಭಿಸಬೇಕಿತ್ತು. ಆದರೆ ಆ ಕೆಲಸ ಮಾಡುವಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದ ಅವರು ತಕ್ಷಣ ಜನರ ಸಮಸ್ಯೆ ಬಗೆಹರಿಯಬೇಕು. ಸರಕಾರ ಸ್ಪಂದಿಸಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.
ಈ ಪ್ರದೇಶದಲ್ಲಿ ಮತ್ತೇನಾದರೂ ಹಾನಿ ಉಂಟಾದರೆ ಇದಕ್ಕೆ ಜನಪ್ರತಿನಿ ಧಿಗಳು, ಸರಕಾರವೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಜನರಿಗೆ ತೊಂದರೆ ಆಗುವುದನ್ನು ಸರಕಾರ ಕೂಡಲೇ ತಪ್ಪಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿಪಂ ಮಾಜಿ ಸದಸ್ಯ ಅಬ್ದುರ್ ರಹೀಂ ಶೇಖ್, ಮೀನುಗಾರರ ಮುಖಂಡರಾದ ವಸಂತ ಖಾರ್ವಿ, ರಮೇಶ ಖಾರ್ವಿ, ಶ್ರೀನಿವಾಸ ಖಾರ್ವಿ, ರಾಜೇಂದ್ರ ಖಾರ್ವಿ ಇದ್ದರು.
ಮೀನುಗಾರರ ಕಡೆಗಣನೆ ಸರಿಯಲ್ಲ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಘೋಷಿಸಿದ ಲಾಕಡೌನ್ ಪ್ಯಾಕೇಜ್ ಸಮಂಜಸವಾಗಿಲ್ಲ. ಸರಕಾರ ಪರಿಹಾರದ ಘೋಷಣೆ ವೇಳೆ ಮೀನುಗಾರರನ್ನು ಕಡೆಗಣಿಸಿರುವುದು ಸರಿಯಲ್ಲ. 2020ರಲ್ಲಿ ಘೋಷಿಸಿದ ಪರಿಹಾರದ ಮೊತ್ತವೇ ಇನ್ನೂ ತನಕ ಅನೇಕರಿಗೆ ಪಡೆಯಲು ಸಾಧ್ಯವಾಗಿಲ್ಲ, ಮತ್ತೆ ಘೋಷಣೆ ಮಾಡಿದ್ದೂ ಸಹ ಸರಳೀಕರಣ ಮಾಡದಿದ್ದರೆ ಕನಿಷ್ಟ ತಲುಪಬೇಕಾದವರಿಗೂ ತಲುಪುದಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.