ಪಶುಸಂಗೋಪನೆ ಸಿಬ್ಬಂದಿಗೆ ಲಸಿಕೆಗೆ ಚೌವ್ಹಾಣ್ ಮನವಿ
Team Udayavani, May 22, 2021, 1:59 PM IST
ಬೆಂಗಳೂರು: ಪಶುಸಂಗೋಪನೆ ಇಲಾಖೆ ಅಗತ್ಯಸೇವೆಗಳಲ್ಲಿ ಒಂದಾಗಿರುವುದರಿಂದಜಾನುವಾರುಗಳ ಆರೋಗ್ಯ ತaಪಾಸಣೆ ಮತ್ತು ಚಿಕಿತ್ಸೆಗೆ ಪಶುವೈದ್ಯರು ಹಾಗೂ ಸಿಬ್ಬಂದಿ ಪಶುಪಾಲಕರ, ರೈತರ ಮನೆ ಬಾಗಿಲಿಗೆ ತೆರಳಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರ ನೇರ ಸಂಪರ್ಕಕ್ಕೆ ಬರುವ ಎಲ್ಲಾ ಸಿಬ್ಬಂದಿಗೆ ಆದ್ಯತೆಯಮೇಲೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಸಚಿವ ಪ್ರಭುಚವ್ಹಾಣ್ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಸುಧಾಕರಮತ್ತು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಪತ್ರ ನೀಡುವುದರ ಮೂಲಕ ಮನವಿಮಾಡಿದ್ದಾರೆ.
ಕೋವಿಡ್ ಭೀತಿಯ ನಡುವೆಯೂ ಇಲಾಖೆಯ ಸಿಬ್ಬಂದಿ ಗ್ರಾಮಗಳಲ್ಲಿ ರೈತರ ಮನೆ-ಮನೆಗೆಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆನೀಡುತ್ತಿದ್ದಾರೆ. ಅವರ ಹಾಗೂ ಅವರ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿಲಸಿಕೆ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ ಎಂದುಸಚಿವರು ಹೇಳಿದ್ದಾರೆ.
ಅಲ್ಲದೇ ಕರ್ನಾಟಕ ಹಾಲು ಮಹಾ ಮಂಡಳಿಯ ಎಲ್ಲಘಟಕದ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಹಾಗೂ 14 ಜಿಲ್ಲಾ ಒಕ್ಕೂಟಗಳ ಸಿಬ್ಬಂದಿಗಳಿಗೆ ಹಾಗೂ 14500 ಹಾಲು ಉತ್ಪಾದಕರ ಹಕಾರ ಸಂಘಗಳ ಸಿಬ್ಬಂದಿಗೂ ಸಹ ಲಸಿಕೆ ಪಡೆಯುವಂತೆ ಸೂಚಿಸಿದ್ದಾರೆ.
ರಾಜ್ಯದ8 ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ಮೈಸೂರು, ಚಿಕ್ಕಬಳ್ಳಾಪುರ,ರಾಯಚೂರು, ಬೆಳಗಾವಿ,ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿಲಸಿಕೆ ಹಾಕುವ ಕಾರ್ಯಪ್ರಗತಿಯಲ್ಲಿದೆ. ಉಳಿದ 22 ಜಿÇÉೆಗಳಲ್ಲಿಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕಾದಅಗತ್ಯವಿದ್ದು ತಕ್ಷಣಕ್ಕೆ ಲಸಿಕೆಯ ವ್ಯವಸ್ಥೆಮಾಡುವಂತೆ, ಮುಖ್ಯಮಂತ್ರಿ,,ಮುಖ್ಯಕಾರ್ಯದರ್ಶಿ ಹಾಗೂ ಆರೋಗ್ಯಇಲಾಖೆಯ ಸಚಿವರನ್ನುಕೋರಿದ್ದಾರೆ.
ಈ ಕುರಿತಾಗಿ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರಿಗೆ ಸೂಚಿಸಲಾಗಿದ್ದು ಜಿಲ್ಲಾವಾರು ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪಶುಸಂಗೋಪನೆ ಇಲಾಖೆಯ ಎಲ್ಲ ಸಿಬ್ಬಂದಿಗೆ ಲಸಿಕೆಯ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.