ಗದುಗಿನ ಕಾಳೆ ಶಂಕರಗೆ “ಹರಿಶ್ಚಂದ್ರ’ ಕಾಯಕ

ಜೀವದ ಹಂಗು ತೊರೆದು ನಿತ್ಯವೂ ಹತ್ತಾರು ಶವ ಸಂಸ್ಕಾರ,ಕೋವಿಡ್‌ ಸಂಕಷ್ಟದಲ್ಲಿ ಸವಾಲು ಮೀರಿ ಸೇವೆ

Team Udayavani, May 22, 2021, 4:33 PM IST

ಗದುಗಿನ ಕಾಳೆ ಶಂಕರಗೆ “ಹರಿಶ್ಚಂದ್ರ’ ಕಾಯಕ

ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ಕುಟುಂಬ ಸದಸ್ಯರೇ ದೂರ ನಿಂತಿರುವಾಗ ಈತ ಮಾತ್ರ ತನ್ನ ಜೀವದ ಹಂಗು ತೊರೆದು ಕೋವಿಡ್‌ ಸೋಂಕಿನಿಂದ ಮೃತಪಟ್ಟವರಅಂತ್ಯ ಸಂಸ್ಕಾರ ನಡೆಸಿರುವ ಈತಬೂದಿಬಡುಕ ಅಪ್ಪಟ ಬೋಳೆ ಶಂಕರ.

ಸುಮಾರು ಇನ್ನೂರು ಕಿ.ಮೀ.ದೂರದ ಗದಗ ನಗರದಿಂದ ಬಸನವಾಡು ವಿಜಯಪುರಕ್ಕೆ ಬಂದು ಶವ ಸಂಸ್ಕಾರ, ಸ್ಮಶಾನ ಕಾಯಕ ಮಾಡುತ್ತಿರುವ ಶಂಕರ ಕಾಳೆ ಬದುಕು ಸಿನಿಮಾ ಚಿತ್ರಣದಂತಿದೆ. ಗದಗ ಮೂಲದ ಶಂಕರ ಕಾಳೆ ಕುಟುಂಬದಲ್ಲಿ ಹಲವರು ಹರಿಶ್ಚಂದ್ರ ಕಾಯಕ ಮಾಡುತ್ತಿದ್ದಾರೆ. ಚಿಕ್ಕಪ್ಪ ಮಲ್ಲಿಕಾರ್ಜುನ ಕಾಳೆ, ತಮ್ಮ ನೀಲಕಂಠ ಕಾಳೆ ಇವರೂ ಗದಗ ಮುಕ್ತಿ ಧಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರೋಣ ಪಟ್ಟಣದಲ್ಲಿ ಹೈಸ್ಕೂಲ್‌ ಮುಗಿಸಿದ ಶಂಕರ ಕಾಳೆ, ದುಡಿಮೆಗೆ ಭೂಮಿ ಸೇರಿದಂತೆ ಆರ್ಥಿಕ ಸಂಪನ್ಮೂಲ ತಂದು ಕೊಡಲು ಇತರೆ ಯಾವ ಆಸ್ತಿ ಇಲ್ಲ.ಹೀಗಾಗಿ ಬಾಲ್ಯದಲ್ಲಿ ಚಿಕ್ಕಪ್ಪನೊಂದಿಗೆ ಸ್ಮಶಾನಕಾಯುವ ಕಾಯಕವನ್ನು ರೂಡಿಸಿಕೊಂಡಿದ್ದ ಶಂಕರಗೆ, ಬದುಕಿನ ಏರಿಳಿತದ ಸಂದರ್ಭದಲ್ಲಿಅನ್ನಹಾಕುತ್ತಿರುವುದು ಅದೇ ಹರಿಶ್ಚಂದ್ರ ಕಾಯಕ.

ವಿಜಯಪುರ ನಗರದ ರಾಜಾರಾಂಗಂಗಾರಾಂ ದೇವಗಿರಿ ಸ್ಮರಣಾರ್ಥಪೊಲೀಸ್‌ ಮೈದಾನದ ಪಕ್ಕದಲ್ಲಿರುವ ಸ್ಮಶಾನದಲ್ಲಿ ಕಳೆದ ಮೂರುವರೆ ವರ್ಷದಿಂದ ಶವ ಸಂಸ್ಕಾರ ಮಾಡುವ ಕಾಯಕಮಾಡುತ್ತಿದ್ದಾನೆ. ಸ್ಮಶಾನ ಸಮಿತಿ ಮಾಸಿಕ 6 ಸಾವಿರ ರೂ. ಕೂಲಿ ಜೊತೆಗೆ ದೇವಗಿರಿಸ್ಮಶಾನ ಸಮಿತಿಯ ಮುಖ್ಯಸ್ಥ ಉಮೇಶ ಅವರು ಪ್ರತ್ಯೇಕವಾಗಿ 3 ಸಾವಿರ ರೂ. ಹಣ ನೀಡುತ್ತಿದ್ದಾರೆ. ಬಿಪಿಎಲ್‌ ಕಾರ್ಡ್‌ನ ಆಹಾರ ಧಾನ್ಯ ಸಿಗುತ್ತದೆ. ಸ್ಮಶಾನದಲ್ಲೇ ಗೂಡಿನಂಥಮನೆ ಇದ್ದು, ಬಾಡಿಗೆ ಇಲ್ಲದೇ ವಾಸಕ್ಕೆ ಅನುಕೂಲವಾಗಿದೆ. ಇರುವ ಏಕೈಕ ಮಗಳು ಖುಷಿ ಮೂರನೇ ತರಗತಿ ಓದುತ್ತಿದ್ದು,ಆಕೆಯ ಶಿಕ್ಷಣದ ಹೊಣೆಯನ್ನು ಉಮೇಶವಹಿಸಿಕೊಂಡಿದ್ದಾರೆ. ಹೀಗಾಗಿ ಪತ್ನಿ ಶಾಂತಾ ಜೊತೆ ಶಂಕರ ಕುಟುಂಬ ನೆಮ್ಮದಿಯನೆಲೆ ಕಂಡುಕೊಂಡಿದ್ದರೂ ಆತಂಕದಲ್ಲೇ ಜೀವಿಸುವುದು ಅನಿವಾರ್ಯವಾಗಿದೆ.

ಹಿಂದೆಲ್ಲ ತಿಂಗಳಲ್ಲಿ ಹತ್ತಾರು ಶವ ಸಂಸ್ಕಾರ ನಡೆಯುತ್ತಿದ್ದರೆ, ಕೋವಿಡ್‌ನ ಈ ಸಂದರ್ಭದಲ್ಲಿ ದಿನವೂಹತ್ತಾರು ಶವ ಸಂಸ್ಕಾರ ಮಾಡುವುದುಅನಿವಾರ್ಯವಾಗಿದೆ. ಕೋವಿಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಅಗತ್ಯ ಇರುವ ಅದರಲ್ಲೂ ಶವ ದಹನಕ್ಕಾಗಿ ಕಟ್ಟಿಗೆಹಾಗೂ ಇತರೆ ವಸ್ತುಗಳನ್ನೆಲ್ಲ ಶಂಕರನೇ ಹೊಂದಿಸಿಕೊಳ್ಳುತ್ತಿದ್ದಾನೆ. ವಾರದ ಏಳುದಿನವೂ ಹಗಲು-ರಾತ್ರಿ ಎನ್ನದೇ ಅಂತ್ಯಸಂಸ್ಕಾರ ಕಾಯಕ ಮಾಡುತ್ತಿದ್ದಾರೆ ಶಂಕರ.

ಪ್ರಸ್ತುತ ಕೋವಿಡ್‌ ಆತಂಕದ ಸಂದರ್ಭದಲ್ಲಿ ಕುಟುಂಬ ಸದಸ್ಯರೇತಮ್ಮವರ ಶವಗಳನ್ನು ಮುಟ್ಟದೇ ದೂರನಿಂತಿರೂ ಶಂಕರ ಮಾತ್ರ ಪಿಪಿಇ ಕಿಟ್‌ಸೇರಿದಂತೆ ಯಾವ ಸುರಕ್ಷತಾ ಸಾಧನಗಳಿಲ್ಲದೇ ಜೀವದ ಹಂಗು ತೊರೆದು ಶವಸಂಸ್ಕಾರ ಮಾಡುತ್ತಿದ್ದಾರೆ. ಈಚೆಗೆ ಹೆಚ್ಚಿನ ಸಾವುಗಳಿಂದಾಗಿ ಒತ್ತಡ ಹೆಚ್ಚುತ್ತಿರುವ ಕಾರಣ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಸಮಿತಿ ಶವ ಸಂಸ್ಕಾರಕ್ಕೆ ಅವಕಾಶಕಲ್ಪಿಸಿರುವುದು ಶಂಕರ ಕೊಂಚ ನೆಮ್ಮದಿಯನಿದ್ದೆ ಮಾಡಲು ಅವಕಾಶ ಕಲ್ಪಿಸಿದೆ.

ಆದರೆ ಕೋವಿಡ್‌ ಸೋಂಕಿತ ಶವಗಳ ಸಂಸ್ಕಾರದ ಸಂದರ್ಭದಲ್ಲಿ ಪಿಪಿಇ ಕಿಟ್‌ ನೀಡದಿದ್ದರೂ ಶಂಕರ ಜೀವದ ಹಂಗು ತೊರೆದು ಶವ ಸಂಸ್ಕಾರ ಮಾಡುತ್ತಿದ್ದಾರೆ. ಸ್ಮಶಾನದ ಹೆಸರಿನಲ್ಲಿ ಆಂಬ್ಯುಲೆನ್ಸ್‌ ಸಿಬ್ಬಂದಿ ಮೃ‌ತರ ಸಂಬಂಧಿಗಳಿಂದ 20 ಸಾವಿರಕ್ಕೂ ಹೆಚ್ಚು ಹಣ ಪಡೆಯುವುದಕ್ಕೆ ಶಂಕರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರೀತಿಗಾಗಿ ಸರ್ಕಾರಿ ಉದ್ಯೋಗ ತೊರೆದ ಶಂಕರ!  :

ಹೀಗೆ ಹರಿಶ್ಚಂದ್ರ ಕಾಯಕದ ಮೂಲಕ ಸತ್ಯನಿಷ್ಠೆಯ ಸೇವೆ ಮಾಡುತ್ತಿರುವ ಶಂಕರ ಕಾಳೆ ಸರ್ಕಾರಿ ನೌಕರನಾಗಿದ್ದ ಎಂಬ ಮಾತು ಅಚ್ಚರಿ ಮೂಡಿಸಿದರೂ ಸತ್ಯ. ಗದಗ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಆತ ಮೇಲ್ವರ್ಗದ ಯುವತಿಯನ್ನು ಪ್ರೀತಿಸಿ ಮದುವೆಯಾದ. ಜಾತಿಯ ಕಾರಣಕ್ಕೆ 12 ವರ್ಷಗಳ ಹಿಂದೆ ನೌಕರಿ ಸಹಿತ ಊರನ್ನೇ ತೊರೆದ. ಊರೂರು ಅಲೆದ ನಂತರ ಕಳೆದ 4 ವರ್ಷಗಳಿಂದ ವಿಜಯಪುರ ನಗರಕ್ಕೆ ಬಂದು ಸ್ಮಶಾನ ಕಾಯುವ, ಶವ ಸಂಸ್ಕಾರ ಮಾಡುವ ಕಾಯಕ ಮಾಡುತ್ತಿದ್ದಾರೆ. ಆದರೆ ಇದಕ್ಕಾಗಿ ಎಂದೂ ಪಶ್ಚತ್ತಾಪ ಇಲ್ಲದ ಅವರು, ಇದ್ದುದರಲ್ಲೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಕೋವಿಡ್‌ ಸೋಂಕಿತರು ಮೃತಪಟ್ಟರೆ ಆಂಬ್ಯುಲೆನ್ಸ್‌ ಸಿಬ್ಬಂದಿ ಸ್ಮಶಾನದ ಹೆಸರಿನಲ್ಲಿ 20 ಸಾವಿರ ರೂ. ಪಡೆಯುತ್ತಿದ್ದು, ಶವದ ಮೇಲೆ ವ್ಯಾಪಾರ ಮಾಡುವ ಕ್ರಮ ಸರಿಯಲ್ಲ. ಶವ ಸಂಸ್ಕಾರದಸಂದರ್ಭದಲ್ಲಿ ಖಾಸಗಿಯಾಗಿ ನನಗೆಪಿಪಿಇ ಕಿಟ್‌ ಸಿಗುವುದಿಲ್ಲ, ಹೀಗಾಗಿಜಿಲ್ಲಾಡಳಿತ ಶವ ಸಂಸ್ಕಾರಕ್ಕೆ ಬರು ವಾಗ ನನಗೂ ಒಂದು ಪಿಪಿಇ ಕಿಟ್‌ ತರುವು ದನ್ನು ಕಡ್ಡಾಯಗೊಳಿಸಲಿ ಸಾಕು.– ಶಂಕರ ಕಾಳೆ ಸ್ಮಶಾನ ಕಾಯಕ ಜೀವಿ

ಶಂಕರ ನಮ್ಮಲ್ಲಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾನೆ. ಕೋವಿಡ್‌ ಸಂದರ್ಭದಲ್ಲಿ ಆತನ ಸುರಕ್ಷತೆಗಾಗಿ ಹೆಚ್ಚಿನ ಗಮನ ನೀಡುವಂತೆ ಸೂಚಿಸಿದ್ದೇವೆ. ಕಾಲ ಕಾಲಕ್ಕೆ ಆತನ ಆರೋಗ್ಯಪರೀಕ್ಷೆ ಮಾಡಿಸುತ್ತಿದ್ದು, ನಮ್ಮಿಂದ ಸಾಧ್ಯವಿರುವ ಎಲ್ಲ ಸುರಕ್ಷತಾ ಕ್ರಮಕೈಗೊಂಡಿದ್ದೇವೆ. ಪಿಪಿಇ ಕಿಟ್‌ಮುಕ್ತವಾಗಿ ನಮಗೆ ದೊರೆಯದ ಕಾರಣ ಶವ ಸಂಸ್ಕಾರಕ್ಕೆ ಬರುವಾಗನಮ್ಮ ಸಿಬ್ಬಂದಿಗೆ ಪಿಪಿಇ ಕಿಟ್‌ತರುವುದನ್ನು ಕಡ್ಡಾಯ ಮಾಡಬೇಕು.- ಉಮೇಶ ದೇವಗಿರಿ, ಅಧ್ಯಕ್ಷ, ದೇವಗಿರಿ ಸ್ಮಾರಕ ಸ್ಮಶಾನ ಸಮಿತಿ

 

-ಜಿ.ಎಸ್‌. ಕಮತರ

ಟಾಪ್ ನ್ಯೂಸ್

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.